Video; ವರನ ಮೆರವಣಿಗೆ ಕಲ್ಯಾಣ ಮಂಟಪಕ್ಕೆ ಬರಲು ತಡವಾದ ನಂತರ ಕಾಯ್ದು ಕಾಯ್ದು ಸುಸ್ತಾಗಿ ವಧು ಮಾಡಿದ ಕೆಲಸ ನೋಡಿ.
ಮದುವೆಗಳ ಸೀಸನ್ ಶುರುವಾದರೆ ಸಾಕು ಸೋಶಿಯಲ್ ಮೀಡಿಯಾದಲ್ಲಿ ಮದುವೆಯಲ್ಲಿಯ ವಿಧ ವಿಧ ವಿಡಿಯೋಗಳು ನೋಡಲು ಸಿಗುತ್ತವೆ. ಈ ವಿಡಿಯೋಗಳಲ್ಲಿ ಕೆಲವು ವಿಶೇಷವಾದ ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ಹುಚ್ಚೆದ್ದು ವೈರಲ್ ಆಗುವುದು ಉಂಟು. ಇತ್ತೀಚೆಗೆ ಮದುವೆಗಳು ತುಂಬಾ ಭರ್ಜರಿಯಾಗಿ ನಡೆಯುತ್ತಿವೆ. ಮದುವೆಯಲ್ಲಿ ಮುಖ್ಯವಾಗಿ ಆಕರ್ಷಣೆಯ ಕೇಂದ್ರವಾದ ವಧು-ವರರು ವಿಶೇಷ ರೀತಿಯ ಡ್ರೆಸ್ ಗಳನ್ನು ತೊಟ್ಟು ಎಲ್ಲರ ಕಣ್ಣುಗಳನ್ನು ತಮ್ಮ ಕಡೆಗೆ ಸೆಳೆಯುವಲ್ಲಿ ಯಶಸ್ವಿಯಾಗುತ್ತಾರೆ.
ಕಲ್ಯಾಣ ಮಂಟಪದಲ್ಲಿ ಕೆಲವೊಮ್ಮೆ ಸಹಜವಾಗಿ ವಧು-ವರರಿಂದ ವಿಶೇಷವಾದ ದೃಶ್ಯಗಳು ಕ್ರಿಯೇಟ್ ಆಗುತ್ತವೆ. ಇಂಥ ದೃಶ್ಯಗಳು ನಂತರ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಇರುವ ಯೂಜರ್ಸ್ ಗಳಿಗೆ ತುಂಬಾ ಮನರಂಜನೆಯನ್ನು ನೀಡುತ್ತವೆ. ಸದ್ಯಕ್ಕೆ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ವೈರಲ್ ಆಗುತ್ತಿದೆ. ಈ ವಿಡಿಯೋದ ದೃಶ್ಯದಲ್ಲಿ ಮದುಮಗಳು ತನ್ನ ಭಾವಿಪತಿಯನ್ನು ಅರಸಿ ಅರಸಿ ಬೇಸರಗೊಳ್ಳುತ್ತಾಳೆ. ಈ ಸಂದರ್ಭದಲ್ಲಿ ವಧು ಸಾಕು ಸಾಕಾಗಿ ಕೊನೆಗೆ ಮಾಡಿದ್ದೇನು? ಬನ್ನಿ ತಿಳಿದುಕೊಳ್ಳೋಣ.
ವರನ ಮೆರವಣಿಗೆ ಬರಲು ತುಂಬಾ ತಡವಾಗಿದ್ದರಿಂದ ಮದುಮಗಳು ಆತನ ಬರುವಿಕೆಗಾಗಿ ಒಂದೇ ಸವನೆ ಚಡಪಡಿಸುತ್ತಿದ್ದಾಳೆ. ತನ್ನ ಭಾವಿಪತಿಯ ದಾರಿ ಕಾಯ್ದು ಕಾಯ್ದು ಸುಸ್ತಾದ ನಂತರ ಮದುಮಗಳು ಆತನನ್ನು ನೋಡಲು ಕೊನೆಗೆ ಒಂದು ಐಡಿಯಾ ಮಾಡುತ್ತಾಳೆ. ತನ್ನ ವರ ಎಲ್ಲಿಂದ ಕಾಣುತ್ತಾನೆ ಎಂದು ಪ್ಲಾನ್ ಮಾಡಿ ನೇರ ಮನೆಯ ಮಾಳಿಗೆಯ ಮೇಲೆ ಹೋಗುತ್ತಾಳೆ. ಅಲ್ಲಿಯೂ ಸರಿಯಾಗಿ ಕಾಣದಾದಾಗ ಒಂದು ಚೇರ್ ಇಟ್ಟು ತನ್ನ ಪತಿಯ ಕಡೆಗೆ ನೋಡುತ್ತಿರುತ್ತಾಳೆ. ಅಷ್ಟರಲ್ಲಿ ದೂರದಲ್ಲಿ ಮೆರವಣಿಗೆ ಬರುತ್ತಿರುವುದನ್ನು ಕಂಡು ವಧು ತುಂಬಾ ಖುಷಿ ಪಡುತ್ತಾಳೆ ಹಾಗೂ ತನ್ನ ಬಾವಿಪತಿರಾಯನಿಗೆ ಕೈಅಲುಗಾಡಿಸಿ ಸನ್ನೆ ಮಾಡುತ್ತಾಳೆ. ಅತ್ತ ವರನು ಸಹ ತನ್ನ ಪತ್ನಿಯನ್ನು ಗುರುತಿಸಿ ದೂರದಿಂದಲೇ ಕೈ ಮಾಡುತ್ತಾನೆ. ಇಬ್ಬರ ಈ ದೃಶ್ಯ ನೆಟ್ಟಿಗರಿಗೆ ತುಂಬಾ ಇಷ್ಟವಾಗಿದೆ.
ನೋಡಿ ಈ ವಿಡಿಯೋ…
View this post on Instagram
ವಧು-ವರರ ಈ ಸುಂದರವಾದ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ witty_wedding ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದೆ. ಈ ವಿಡಿಯೋ ಇಲ್ಲಿಯವರೆಗೆ ಸಾವಿರಾರು ಜನರು ನೋಡಿ ಖುಷಿಪಟ್ಟಿದ್ದಾರೆ. ಮತ್ತು ಸಾಕಷ್ಟು ಜನರು ಈ ವಿಡಿಯೋವನ್ನು ಲೈಕ್ ಮಾಡಿದ್ದಾರೆ.