ಒಂದು ವಿಶೇಷ ಟೆಕ್ನಿಕ್ ಬಳಸಿ ಪೆಟ್ರೋಲ್ ಖರ್ಚು ಅರ್ಧಕ್ಕೆ ಇಳಿಸಿದ್ದಾರೆ ಈ ವ್ಯಕ್ತಿ : ಸಿ.ಎಂ ಯೋಗೀಜೀ ಕಡೆಯಿಂದ ಪುರಸ್ಕಾರ ಕೂಡ ಪಡೆದಿದ್ದಾರೆ..!

ಸದ್ಯ ಭಾರತದಲ್ಲಿ ಪೆಟ್ರೋಲ್ ಬೆಲೆ ಶತಕ ದಾಟಿದ್ದು ನಿಮಗೆಲ್ಲ ಗೊತ್ತೇ ಇರುವ ವಿಚಾರ. ಸಧ್ಯಕ್ಕಂತೂ ಪೆಟ್ರೋಲ್, ಡೀಸೆಲ್ ಬೆಲೆ ಇಳಿಯುವ ಯಾವ ಲಕ್ಷಣಗಳು ಕಾಣುತ್ತಿಲ್ಲ, ಆದರೆ ಹೇಗಾದರೂ ಮಾಡಿ ಪೆಟ್ರೋಲ್ ಖರ್ಚು ಕಡಿಮೆ ಮಾಡಬೇಕೆಂದು ಜನರು ಸಾರ್ವಜನಿಕ ಸಾರಿಗೆಗಳ ಮೊರೆ ಹೋಗುತ್ತಿರುವುದು ಒಂದೆಡೆಯಾದರೆ, ಮತ್ತೊಂದೆಡೆ ಒಂದೇ ಬೈಕ್ ನಲ್ಲಿ ಇಬ್ಬಿಬ್ಬರು ಪ್ರಯಾಣಿಸುವ ಮೂಲಕವು ಪೆಟ್ರೋಲ್ ಉಳಿಸುವ ಪ್ರಯತ್ನ ಮಾಡುತ್ತಿದ್ದಾರೆ.

ಈ ವಿಷಯ ನಿಮಗೆಲ್ಲ ತಿಳಿದಿರಬಹುದು, ಆದರೆ ಇಲ್ಲೊಬ್ಬ ವ್ಯಕ್ತಿ ತನ್ನ ಗಾಡಿಗೆ ಇಂದು ಹೊಸ ಇನ್ವೆನ್ಷನ್ ಮಾಡಿ ಅರ್ಧದಷ್ಟು ಪೆಟ್ರೋಲ್ ಖರ್ಚು ಕಡಿಮೆ ಮಾಡಿದ್ದಾನೆ ಹಾಗಾದರೆ ಬನ್ನಿ ನೋಡೋಣ ಆ ವ್ಯಕ್ತಿ ಅದೆಂತಹ ಟೆಕ್ನಿಕ್ ಬಳಸಿದ್ದಾರೆ ಎಂದು ನೋಡೋಣ…

ಭಾರತದಲ್ಲಿ ಅತೀ ಹೆಚ್ಚು ಜನರು ಬೈಕ್, ಕಾರು ಅಥವಾ ಇನ್ನಿತರೇ ಯಾವುದೇ ವಾಹನಗಳಾಗಲಿ ಮೊದಲು ಮೈಲೇಜ್ ಹಾಗೂ ಪಿಕ್ ಅಪ್ ಚೆಕ್ ಮಾಡಿಯೇ ಖರೀದಿಸುತ್ತಾರೆ. ಇದಷ್ಟೇ ಅಲ್ಲದೇ ಗಾಡಿ ಖರೀದಿಸಿದ ಮೇಲೆ ಹಲವು ಟೆಕ್ನಿಕ್ (ಕಠಿಣ ಪರಿಸ್ಥಿತಿಗಳಲ್ಲಿ ಮಾಡುವ ಹೊಸ ಹೊಸ ಇನ್ವೆನ್ಷನ್) ಬಳಸಿ ಇನ್ನೂ ಕಡಿಮೆ ಪೆಟ್ರೋಲ್ ಖರ್ಚು ಬರುವಂತೆ ಮಾಡುವ ಬುದ್ಧಿವಂತರು ಇದ್ದಾರೆ.

ಉತ್ತರಪ್ರದೇಶದ ವಿವೇಕ್ ಪಟೇಲ್ ಎಂಬ ವ್ಯಕ್ತಿಯೇ ಇಂತಹದೊಂದು ಟೆಕ್ನಿಕ್ ಬಳಸಿ ಪೆಟ್ರೋಲ್ ಉಳಿಸಿರುವವರು, ಇವರು ತಮ್ಮ ದ್ವಿಚಕ್ರ ವಾಹನದಲ್ಲಿನ ಫ್ಯೂಯ್ಲ್ ಇಂಜೆಕ್ಷನ್ ನಲ್ಲಿ ಕೆಲವು ಬದಲಾವಣೆ ಮಾಡಿದ್ದಾರೆ, ಅದೇನೆಂದರೆ ಕಾರ್ಬೋರೇಟರ್ ಜೆಟ್ ಎಂಬ ವಸ್ತು ಬಳಸಿ ಪೆಟ್ರೋಲ್ ಖರ್ಚನ್ನು ಅರ್ಧಕ್ಕೆ ಇಳಿಸಿದ್ದಾರೆ.

ಇವರ ಈ ಟೆಕ್ನಿಕ್ ಅನ್ನು ಪ್ರಮಾಣಿಕರಣ ಮಾಡಲು ಆಟೋಮೋಬೈಲ್ ಸೆಕ್ಟರ್ ನ ಸ್ಪೆಷಲಿಸ್ಟ್ ಗಳ ಹತ್ತಿರ ಕಳುಹಿಸಲಾಗಿದೆ, ಅಷ್ಟೇ ಅಲ್ಲದೇ ಈ ಟೆಕ್ನಿಕನ್ನು ಪೇಟೆಂಟ್ ಮಾಡಿಕೊಳ್ಳಲು ಕೂಡ ಮಾತುಗಳು ನಡೆದಿವೆ..! ಕೌಷಾಂಬಿ ನಗರದ ನಿವಾಸಿ ವಿವೇಕ್ ಪಟೇಲ್ ರ ಈ ಒಂದು ಟೆಕ್ನಿಕ್ ಸದ್ಯ ಹಲವು ಜನರಿಗೆ ಉಪಯೋಗಕ್ಕೆ ಬಂದಿದೆ.

ಸಂಗಮನಗರದ ಘುಮನಗಂಜ್ ನಿವಾಸಿಯಾಗಿರುವ, ಅಂಕುಶ್ ಕುಮಾರ್ ಅವರು ಹೇಳುವ ಪ್ರಕಾರ, ಅವರ ಸ್ಕೂಟಿ ಇದೆ ವರ್ಷದ ಮೇ 6 ರ ವರೆಗೆ ಲೀಟರ್ ಗೆ ಕೇವಲ 40 ಕಿಲೋಮೀಟರ್ ಮೈಲೇಜ್ ನೀಡುತ್ತಿತ್ತಂತೆ, ಈ ಟೆಕ್ನಿಕ್ ಬಳಸಿದ ನಂತರ ಇವರ ಸ್ಕೂಟಿ ಪ್ರತಿ ಲೀಟರ್ ಗೆ 75 ರಿಂದ 80 ಕಿಲೋಮೀಟರ್ ಮೈಲೇಜ್ ನೀಡುತ್ತಿದೆಯಂತೆ..!

ಇಷ್ಟೇ ಅಲ್ಲದೇ ಚೌಪಟಕಾ ನಿವಾಸಿ ಸಂತೋಷ ಅವರ ಬೈಕ್ ಲೀಟರ್ ಗೆ 50 ಕಿಲೋಮೀಟರ್ ಮೈಲೇಜ್ ನೀಡುತ್ತಿತ್ತಂತೆ, ಆದರೆ ಇವರಿಂದ ಈ ಟೆಕ್ನಿಕ್ ಅಳವಡಿಸಿಕೊಂಡ ನಂತರ ಇವರ ಬೈಕ್ ಈಗ ಬರೋಬ್ಬರಿ 100 ಕಿಲೋಮೀಟರ್ ಮೈಲೇಜ್ ನೀಡುತ್ತಿದೆಯಂತೆ..! ಕೌಷಂಬಿ ಗ್ರಾಮದ ಪೀಪರಿ ಗುಡ್ಡದಲ್ಲಿ ವಾಸಿಸುತ್ತಿರುವ ವಿವೇಕ್ ರವರು ತಮ್ಮ ನಿತ್ಯ ಜೀವನ ನಡೆಸಲು ಮನೆ ಹಾಗೂ ಅಂಗಡಿಗಳ ಶಟ್ರರ್ಸ್ ಹಚ್ಚುವ ಕೆಲಸ ಮಾಡುತ್ತಾರೆ.

ಪೆಟ್ರೋಲ್ ಉಳಿಸುವ ಸಲುವಾಗಿ ಫ್ಯೂಯ್ಲ್ ಇಂಜೆಕ್ಷನ್ ಟೆಕ್ನಿಕ್ ನಲ್ಲಿ ಒಂದು ಹೊಸ ವೆರಿಯಂಟ್ ಕಾರ್ಬೋರೇಟರ್ ಜೆಟ್ ಅಳವಡಿಸುವ ಮೆಥೆಡ್ ಕಂಡು ಹಿಡಿಯಲು ಬರೋಬ್ಬರಿ ಎರಡು ದಶಕಗಳಿಂದ ಪ್ರಯತ್ನ ಪಟ್ಟು ತಮ್ಮ ನಲವತ್ತನೇ ವಯಸ್ಸಿನಲ್ಲಿ ಅವರು ಸಕ್ಸಸ್ ಆಗಿದ್ದಾರೆ. 12 ತರಗತಿವರೆಗೆ ಓದಿರುವ ಇವರು ಸದ್ಯ ನಲವತ್ತು ವರ್ಷ ವಯಸ್ಸಿನವರಾಗಿದ್ದಾರೆ.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಂದ ಪ್ರಶಂಸೆ ಹಾಗೂ ಪುರಸ್ಕಾರ ದೊರೆತಿದೆ..!
2016 ರಲ್ಲಿ ಮೊದಲ ಬಾರಿಗೆ ಇವರಿಗೆ ದ್ವಿಚಕ್ರ ವಾಹನಗಳ ಮೈಲೇಜ್ ಹೆಚ್ಚಿಸುವ ಕೆಲಸದಲ್ಲಿ ಯಶ ಕಂಡರು, ಇವರ ಈ ಕೆಲಸಕ್ಕಾಗಿ ಉತ್ತರ ಪ್ರದೇಶದ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ವತಿಯಿಂದ ಇವರಿಗೆ ಪ್ರೋತ್ಸಾಹಕ ಬಹುಮಾನವಾಗಿ 25000 ರೂಪಾಯಿ ಹಾಗೂ ಪ್ರಮಾಣ ಪತ್ರವನ್ನು ಸ್ವತಃ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಕೈಯಿಂದ 2018 ನೇ ಇಸ್ವಿಯಲ್ಲಿ ಪಡೆದಿದ್ದಾರೆ. ಇದರಿಂದ ವಿವೇಕ್ ಅವರು ಇನ್ನಷ್ಟು ಸಂತಸಗೊಂಡಿದ್ದಾರೆ.

ಇದುವರೆಗೂ ಕೇವಲ ಒಂದೇ ವರ್ಷದಲ್ಲಿ ಇವರು 500 ದ್ವಿಚಕ್ರ ವಾಹನಗಳಿಗೆ ಕಾರ್ಬೋರೇಟರ್ ಜೆಟ್ ಅಳವಡಿಸಿದ್ದಾರೆ, ಆ ಎಲ್ಲಾ ವಾಹನದ ಮಾಲೀಕರು ಮೈಲೇಜ್ ದ್ವಿಗುಣಗೊಂಡಿದ್ದರೊಂದಿಗೆ, ವಾಹನಗಳಿಗೆ ಬೇರೆ ಯಾವುದೇ ಸಮಸ್ಯೆಯಾಗಿಲ್ಲವೆಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕೆಲವರು ಇದರಿಂದ ಎಂಜಿನ್ ಗೆ ಏನಾದರೂ ತೊಂದರೆಯಾಗಬಹುದು ಎಂದು ಅಂದುಕೊಂಡಿದ್ದರು. ಆದರೆ ಅಂತಹ ಯಾವುದೇ ಸಮಸ್ಯೆ ಎದುರಾಗಿಲ್ಲ ಎಂದು ಇಷ್ಟು ದಿನ ಕಾರ್ಬೋರೇಟ್ ಜೆಟ್ ಅಳವಡಿಸಿಕೊಂಡಿರುವ ಬೈಕ್ ಮಾಲೀಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ತಂತ್ರಜ್ಞಾನ ಹೇಗೆ ಕೆಲಸ ಮಾಡುತ್ತದೆ..??
ಸಾಮಾನ್ಯವಾಗಿ ನಿಮಗೆಲ್ಲ ಗೊತ್ತಿರುವ ಹಾಗೆ ಪೆಟ್ರೋಲ್ ಟ್ಯಾಂಕ್ ನಿಂದ ಪೆಟ್ರೋಲ್ ಪೈಪ್ ಮೂಲಕ ನೇರವಾಗಿ ಫ್ಯೂಯ್ಲ್ ಇಂಜೆಕ್ಷನ್ ಮೂಲಕ ಕಾರ್ಬೋರೇಟರ್ ಗೆ ಹೋಗುತ್ತದೆ ಅಲ್ಲಿ ಏರ್ ಫಿಲ್ಟರ್ ನಿಂದ ಬರುವ ಆಕ್ಸಿಜನ್ ಜೊತೆಗೆ ಸೇರಿಕೊಂಡು ಗ್ಯಾಸೋಲಿನ ಆಗಿ ಪರಿವರ್ತನೆ ಹೊಂದಿ ಹಭೆಯುಂಟಾಗಿ ವಾಹನ ಚಾಲನೆಗೊಳ್ಳುತ್ತದೆ.

ಇಂತಹದರಲ್ಲಿ ಆ ಮೂಲ ಕಾರ್ಬೋರೇಟರ್ ನಲ್ಲಿ ವಿವೇಕ್ ಅವರ ಪ್ರಕಾರ ಒಂದು ಸಮಸ್ಯೆ ಇದೆ, ಅದೇನೆಂದರೆ ಅದರಲ್ಲಿ ಫ್ಯೂಯ್ಲ್ ಇಂಜೆಕ್ಷನ್ ಮೂಲಕ ಹೋಗುವ ಪೆಟ್ರೋಲ್ ಕಾರ್ಬೋರೇಟ್ ನ ತಳಭಾಗದಲ್ಲಿ 2 ಮಿಲಿಮೀಟರ್ ಗಾತ್ರದ ಒಂದು ರಂದ್ರವಿರುತ್ತದೆ ಆ ರಂದ್ರದಲ್ಲಿ ಅರ್ಧ ಪೆಟ್ರೋಲ್ ಅನವಶ್ಯಕ ವ್ಯರ್ಥವಾಗುತ್ತಿರುತ್ತದೆ.

ಹೀಗಾಗಿ ಇದರಲ್ಲಿ ಕೆಲವು ಬದಲಾವಣೆ ಮಾಡಿದ ವಿವೇಕ್ ಅವರು ಆ ಕೆಳಗಿನ ರಂದ್ರವನ್ನು ಮುಚ್ಚಿ ಅದರ ಮೇಲ್ಭಾಗದಲ್ಲಿ ಅರ್ಧ ಅಥವಾ ಒಂದು ಮಿಲಿಮೀಟರ್ ನ ಎರಡು ಚಿಕ್ಕ ರಂದ್ರಗಳನ್ನು ಮಾಡಿ ಕೊಡುತ್ತಾರೆ, ಹೀಗೆ ಮಾಡುವದರಿಂದ ಪೂರ್ತಿ ಪೆಟ್ರೋಲ್ ನ ಉಪಯೋಗವಾಗುತ್ತದೆ ಹೀಗಾಗಿ ಬೈಕ್ ಗಳ ಮೈಲೇಜ್ ಹೆಚ್ಚುತ್ತಿದೆ.

ವಾರಣಾಸಿಯ ನಿವಾಸಿ ಹಾಗೂ IIT-BHU ನ ಮೆಕ್ಯಾನಿಕಲ್ ಇಂಜಿನಿಯರಿಂಗ್ ಡಿಪಾರ್ಟ್ಮೆಂಟ್ ನ ಅಸೋಸಿಯೇಟ್ ಪ್ರೊಫೆಸರ್ ಹಾಗೂ ಆಟೋಮೋಬೈಲ್ ನ ಸ್ಪೆಷಲಿಸ್ಟ್ ಡಾ. ರಶ್ಮಿ ರೇಖಾ ಸಾಹು ಅವರು ಹೇಳುವ ಪ್ರಕಾರ ವಿವೇಕ್ ಪಟೇಲ್ ಕಂಡುಹಿಡಿದ ಈ ಒಂದು ಚಿಕ್ಕ ಟೆಕ್ನಿಕ್ ಇಡೀ ಆಟೋಮೋಬೈಲ್ ಇಂಡಸ್ಟ್ರಿಯಲ್ಲೇ ಒಂದು ಬದಲಾವಣೆಯ ಗಾಳಿ ಬಿಸುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ ಎಂದಿದ್ದಾರೆ.

ಇದರಿಂದ ಪೆಟ್ರೋಲ್ ಉಳಿತಾಯ, ಎಂಜಿನ್ ಹೀಟ್ ಕೂಲ್ ಎಂಬ ಕೆಲಸ ಹಾಗೂ ವಾಹನಗಳಿಂದ ವಾತಾವರಣದಲ್ಲಿ ಬಿಡುಗಡೆಯಾಗುವ ಕಾರ್ಬನ್ ಡೈ ಆಕ್ಸೈಡ್ ನ ಪ್ರಮಾಣ ಕೂಡ ಕಡಿಮೆಯಾಗುತ್ತದೆ ಒಟ್ಟಿನಲ್ಲಿ ಈ ತಂತ್ರಜ್ಞಾನ ಮುಂದೊಂದು ದಿನ ದೊಡ್ಡ. ಮಟ್ಟದ ಬದಲಾವಣೆ ತರುವುದಂತೂ ಗ್ಯಾರಂಟಿ ಎಂದು ಹೇಳುತ್ತಾರೆ.

ತಾವು ತಯಾರಿಸಿರುವ ಕಾರ್ಬೋರೇಟರ್ ಜೆಟ್ ನ ಪೆಟೆಂಟ್ ಪಡೆದುಕೊಳ್ಳುವುದಕ್ಕಾಗಿ ದೆಹಲಿಯಲ್ಲಿ ವಿವೇಕ್ ಅವ್ರು ಅಪ್ಲಿಕೇಶನ್ ಕೂಡ ಹಾಕಿದ್ದಾರೆ, ಒಟ್ಟಿನಲ್ಲಿ ವಿವೇಕ್ ಪಟೇಲ್ ಎಂಬ ಛಲ ಬಿಡದ ವ್ಯಕ್ತಿಯ ಪರಿಶ್ರಮಕ್ಕೆ ಒಳ್ಳೆಯ ಫಲ ಸಿಗಬೇಕು ಪೆಟ್ರೋಲ್ ಕಡಿಮೆ ಖರ್ಚುಗಬೇಕು ಹಾಗೂ ವಾತಾವರಣದಲ್ಲಿ ಇಂಗಾಲದ ಡೈ ಆಕ್ಸೈಡ್ ಪ್ರಮಾಣ ಕಡಿಮೆಯಾಗಬೇಕು ಎಂಬುದೇ ನಮ್ಮ ಉದ್ದೇಶ.
-ಮಂಜುನಾಥ್