ತಾಯಿಗೆ ಗೊತ್ತಾಗದಂತೆ ಮಗ ಹಿಂದಿನಿಂದ ತಾಯಿಯ ಕೊರಳಲ್ಲಿ ಹಾಕಿದ ಚಿನ್ನದ ಸರ; ತಾಯಿಯ ರಿಯಾಕ್ಷನ್ ನೋಡಿ.

ಪ್ರತಿ ತಂದೆ-ತಾಯಿ ಮಕ್ಕಳ ಜೀವನ ಸುಖಕರವಾಗಲೆಂದು ತಮ್ಮ ಶಕ್ತಿ ಮೀರಿ ಪ್ರಯತ್ನಿಸುತ್ತಾರೆ. ಮಕ್ಕಳು ಸುಖದಲ್ಲಿ ಇರಬೇಕೆಂದು ತಂದೆ ತಾಯಿಯರಿಬ್ಬರೂ ಹಗಲು ರಾತ್ರಿ ಕೂಡಿ ದುಡಿಯುತ್ತಾರೆ. ತಮಗೆ ವಂಚಿತವಾದ ಸುಖ ಸೌಲಭ್ಯಗಳು ಮಕ್ಕಳಿಗೆ ದೊರೆಯಲಿ ಎಂಬ ಅಪೇಕ್ಷೆ ಅವರು ಇಟ್ಟಿರುತ್ತಾರೆ. ಇದಕ್ಕೆ ಪ್ರತಿಯಾಗಿ ಪೋಷಕರ ಸಂಧ್ಯಾಕಾಲದಲ್ಲಿ ಚೆನ್ನಾಗಿ ನೋಡಿಕೊಳ್ಳುವ ಜವಾಬ್ದಾರಿ ಪ್ರತಿಯೊಬ್ಬ ಮಕ್ಕಳದ್ದಾಗಿದೆ. ಪ್ರಸ್ತುತ ವಿಡಿಯೋದಲ್ಲಿ ಹುಡುಗನೊಬ್ಬ ಇದೇ ರೀತಿಯ ಒಂದು ಮನಮುಟ್ಟುವ ಕೆಲಸವನ್ನು ಮಾಡಿದ್ದಾನೆ.

ಇಲ್ಲಿ ಮಗನೊಬ್ಬ ತನ್ನ ತಾಯಿಗೆ ಗೊತ್ತಿಲ್ಲದಂತೆ ಸುಂದರವಾದ ಗಿಫ್ಟ್ ಒಂದನ್ನು ನೀಡಿದ್ದಾನೆ. ಟ್ವಿಟರ್ ನಲ್ಲಿ ತಾಯಿ ಮಗನ ಈ ವಿಡಿಯೋ ಸದ್ಯ ಜೋರಾಗಿ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ಕಂಡು ಬರುವ ಪ್ರಕಾರ ಕುಟುಂಬದ ಸದಸ್ಯರೆಲ್ಲರೂ ಒಟ್ಟಿಗೆ ಕುಳಿತುಕೊಂಡು ಊಟ ಮಾಡುತ್ತಿದ್ದಾರೆ. ಇಲ್ಲಿ ತಾಯಿಯು ಎಲ್ಲರಿಗೂ ಊಟಬಡಿಸುತ್ತಿದ್ದಾಳೆ. ಆಗ ಇದೇ ಸಂದರ್ಭದಲ್ಲಿ ಮಗ ತಾಯಿಗೆ ಗೊತ್ತಾಗದಂತೆ ಆಕೆಯ ಹಿಂದಿನಿಂದ ತನ್ನ ತಾಯಿಯ ಕೊರಳಲ್ಲಿ ಚಿನ್ನದ ಸರವನ್ನು ತೊಡಿಸುತ್ತಾನೆ. ಮಗ ಕೊರಳಲ್ಲಿ ಹಾಕಿದ ಬೆಲೆಬಾಳುವ ಚಿನ್ನದ ಸರವನ್ನು ನೋಡಿ ತಾಯಿಯು ಆಶ್ಚರ್ಯದಿಂದ ಮಂತ್ರ ಮುಗ್ಧವಾಗಿಬಿಡುತ್ತಾಳೆ.

ನೋಡಿ ಈ ವಿಡಿಯೋ…

https://twitter.com/Gulzar_sahab/status/1592199922484670464?ref_src=twsrc%5Etfw%7Ctwcamp%5Etweetembed%7Ctwterm%5E1592199922484670464%7Ctwgr%5E37046701c443307601dface544ce9bd489471439%7Ctwcon%5Es1_c10&ref_url=https%3A%2F%2Fd-4407680312437188240.ampproject.net%2F2211042305000%2Fframe.html

ಹೃದಯ ತಟ್ಟುವ ಈ ಭಾವನಿಕವಾದ ವಿಡಿಯೋ ಟ್ವಿಟರ್ ನಲ್ಲಿ ಎಲ್ಲರ ಮನಸ್ಸು ಗೆಲ್ಲುತ್ತಿದೆ. ನೆಟ್ಟಿಗರಿಗೆ ಈ ವಿಡಿಯೋ ತುಂಬಾ ಇಷ್ಟವಾಗಿದೆ. ನೇಟಿಜನ್ಸ್ ಗಳು ಈ ವಿಡಿಯೋಗೆ ಸಂಬಂಧಿಸಿದಂತೆ ಕಮೆಂಟ್ ಬಾಕ್ಸ್ ನಲ್ಲಿ ತುಂಬಾ ಒಳ್ಳೆಯ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.