Vodeo: ಕಳ್ಳರನ್ನು ನೋಡಿ ಪೊಲೀಸರೇ ಓಡಿ ಹೋದರು! ಸಂಪೂರ್ಣ ಘಟನೆ CCTV ಯಲ್ಲಿ ಸೆರೆ!
ಪೊಲೀಸರನ್ನು ನೋಡಿ ಕಳ್ಳರು ಓಡಿಗೋಗುವದು ಸಹಜ. ಆದರೆ ಇಲ್ಲಿ ಕಳ್ಳನನ್ನು ನೋಡಿ ಪೊಲೀಸರೇ ಕಾಲಿಗೆ ಬುದ್ಧಿ ಹೇಳಿದ ಘಟನೆಯ ವೀಡಿಯೋ ಒಂದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದರಿಂದ ಪೊಲೀಸರು ತೀವ್ರ ಮುಖಭಂಗಕ್ಕೆ ಕಾರಣವಾಗಿದ್ದಾರೆ.
ಪ್ರಸ್ತುತ ಘಟನೆ ಮಹಾರಾಷ್ಟ್ರದ ಪುಣೆಯಿಂದ ವರದಿಯಾಗಿದೆ. ಇಲ್ಲಿಯ ಔoಧ ಪರಿಸದರದಲ್ಲಿರುವ ಸಿದ್ಧಾರ್ಥ ನಗರದಲ್ಲಿ ರಾತ್ರಿ ಮೂರು ಗಂಟೆಯ ಸುಮಾರಿಗೆ ಕಳ್ಳರು ಜಾಲ ಬೀಸಿದ್ದರು. ಯಾರು ಇಲ್ಲದೇನೆ ಸುಮಾರು ದಿನಗಳಿಂದ ಮುಚ್ಚಲ್ಪಟ್ಟ 5 ಫ್ಲ್ಯಾಟ್ ಗಳಲ್ಲಿ ಒಂದರ ಬೀಗ ಮುರಿದು ಒಳನುಗ್ಗಿದ್ದರು. ಆಗ ನಾಗರಿಕರಿಗೆ ಗೊತ್ತಾಗಿ ಅವರು ಪೊಲೀಸರಿಗೆ ಸಹಾಯಕ್ಕಾಗಿ ಕರೆದಿದ್ದಾರೆ. ಸ್ವಲ್ಪ ಸಮಯದ ನಂತರ ಪೊಲೀಸರು ಘಟನಾ ಸ್ಥಳಕ್ಕೆ ಹಾಜರಾಗಿದ್ದಾರೆ. ಆದರೆ ಎದುರಿನಿಂದ ಕಳ್ಳ ಬರುವದನ್ನು ನೋಡಿ ಪೊಲೀಸರೇ ಅಲ್ಲಿಂದ ತಕ್ಷಣ ಕಾಲ್ಕಿತ್ತಿದ್ದಾರೆ.
ಇನ್ನೊಂದು ತಮಾಷೆಯ ವಿಷಯ ವೆನೆಂದರೆ, ಕಳ್ಳನ ಕೈಯಲ್ಲಿಯ ಅಸ್ತ್ರಗಳನ್ನು ನೋಡಿ ಪೋಲಿಸನು ತನ್ನ ಸಹವರ್ತಿಯನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿದ್ದಾನೆ. ಪೊಲೀಸರ ಈ ವರ್ತನೆಯು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆನಂತರ ಕಳ್ಳರು ಸಹ ಅಲ್ಲಿಯ ಜನರ ಗದ್ದಲವನ್ನು ಕೇಳಿ ಅವರು ಇಲ್ಲಿಂದ ಓಡಿಹೋಗುವುದೆ ಲೇಸೆಂದು ತಿಳಿದು ಕಾಲ್ಕಿತ್ತಿದ್ದಾರೆ. ಕಳ್ಳರನ್ನು ಹಿಡಿಯುವ ಅವಕಾಶ ಪೊಲೀಸರಿಗೆ ಇತ್ತಾದರೂ ಅದನ್ನು ಕೈಚೆಲ್ಲಿ ಕಳ್ಳರಿಗಿಂತ ಮೊದಲು ಪೊಲೀಸರೇ ಗೇಟ್ನಿಂದ ಓಡಿ ಹೋಗಿದ್ದಾರೆ. ಪೊಲೀಸರು ಈ ಘಟನೆಯ ಕಡೆಗೆ ದುರ್ಲಕ್ಷ್ಯ ಮಾಡಿದ ನಿಶ್ಚಿತವಾದ ಕಾರಣವೇನು ಗೊತ್ತಾಗಿಲ್ಲ. ಕಳ್ಳರು ಮಾತ್ರ 5 ಫ್ಲ್ಯಾಟ್ ಗಳಲ್ಲಿ ಒಂದರ ಬೀಗವನ್ನು ಒಡೆದು ಹಾಕುವಲ್ಲಿ ಯಶಸ್ವಿಯಾಗಿ ಅಲ್ಲಿಂದ ಎಲ್ಇಡಿ ಟಿವಿ ತೆಗೆದುಕೊಂಡು ಪರಾರಿಯಾಗುವದರಲ್ಲಿ ಸಫಲರಾಗಿದ್ದಾರೆ.
ವಿಡಿಯೋ ನೋಡಿ
पुणे – समोरून आले चोर अन् पोलिसांनी ठोकली धूम pic.twitter.com/BjX4sT1RnV
— Lokmat (@MiLOKMAT) December 29, 2020
ಇಂತಹ ಸಮಾಜ ಕಂಟಕರಾದ ಕಳ್ಳರಿಂದ ಬಚಾವಾಗುವ ಸಲುವಾಗಿ ಪೊಲೀಸರನ್ನು ಕರೆದಾಗ ಕಳ್ಳರಿಗಿಂತಲೂ ಮೊದಲು ಪೊಲೀಸರೇ ಬೆನ್ನು ತೋರಿಸಿ ಓಡಿ ಹೋದರೆ ಸಾಮಾನ್ಯ ನಾಗರಿಕರು ಸಂಕಟದ ಸಮಯದಲ್ಲಿ ಯಾರ ಮೊರೆ ಹೋಗಬೇಕು ಎಂಬುದರ ಬಗ್ಗೆ ಸ್ಥಾನಿಕರು ಚರ್ಚೆ ಮಾಡುತ್ತಿದ್ದಾರೆ. ಈ ಘಟನೆಯ ಬಗ್ಗೆ ಹೆಚ್ಚುವರಿ ತನಿಖೆ ವರಿಷ್ಠ ಪೊಲೀಸ್ ಅಧಿಕಾರಿಗಳು ಮಾಡುತ್ತಿದ್ದಾರೆ.