ಶಾಕಿಂಗ್ ಸುದ್ದಿ : ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕು ನೋಡಲು ಒಂದೇ ಥರ ಇದ್ದ ಇಬ್ಬರು ಗೆಳತಿಯರು DNA ಟೆಸ್ಟ್ ಮಾಡಿಸಿದಾಗ ಗೊತ್ತಾಗಿದ್ದು ಏನು ಗೊತ್ತಾ?

ನೀವು ಕೆಲವು ಚಲನಚಿತ್ರಗಳಲ್ಲಿ ನೋಡಿರಬಹುದು ಚಿಕ್ಕವರಿದ್ದಾಗ ಒಬ್ಬರಿಂದ ಒಬ್ಬರು ಯಾವುದೋ ಜಾತ್ರೆ ಅಥವಾ ಸಂತೆಯಲ್ಲಿ ಕಳೆದುಕೊಂಡು, ಅಥವಾ ಅವಳಿ ಮಕ್ಕಳು ಜನಿಸಿದಾಗ ಒಬ್ಬರನ್ನು ಬೇರೆ ಯಾರೋ ಕದೋಯ್ದು ನಂತರ ದೊಡ್ಡವರಾದ ಮೇಲೆ ಇಬ್ಬರೂ ಒಂದಾಗುವ ಕಥೆಯನ್ನು. ಇವತ್ತು ನಾವು ನಿಮಗೆ ಹೇಳಹೊರಟಿರುವುದು ಕೂಡ ಅಂತಹದೇ ಒಂದು ಇಂಟೆರೆಸ್ಟಿಂಗ್ ಕಥೆಯನ್ನು, ಬನ್ನಿ ನೋಡೋಣ…

ಅವರಿಬ್ಬರು ಮೊದಲು ಪರಿಚಯವಾಗಿದ್ದು ಸೋಶಿಯಲ್ ಮೀಡಿಯಾದಲ್ಲಿ. ನೋಡಲು ಇಬ್ಬರೂ ಒಂದೇ ತೆರನಾಗಿ ಕಾಣುವುದರಿಂದ ಅವರಿಬ್ಬರ ಆ ಪರಿಚಯ ಬಹಳಷ್ಟು ಮುಂದುವರೆದು ಇಬ್ಬರ ನಡುವೆ ಒಳ್ಳೆಯ ಸ್ನೇಹ ಏರ್ಪಟ್ಟು ಭೇಟಿ ಕೂಡ ಆದರು. ಇವರಿಬ್ಬರೂ ಚೀನಾದ ಝೋಂಗ್ ಜೋಹು ದ ಸಮೀಪದ ಹೇನಾನ್ ಪ್ರದೇಶದ ನಿವಾಸಿಗಳು.

ಇವರ ಹೆಸರು ಚೆಂಗ್ ಕೇಕೆ ಮತ್ತು ಜಾಂಗ್ ಲೀ ಅಂತ. ಇಬ್ಬರು ಯುವತಿಯರಲ್ಲಿ ಮೊದಲು ಚೆಂಗ್ ಕೇಕೆ ಎಂಬುವರು ತಮ್ಮ ಸೋಶಿಯಲ್ ಮೀಡಿಯಾ ಸೈಟ್ ಆದಂತ Douyin ಎಂಬುದರಲ್ಲಿ ತಮ್ಮಂತೆಯೇ ಇರುವ ಇನ್ನೊಬ್ಬ ಯುವತಿಯನ್ನು ನೋಡಿದರು. ವಿನಂತಿ ಕಳಿಸಿ ಸಾಮಾಜಿಕ ಜಾಲತಾಣದಲ್ಲಿ ಸ್ನೇಹಿತೆಯಾದರು.

ಇಬ್ಬರನ ನಡುವೆ ಸ್ನೇಹ ಬೆಳೆಯಲು ಬಹಳ ಸಮಯ ಬೇಕಾಗಲಿಲ್ಲ, ಇಬ್ಬರ ಇಷ್ಟಗಳು ಕೂಡ ಒಂದೇ ಆಗಿದ್ದವು. ಕಳೆದ ಮಾರ್ಚ್ ನಲ್ಲಿ ಇಬ್ಬರೂ ಭೇಟಿಯಾದರು. ಭೇಟಿಯಾದಾಗ ಇಬ್ಬರ ವಿಚಾರಗಳು ಕೂಡ ಒಂದೇ ಆಗಿದ್ದವು. ಚೆಂಗ್ ಅವರು ತಮ್ಮ ಪಾಲಕರ ಹತ್ತಿರ ಈ ವಿಚಾರವನ್ನು ತಿಳಿಸಿದರು.

ಇದನ್ನು ತಿಳಿಸಿದ ನಂತರ ಅವಳನ್ನು ಅವರ ಪಾಲಕರು ದತ್ತು ಪಡೆದಿದ್ದ ವಿಚಾರ ಬೆಳಕಿಗೆ ಬಂತು. ಈ ವಿಚಾರ ಚೆಂಗ್ ಅವರಿಗೆ ತಿಳಿದಿರಲಿಲ್ಲ, ತಿಳಿದ ನಂತರ ಅವರು ಈ ವಿಚಾರವನ್ನು ಸ್ನೇಹಿತೆಗೆ ತಿಳಿಸಿದಳು. ನಂತರ ಅವಳೂ ಕೂಡ ಈ ವಿಚಾರವಾಗಿ ತಮ್ಮ ತಾಯಿಯ ಹತ್ತಿರ ಹೇಳಿದಾಗ ಅವರು ಕೂಡ, ನಿಜ ನಮಗೆ ಇಬ್ಬರು ಮಕ್ಕಳನ್ನು ಸಾಕುವ ಶಕ್ತಿ ಇರಲಿಲ್ಲ, ಹೀಗಾಗಿ ಒಬ್ಬಳನ್ನು ದತ್ತು ಕೊಟ್ಟಿದ್ದೆವು ಎಂದು ಹೇಳಿದರಂತೆ.

ಈ ಸುದ್ದಿ ತಿಳಿದ ತಕ್ಷಣ ಈ ಇಬ್ಬರೂ ಸೇರಿ ಡಿ ಏನ್ ಏ ಟೆಸ್ಟ್ ಮಾಡಿಸಿದಾಗ ಇಬ್ಬರ ಡಿ ಏನ್ ಏ ಕೂಡ ಹೊಂದಾಣಿಕೆಯಾದವಂತೆ! ಸಾಮಾಜಿಕ ಜಾಲತಾಣವೊಂದು ಇಬ್ಬರು ಅಕ್ಕ ತಂಗಿಯರನ್ನು ಒಂದುಗೂಡಿಸಿದ ನೈಜ ಕಥೆಯಿದು. ಫಿಲಂ ಸ್ಟೋರಿ ಇದ್ದಂತೆ ಇದೆಯಲ್ಲವಾ?
-ಮಂಜುನಾಥ್