ಬ್ರೇನ್ ಟೀಜರ್ ಪಜಲ್! ಯಾವ ಗ್ಲಾಸ್ ನಲ್ಲಿ ಹೆಚ್ಚು ನೀರಿದೆ? ಬರೀ 20 ಸೆಕೆಂಡುಗಳಲ್ಲಿ ಉತ್ತರಿಸಲು ಸಾಧ್ಯವೇ?
ಒಗಟುಗಳನ್ನು ಬಿಡಿಸುವದೆಂದರೆ ಸಾಕಷ್ಟು ಜನರಿಗೆ ಇಷ್ಟವಾಗುತ್ತದೆ. ಇಲ್ಲಿ ಮೆದುಳಿನ ಕ್ಷಮತೆಯ ಬಗ್ಗೆ ತಿಳಿಯುತ್ತದೆ. ಸೋಶಿಯಲ್ ಮೀಡಿಯಾದಲ್ಲಿ ದಿನನಿತ್ಯ ಅನೇಕ ಪ್ರಕಾರದ ಪಜಲ್ ಫೋಟೋಗಳು ಕಂಡುಬರುತ್ತವೆ. ಆ ಫೋಟೋಗಳಿಗೆ ಸಂಬಂಧಿಸಿದ ಪ್ರಶ್ನೆಗಳು ಸಹ ತುಂಬಾ ವಿಚಿತ್ರವಾಗಿರುತ್ತವೆ. ಪ್ರಶ್ನೆಗಳೇ ವಿಚಿತ್ರವಾದ ಮೇಲೆ ಇನ್ನು ಉತ್ತರಗಳು ಎಷ್ಟೊಂದು ವಿಚಿತ್ರವಾಗಿರುತ್ತವೆ ಎಂಬುದನ್ನು ಊಹಿಸಿ. ಇಂಥ ಉತ್ತರಗಳನ್ನು ಶೋಧಿಸಲು ವ್ಯಕ್ತಿಗೆ ಕ್ರಿಯೇಟಿವ್ ಮೈಂಡ್, ಪೇಶನ್ಸ್ ಮತ್ತು ಜಿದ್ದು ಬೇಕಾಗುತ್ತದೆ.
ಇಲ್ಲಿ ಕಾಣುತ್ತಿರುವ ಚಿತ್ರದಲ್ಲಿ ನೀರು ತುಂಬಿದ 4 ಗ್ಲಾಸ್ ಗಳಿವೆ. ಈ ನಾಲ್ಕು ಗ್ಲಾಸ್ ಗಳನ್ನು ತುಂಬಾ ಸರಿಯಾಗಿ ಒಮ್ಮೆ ನೋಡಿಕೊಳ್ಳಿ. ಮತ್ತು 20 ಸೆಕೆಂಡುಗಳಲ್ಲಿ ಈ ಒಗಟನ್ನು ಬಗೆಹರಿಸಲು ಪ್ರಯತ್ನಿಸಿ. ಗ್ಲಾಸ್ ಗಳಲ್ಲಿ ಇರಿಸಲಾದ ಪ್ರತಿಯೊಂದು ವಸ್ತುಗಳ ಬಗ್ಗೆ ಸರಿಯಾಗಿ ವಿಚಾರ ಮಾಡಿ. ಒಂದು ಗ್ಲಾಸ್ ನಲ್ಲಿ ಕತ್ತರಿ ಇದೆ, ಇನ್ನೊಂದರಲ್ಲಿ ಪೇಪರ್ ಕ್ಲಿಪ್ ಇದೆ, ಮೂರನೇ ಗ್ಲಾಸ್ ನಲ್ಲಿ ರಬರ್ ಅಥವಾ ಇರೆಸರ್ ಇದೆ, ಹಾಗೂ ನಾಲ್ಕನೇ ಗ್ಲಾಸ್ ನಲ್ಲಿ ಒಂದು ವಾಚ್ ಇದೆ. ಪ್ರತಿಯೊಂದು ಗ್ಲಾಸ್ ನಲ್ಲಿ ಬೇರೆ ಬೇರೆ ವಸ್ತುಗಳು ಕಂಡು ಬರುತ್ತಿದ್ದರೂ ನೀರಿನ ಮಟ್ಟ ಮಾತ್ರ ಎಲ್ಲ ಗ್ಲಾಸ್ ಗಳಲ್ಲಿ ಸಮನಾಗಿ ಕಂಡುಬರುತ್ತಿದೆ. ಯಾವ ಗ್ಲಾಸ್ ನಲ್ಲಿ ನೀರು ಹೆಚ್ಚಿದೆ ಎಂಬುದನ್ನು ಕಂಡುಹಿಡಿಯಬೇಕಾಗಿದೆ.

ಈ ಪ್ರಶ್ನೆಗೆ ಉತ್ತರವನ್ನು ನಿಮಗೆ ಸರಿಯಾಗಿ ಹುಡುಕಲು ಸಾಧ್ಯವಾದರೆ ನೀವು ಜೀನಿಯಸ್. ಒಂದು ವೇಳೆ ಉತ್ತರ ಶೋಧಿಸಲು ಸಾಧ್ಯವಾಗದೇ ಇದ್ದರೆ ಈ ಪ್ರಶ್ನೆಯ ಉತ್ತರ ನಾವೇ ಹೇಳುತ್ತೇವೆ ನೋಡಿ…ಕೆಳಗೆ.
ಫ್ರೆಂಡ್ಸ್ ಈ ಪ್ರಶ್ನೆಯ ಉತ್ತರ ಏನೆಂದರೆ, ಎರಡನೆಯ ಗ್ಲಾಸ್ ನಲ್ಲಿ ಹೆಚ್ಚು ನೀರು ತುಂಬಿದೆ. ಅದಕ್ಕೆ ಕಾರಣ ಇದರಲ್ಲಿ ತೆಳ್ಳಗಿನ ಒಂದೇ ಒಂದು ಪೇಪರ್ ಪಿನ್ ಇರುವದರಿಂದ ಇಲ್ಲಿ ನೀರು ಹೆಚ್ಚು ಇದೆ. ನಿಮಗೆ ಈ ಪ್ರಶ್ನೆಯ ಉತ್ತರ ಶೋಧಿಸಲು ಎಷ್ಟು ಸಮಯ ಬೇಕಾಯಿತು? ಅದನ್ನು ಮೊದ್ಲು ಹೇಳಿ. ಬರೀ 20 ಸೇಕೆಂಡಾ ಇಲ್ಲ ಅದಕ್ಕೂ ಹೆಚ್ಚು?
