VIDEO : ಮೀನು ಹಿಡಿದು ಜೀವನ ಮಾಡುತ್ತಿದ್ದ ದೇಶ ಜಗತ್ತಿನ ಅತಿ ಶ್ರೀಮಂತ ದೇಶವಾಗಿದ್ದು ಹೇಗೆ?
ಜನಸಂಖ್ಯೆ ಮತ್ತು ವಿಸ್ತೀರ್ಣದ ದೃಷ್ಟಿಯಿಂದ ಕತಾರ್ ಬಹಳ ಸಣ್ಣ ದೇಶ. ಆದರೆ ಆ ದೇಶದ ಕಾರಣದಿಂದಾಗಿ ಇಡೀ ಅರಬ್ ಜಗತ್ತಿನಲ್ಲಿ ಕೋಲಾಹಲ ಉಂಟಾಗಿದೆ. ಸೌದಿ ಅರೇಬಿಯಾ ಸೇರಿದಂತೆ ಹಲವಾರು ಅರಬ್ ರಾಷ್ಟ್ರಗಳು ಅದರೊಂದಿಗಿನ ಸಂಬಂಧವನ್ನು ಕಡಿದುಕೊಂಡವು. ಆದರೆ ಬೆಳೆದು ನಿಂತ ರೀತಿ, ವಿಶ್ವದ ದೊಡ್ಡಣ್ಣಂದಿರ ಕಡೆ ಹೂಡಿದ ಬಂಡವಾಳ ಎಲ್ಲರನ್ನೂ ಬೆರಗಾಗಿಸುತ್ತದೆ. ಕತಾರ್ ವಿಶೇಷತೆ ಏನು ಎಂದು ತಿಳಿಯಿರಿ…
ಆಯಿಲ್ ಮತ್ತು ಗ್ಯಾಸ್ :
ಕತಾರ್ ಒಂದು ಕಾಲದಲ್ಲಿ ಅರಬ್ ಜಗತ್ತಿನ ಅತ್ಯಂತ ಬಡ ದೇಶಗಳಲ್ಲಿ ಒಂದಾಗಿತ್ತು. ಆದರೆ ಈಗ ಶ್ರೀಮಂತ ದೇಶಗಳಲ್ಲಿ ಇದನ್ನು ಸೇರಿಸಲಾಗಿದೆ. ಇದಕ್ಕೆ ಕಾರಣ ಇಲ್ಲಿ ಕಂಡುಬರುವ ತೈಲ ಮತ್ತು ಅನಿಲದ ದೊಡ್ಡ ಸಂಗ್ರಹ. ಮೀನು ಹಿಡಿದು ಜೀವನ ನಡೆಸುತ್ತಿದ್ದವರ ಬಾಳನ್ನು ಬಂಗಾರ ಮಾಡಿದ್ದು ಈ ತೈಲ ಮತ್ತು ಅನಿ ನಿಕ್ಷೇಪಗಳು.
ಪಾಲುದಾರಿಕೆ :
ವಿಶ್ವದ ಅನೇಕ ದೊಡ್ಡ ಕಂಪನಿಗಳಲ್ಲಿ ಕತಾರ್ ಪಾಲನ್ನು ಹೊಂದಿದೆ. ಇವುಗಳಲ್ಲಿ ಲಂಡನ್ ನ ಪ್ರಸಿದ್ಧ ಡಿಪಾರ್ಟ್ಮೆಂಟ್ ಸ್ಟೋರ್ ಹೆರೆಡ್ಸ್, ಐಷಾರಾಮಿ ಉತ್ಪನ್ನಗಳ ತಯಾರಕ ಫ್ರಾನ್ಸಿನ LVMH ಸೇರಿದಂತೆ ಕತಾರ್ ಹೂಡಿಕೆ ಮಾಡಿರದ ಬೃಹತ್ ಕಂಪನಿಗಳಾವುವೂ ಇಲ್ಲವೇ ಇಲ್ಲ ಅನ್ನಬಹುದು. ಜಗತ್ತಿನ ಬಹುತೇಕ ಎಲ್ಲ ದೊಡ್ಡ ಅಥವಾ ಅಭಿವೃದ್ಧಿ ಹೊಂದಿರುವ ದೇಶಗಳಲ್ಲಿ ಕತಾರ್ ಬಂಡವಾಳ ಹೂಡಿದೆ.
ಮಹತ್ವಾಕಾಂಕ್ಷೆ :
ಕತಾರ್ ಶಾತಿ ಬಯಸುವ ದೇಶಗಳಲ್ಲೊಂದು, ಇತರರೂ ಶಾಂತವಾಗಿರಬೇಕು ಎಂದು ಅದು ಬಯಸುತ್ತದೆ. ಸುಡಾನ್ ನ ಡಾರ್ ಫೂರ್ ನಲ್ಲಿ ಶಾಂತಿ ಪ್ರಯತ್ನಗಳಲ್ಲಿ ಮಧ್ಯವರ್ತಿಯ ಪಾತ್ರವನ್ನು ವಹಿಸಿತ್ತು. ಪ್ಯಾಲೇಸ್ಟಿನಿಯನ್ ಬಣಗಳಲ್ಲಿ ಕೂಡ ಇದು ಮಧ್ಯವರ್ತಿಯಾಗಿದೆ. ಕತಾರ್ ಅಫಘಾನ್ ತಾಲಿಬಾನ್ ಜೊತೆ ಶಾಂತಿ ಮಾತುಕತೆಯಲ್ಲಿ ಸಹ ಮಧ್ಯವರ್ತಿಯಾಗಿದೆ.

ಅಲ್ ಜಜೀರಾ (Al Jazeera) :
ಕತಾರ್ ಸರ್ಕಾರವು 1996 ರಲ್ಲಿ ಅಲ್ ಜಜೀರಾ ಎಂಬ ದೂರದರ್ಶನ ಜಾಲವನ್ನು ರಚಿಸಿತು, ಇದು ಅರಬ್ ಜಗತ್ತಿನಲ್ಲಿ ಸುದ್ದಿ ಪ್ರಸಾರದ ದಿಕ್ಕನ್ನೇ ಬದಲಾಯಿಸಿತು. ಅಲ್ ಜಜೀರಾ ವಿಶ್ವದ ಇತರ ಭಾಗಗಳಲ್ಲಿಯೂ ತನ್ನ ಜಾಲವನ್ನು ಹರಡಿದೆ. ಪ್ಯಾಲೆಸ್ಟೆನ್ ನಲ್ಲಿದ್ದ ಇದರ ದೊಡ್ಡ ಬಿಲ್ಡಿಂಗನ್ನು ಕೆಲದಿನಗಳ ಹಿಂದೆ ಇಸ್ರೇಲ್ ಉಡಿಸ್ ಮಾಡಿದ್ದು ನಿಮಗೆ ಗೊತ್ತಿದೆ.
ಕತಾರ್ ಏರ್ವೇಸ್ :
ಕತಾರ್ ನ ಸರ್ಕಾರಿ ವಿಮಾನಯಾನ ಸಂಸ್ಥೆಗಳಾದ ಕತಾರ್ ಏರ್ವೇಸ್ ವಿಶ್ವದ ಆಯ್ದ ವಿಮಾನಯಾನ ಸಂಸ್ಥೆಗಳಲ್ಲಿ ಸೇರಿದೆ. ಇದು 192 ವಿಮಾನಗಳನ್ನು ಹೊಂದಿದೆ ಮತ್ತು ಇವು ವಿಶ್ವದ 151 ನಗರಗಳನ್ನು ಸಂಪರ್ಕಿಸುತ್ತದೆ. ಅತ್ಯಂತ ಪ್ರತಿಷ್ಟಿತ ಏರ್ ವೇಸ್ ಗಳಲ್ಲಿ ಕತಾರ್ ಏರ್ವೇಸ್ ಸ್ಥಾನ ಪಡೆದಿದೆ.
ವಿಶ್ವಕಪ್ :
2022 ರ ಫುಟ್ಬಾಲ್ ವಿಶ್ವಕಪ್ ಕತಾರ್ನಲ್ಲಿ ನಡೆಯಲಿದೆ. ಈ ಪಂದ್ಯಾವಳಿಯನ್ನು ಆಯೋಜಿಸಿದ ಅರಬ್ ದೇಶಗಳಲ್ಲಿ ಕತಾರ್ ಮೊದಲ ದೇಶವಾಗಲಿದೆ. ಆದಾಗ್ಯೂ ಈ ಟೂರ್ನಿಯ ನಿರ್ಮಾಣ ಕಾರ್ಯಗಳಲ್ಲಿ ವಿದೇಶಿ ಕಾರ್ಮಿಕರನ್ನು ಶೋಷಿಸುವ ವರದಿಗಳು ಮಾಧ್ಯಮಗಳಲ್ಲಿ ನಿರಂತರವಾಗಿ ಕಂಡುಬರುತ್ತಿವೆ. ಈ ಬಗ್ಗೆ ಅಲ್ಲಿನ ಆಡಳಿತ ಸ್ಪಷ್ಟನೆ ನೀಡಿಲ್ಲ.

ಜನಸಂಖ್ಯೆ :
11,437 ಚದರ ಕಿಲೋಮೀಟರ್ ವಿಸ್ತೀರ್ಣ ಹೊಂದಿರುವ ಕತಾರ್ ಅರಬ್ ಜಗತ್ತಿನ ಅತ್ಯಂತ ಚಿಕ್ಕ ದೇಶಗಳಲ್ಲಿ ಒಂದಾಗಿದೆ. ಕತಾರ್ ಕೇವಲ 25 – 30 ಲಕ್ಷ ಜನಸಂಖ್ಯೆಯನ್ನು ಮಾತ್ರ ಹೊಂದಿದೆ, ಅದರಲ್ಲಿ 90 ಪ್ರತಿಶತ ವಿದೇಶಿಯರು ಎಂಬುದು ವಿಶೇಷ. ಯಾವಾಗ ಇಲ್ಲಿ ತೈಲ – ಗ್ಯಾಸ್ ನಿಕ್ಷೇಪ ಪತ್ತೆಯಾದವೋ ಆಗ ಇಲ್ಲಿಗೆ ಬಂದು ವಾಸಿಸುವವರ ಸಂಖ್ಯೆ ಹೆಚ್ಚಾಯಿತು.
1971 ರಲ್ಲಿ ಪ್ರತ್ಯೇಕ ದೇಶ :
ಕತಾರ್ 55 ವರ್ಷಗಳಿಂದ ಬ್ರಿಟನ್ ರಕ್ಷಣೆಯಲ್ಲಿತ್ತು. 1971 ರಲ್ಲಿ ಇದು ಯುನೈಟೆಡ್ ಅರಬ್ ಎಮಿರೇಟ್ಸ್ನ ಭಾಗವಾಗಲು ನಿರಾಕರಿಸಿದಾಗ, ಅದು ಪ್ರತ್ಯೇಕ ದೇಶವಾಗಿ ಅಸ್ತಿತ್ವಕ್ಕೆ ಬಂದಿತು. ನಂತರ ಅದರ ಲಕ್ಕೇ ಬದಲಾಗಿ ಹೋಯಿತು. ಎಲ್ಲೋ ಇದ್ದ ದೇಶ ಈಗ ಶ್ರೀಮಂತಿಕೆಯ ತುತ್ತ ತುದಿಯಲ್ಲಿದೆ.
ರಾಜಮನೆತನ :
19 ನೇ ಶತಮಾನದ ಮಧ್ಯಭಾಗದಿಂದ ಕತಾರ್ ಅನ್ನು ಅಲ್-ಥಾನಿ ಕುಟುಂಬವು ಆಳುತ್ತಿದೆ. ಕತಾರ್ನ ಪ್ರಸ್ತುತ ಎಮಿರ್ ಶೇಖ್ ತಮೀಮ್ ಬಿನ್ ಹಮದ್ ಅಲ್-ಥಾನಿ 2013 ರಲ್ಲಿ ತಮ್ಮ ತಂದೆ ಶೇಖ್ ಹಮದ್ ಬಿನ್ ಖಲೀಫಾ ಅಲ್-ಥಾನಿ ಸಿಂಹಾಸನವನ್ನು ತೊರೆದ ನಂತರ ಅಧಿಕಾರ ವಹಿಸಿಕೊಂಡರು.

ಉ’”ಗ್ರರಿಗೆ ಬೆಂಬಲ :
ಈಗಾಗಲೇ ಅನೇಕ ಬಿಕ್ಕಟ್ಟುಗಳನ್ನು ಎದುರಿಸುತ್ತಿರುವ ಮಧ್ಯಪ್ರಾಚ್ಯದಲ್ಲಿ ಹೊಸ ವಿವಾದವನ್ನು ಪ್ರಾರಂಭಿಸಿರುವ ಸೌದಿ ಅರೇಬಿಯಾ ಸೇರಿದಂತೆ ಏಳು ದೇಶಗಳು ಕತಾರ್ ನೊಂದಿಗಿನ ಸಂಬಂಧವನ್ನು ಕಡಿದುಕೊಂಡಿವೆ. ಕತಾರ್ ಭ’”ಯೋ’ತ್ಪಾ’’ದ’ಕ ಗುಂಪುಗಳನ್ನು ಬೆಂಬಲಿಸುತ್ತಿದೆ ಎಂಬುದು ಅವುಗಳ ಆರೋಪ, ಆದರೆ ಕತಾರ್ ಅದನ್ನು ಅದು ನಿರಾಕರಿಸಿದೆ.
ಇನ್ನು ಶ್ರೀಮಂತಿಕೆಯ ಬಗ್ಗೆ ಹೇಳಬೇಕೆಂದರೆ…
ಮಹಾಶಕ್ತಿ ಎನಿಸಿಕೊಂಡಿರುವ ದೇಶದಲ್ಲಿ ವಾಸಿಸುವ ಜನರು ಸಂತೋಷವಾಗಿರುತ್ತಾರೆ ಅಂತಲ್ಲ. ಅರ್ಥಶಾಸ್ತ್ರದ ಪ್ರಕಾರ, ಒಂದು ದೇಶದ ಸಂಪತ್ತು ಆ ದೇಶದ ನಾಗರಿಕನು ಸರಾಸರಿ ಎಷ್ಟು ಸಂಪಾದಿಸುತ್ತಾನೆ ಎಂಬುದರ ಮೂಲಕ ತಿಳಿದುಬರುತ್ತದೆ, ಇದರಿಂದ ಅವನು ತನ್ನ ಎಲ್ಲ ಅಗತ್ಯಗಳನ್ನು ಪೂರೈಸಿಕೊಳ್ಳುತ್ತಾನೆ, ಮತ್ತು ಸಂತೋಷವಾಗಿರುತ್ತಾನೆ.
46,600 ಡಾಲರ್ ತಲಾ ಆದಾಯ ಹೊಂದಿರುವ ಅಮೆರಿಕವು ವಿಶ್ವದ ಅತ್ಯಂತ ಶ್ರೀಮಂತ ದೇಶ ಎಂದು ಜನರು ನಂಬಿದ್ದರೂ, ತಲಾ ಆದಾಯದಲ್ಲಿ ಯುಎಸ್ ಗಿಂತ ಶ್ರೀಮಂತವಾಗಿರುವ ಕೆಲವು ದೇಶಗಳಿವೆ. ಅಮೆರಿಕಕ್ಕಿಂತ ಯಾವ ದೇಶವು ಸಂತೋಷ ಮತ್ತು ಶ್ರೀಮಂತವಾಗಿದೆ ಎಂದು ನೋಡೋಣ ಬನ್ನಿ…

1 ಕತಾರ್ –
ಈ ದೇಶವು ಮೂವತ್ತು ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆಯನ್ನು ಹೊಂದಿದೆ. ಈ ದೇಶದ ಒಟ್ಟು ಜಿಡಿಪಿ 182 ಬಿಲಿಯನ್ ಡಾಲರ್. ಆದ್ದರಿಂದ ಕತಾರ್ ವಿಶ್ವದ ಅತ್ಯಂತ ಶ್ರೀಮಂತ ದೇಶ. ಪೆಟ್ರೋಲ್ ರಫ್ತಿನಿಂದ ಬರುವ ಆದಾಯದಿಂದಲೇ ಅದಕ್ಕೆ 85 ಪ್ರತಿಶತ ಆದಾಯ ಬರುತ್ತದೆ. ಕತಾರ್ ಪ್ರವಾಸೋದ್ಯಮ ಮತ್ತು ಬ್ಯಾಂಕಿಂಗ್ನಿಂದಲೂ ಸಾಕಷ್ಟು ಹಣವನ್ನು ಗಳಿಸುತ್ತಿದೆ.
2 ಲಕ್ಸಂಬರ್ಗ್ –
ಲಕ್ಸಂಬರ್ಗ್ ಯುರೋಪಿನ ಅತ್ಯಂತ ಶ್ರೀಮಂತ ದೇಶ. ಇದನ್ನು ತೆರಿಗೆದಾರರ ಸ್ವರ್ಗ ಎಂದು ಕರೆಯುತ್ತಾರೆ. ಇದಕ್ಕಾಗಿಯೇ ವಿಶ್ವದ ಅನೇಕ ಶತಕೋಟ್ಯಾಧಿಪತಿಗಳು ತಮ್ಮ ದೇಶಗಳನ್ನು ತೊರೆದು ಇಲ್ಲಿ ಬಂದು ನೆಲೆಸಿದರು, ಇದರಿಂದ ಅವರು ತಮ್ಮ ದೇಶಗಳ ತೆರಿಗೆಯನ್ನು ತಪ್ಪಿಸಿಕೊಂಡಿದ್ದಾರೆ.
3 ಸಿಂಗಾಪುರ –
ಸಿಂಗಾಪುರ ಸಹ ಏಷ್ಯಾದ ಮತ್ತೊಂದು ಶ್ರೀಮಂತ ದೇಶ, ಇದು 63 ದ್ವೀಪಗಳ ಗುಂಪಾಗಿದೆ. ಅತಿದೊಡ್ಡ ಆರ್ಥಿಕ ಕೇಂದ್ರಗಳನ್ನು ಹೊಂದಿರುವ ನಾಲ್ಕು ದೇಶಗಳಲ್ಲಿ ಈ ದೇಶವೂ ಒಂದು. 5.5 ಮಿಲಿಯನ್ ಜನಸಂಖ್ಯೆಯನ್ನು ಹೊಂದಿರುವ ಈ ದೇಶದ ಜನಸಂಖ್ಯೆಯ ಬಹುಪಾಲು ಜನರು ಬೌದ್ಧ ಧರ್ಮದ ಪರಿಪಾಲಕರು.

4 ನಾರ್ವೇ –
ಈ ದೇಶದಲ್ಲಿ ಐದು ಮಿಲಿಯನ್ ಜನರಿದ್ದಾರೆ. ಜಿಡಿಪಿಯ ಉನ್ನತ ಮಟ್ಟದಿಂದಾಗಿ ಇದು ವಿಶ್ವದ ಶ್ರೀಮಂತ ರಾಷ್ಟ್ರಗಳಲ್ಲಿ ಒಂದಾಗಿದೆ. ಈ ದೇಶದ ಆರ್ಥಿಕತೆಗಳು ನೈಸರ್ಗಿಕ ಅನಿಲ ಮತ್ತು ತೈಲವನ್ನು ಅವಲಂಬಿಸಿವೆ. ಇದು ವಿಶ್ವದ ಅತ್ಯಂತ ಸುರಕ್ಷಿತ ದೇಶಗಳಲ್ಲಿಯೂ ಸೇರಿದೆ.
5 ಬ್ರೂನೇಯಿ ದಾರುಸ್ಸಲಾಮ್ (Brunei Darussalam) –
ಇದು ಪೂರ್ವ-ದಕ್ಷಿಣ ಏಷ್ಯಾ ಮತ್ತೊಂದು ಶ್ರೀಮಂತ ದೇಶ. ಅದರ ಹೆಚ್ಚಿನ ಆದಾಯವು ಅನಿಲ ಮತ್ತು ಕಚ್ಚಾ ತೈಲ ರಫ್ತಿನಿಂದ ಬರುತ್ತದೆ. 5 ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿರುವ ಈ ದೇಶವನ್ನು ಕಡಿಮೆ ಜನಸಂಖ್ಯೆ ಹೊಂದಿರುವ ದೇಶಗಳಲ್ಲಿ ಎಣಿಸಲಾಗುತ್ತದೆ.
6 ಹಾಂಗ್ ಕಾಂಗ್ –
ವಿಶ್ವದಾದ್ಯಂತ ಹೂಡಿಕೆದಾರರಿಗೆ ಏಷ್ಯಾದ ಅತ್ಯಂತ ಆದ್ಯತೆಯ ತಾಣವೆಂದರೆ ಹಾಂಗ್ ಕಾಂಗ್. ಚೀನಾದಿಂದ ರಕ್ಷಣಾ ಮತ್ತು ಭದ್ರತೆಯನ್ನು ಹೊಂದಿರುವ ಹಾಂಗ್ ಕಾಂಗ್ ವಿಭಿನ್ನ ಕರೆನ್ಸಿಯನ್ನು ಹೊಂದಿದೆ. ಅಲ್ಲದೆ ಇದು ವಿಶ್ವದ ಅತ್ಯಂತ ದುಬಾರಿ ದೇಶವಾಗಿದೆ.
ಈಗ ಕತಾರ್ ಹೇಗೆ ಇಷ್ಟೆತ್ತರ ಬೆಳೆದು ನಿಂತಿತು ಎಂಬುದರ ವಿಡಿಯೊ ಮೇಲಿದೆ. ಮೀನು ಹಿಡಿದು ಜೀವನ ಸಾಗಿಸುತ್ತಿದ್ದ ಆ ದೇಶ ಏಕಾಏಕಿ ಬೆಳೆದು ನಿಂತ ಪರಿಯನ್ನು ವಿಡಿಯೊದಲ್ಲಿ ವಿವರಿಸಲಾಗಿದೆ. ಆಸಕ್ತರು ನೋಡಿ.
-Team Infotrend