ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್ ಫೈನಲ್‌ ನಲ್ಲಿ ಸೋತ ನಂತರ ವಿರಾಟ್ ಕೊಹ್ಲಿ ಹೇಳಿದ ವಿಭಿನ್ನ ನೆಪಗಳು!

ಇಂಗ್ಲೆಂಡ್‌ ನಲ್ಲಿ ಆಡಿದ ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್‌ ನ ಫೈನಲ್ ಪಂದ್ಯದ ನಂತರ, ಪ್ರತಿಯೊಬ್ಬ ಭಾರತೀಯನ ಕನಸು ಚೂರುಚೂರಾಯಿತು. ಈ ವಿಶ್ವಕಪ್ ಟೆಸ್ಟ್ ಕ್ರಿಕೆಟ್ ಅನ್ನು ನ್ಯೂಜಿಲೆಂಡ್ 8 ವಿಕೆಟ್‌ಗಳಿಂದ ಗೆದ್ದುಕೊಂಡಿತು. ಪಂದ್ಯದಲ್ಲಿ ಟೀಮ್ ಇಂಡಿಯಾ ಅನೇಕ ತಪ್ಪುಗಳನ್ನು ಮಾಡಿತು ಮತ್ತು ಇದರ ಪರಿಣಾಮವಾಗಿ ಟೆಸ್ಟ್ ಕ್ರಿಕೆಟ್‌ ನ ಕಿರೀಟವನ್ನು ಅವರಿಂದ ಕಸಿದುಕೊಳ್ಳಲಾಯಿತು. ಪಂದ್ಯದ ನಂತರ ಭಾರತದ ತಂಡದ ನಾಯಕ ವಿರಾಟ್ ಕೊಹ್ಲಿ ಈ ಸೋಲಿಗೆ ವಿಭಿನ್ನ ನೆಪಗಳನ್ನು ಹೇಳುತ್ತಿದ್ದರು.

ಪಂದ್ಯದಲ್ಲಿ ಭಾರತ ತಂಡವು ಎರಡನೇ ಇನ್ನಿಂಗ್ಸ್‌ನಲ್ಲಿ 170 ರನ್‌ಗಳಿಗೆ ಔಟಾಯಿತು. ನ್ಯೂಜಿಲೆಂಡ್ 139 ರನ್ ಗಳಿಸುವ ಗುರಿಯನ್ನು ಪಡೆದುಕೊಂಡಿತು, ಕೇನ್ ವಿಲಿಯಮ್ಸನ್ (52 ನಾಟ್ ಔಟ್) ಮತ್ತು ರಾಸ್ ಟೇಲರ್ (ಔಟಾಗದೆ 47) ನಡುವಿನ ಮೂರನೇ ವಿಕೆಟ್‌ಗೆ 96 ರನ್‌ ಗಳ ಜೊತೆಯಾಟದೊಂದಿಗೆ ಎರಡು ವಿಕೆಟ್‌ಗಳನ್ನು ಕಳೆದುಕೊಂಡು ಗುರಿ ತಲುಪಿತು.

ಮಳೆಯ ಮೇಲೆ ಸೋಲಿನ ಭಾರ ಹೊರಿಸಿದ ವಿರಾಟ್!
ವಿಶ್ವ ನಾಯಕ ಟೆಸ್ಟ್ ಚಾಂಪಿಯನ್‌ ಶಿಪ್ (ಡಬ್ಲ್ಯುಟಿಸಿ) ಫೈನಲ್‌ ನಲ್ಲಿ ನ್ಯೂಜಿಲೆಂಡ್ ಗೆಲುವಿಗೆ ಅರ್ಹರು ಎಂದು ಕರೆದ ಭಾರತದ ನಾಯಕ ವಿರಾಟ್ ಕೊಹ್ಲಿ, ಮಳೆಯ ಅಡಚಣೆಯಿಂದಾಗಿ ತಮ್ಮ ತಂಡದ ಲಯಕ್ಕೆ ತೊಂದರೆಯಾಯಿತು ಎಂದು ಹೇಳಿದರು. ಆದರೆ ಇದೇ ಮಳೆ ನ್ಯೂಜಿಲ್ಯಾಂಡ್ ಲಯಕ್ಕೆ ಏಕೆ ತೊಂದರೆ ಮಾಡಲಿಲ್ಲವೋ ಗೊತ್ತಿಲ್ಲ.

“ಮೊದಲ ದಿನ ಮಳೆಯಿಂದ ಕೊಚ್ಚಿ ಹೋಯಿತು, ಮತ್ತು ಆಟವು ಪುನರಾರಂಭಗೊಂಡಾಗ ಲಯವನ್ನು ಕಂಡುಕೊಳ್ಳುವುದು ಕಷ್ಟಕರವಾಗಿತ್ತು. ನಾವು ಕೇವಲ ಮೂರು ವಿಕೆಟ್‌ಗಳನ್ನು ಕಳೆದುಕೊಂಡೆವು, ಆದರೆ ಆಟವು ಯಾವುದೇ ಅಡೆತಡೆಯಿಲ್ಲದೆ ನಡೆದಿದ್ದರೆ, ನಾವು ಹೆಚ್ಚಿನ ರನ್ ಗಳಿಸಬಹುದಿತ್ತು.” ಎಂದು ವಿರಾಟ್ ಹೇಳಿದರು.

ಬ್ಯಾಟ್ಸ್‌ಮನ್‌ ಗಳು ಸೋಲಿಗೆ ಕಾರಣ ಎಂದ ಕೊಹ್ಲಿ :
ವಿರಾಟ್ ಕೊಹ್ಲಿ ತಮ್ಮ ತಂಡವು ಎರಡನೇ ಇನ್ನಿಂಗ್ಸ್‌ನಲ್ಲಿ 30-40 ರನ್ ಹೆಚ್ಚು ಗಳಿಸಿದ್ದರೆ, ಫಲಿತಾಂಶವು ವಿಭಿನ್ನವಾಗಿರಬಹುದು ಎಂದು ಹೇಳಿದರು. ‘ಕೇನ್ ವಿಲಿಯಮ್ಸನ್ ಮತ್ತು ನ್ಯೂಜಿಲೆಂಡ್‌ನ ಇಡೀ ತಂಡಕ್ಕೆ ಅಭಿನಂದನೆಗಳು. ಅವರು ಉತ್ತಮ ಮನೋಭಾವವನ್ನು ತೋರಿಸಿದರು ಮತ್ತು ಮೂರು ದಿನಗಳಲ್ಲೇ ಬೇಕಾದ ಫಲಿತಾಂಶವನ್ನು ಪಡೆದುಕೊಂಡರು.”

ಅವರು ನಮ್ಮ ಮೇಲೆ ಒತ್ತಡ ಹೇರಿದರು, ಅವರು ಗೆಲ್ಲಲು ಅರ್ಹರು, ನ್ಯೂಜಿಲೆಂಡ್ ಬೌಲರ್‌ ಗಳು ತಮ್ಮ ಕಾರ್ಯತಂತ್ರವನ್ನು ಚೆನ್ನಾಗಿ ನಿರ್ವಹಿಸಿದರು. ನಾವು 30 ರಿಂದ 40 ರನ್ ಕಡಿಮೆ ಗಳಿಸಿದೆವು, ಇದೇ ಸೋಲಿಗೆ ಕಾರಣವಾಯಿತು ಎಂಬುದು ವಿರಾಟ್ ಅಭಿಪ್ರಾಯ.

ನ್ಯೂಜಿಲೆಂಡ್ ತಂಡ ಚಾಂಪಿಯನ್!
ಈ ಪಂದ್ಯದ ಮೊದಲ ಇನ್ನಿಂಗ್ಸ್‌ ನಲ್ಲಿ ಭಾರತದ ಆಟಗಾರರು ಅದ್ಭುತ ಪ್ರದರ್ಶನ ನೀಡಿದರೆ, ಎಲ್ಲರೂ ಎರಡನೇ ಇನ್ನಿಂಗ್ಸ್‌ನಲ್ಲಿ ಸಂಪೂರ್ಣವಾಗಿ ಫ್ಲಾಪ್ ಆಗಿದ್ದರು. ಬ್ಯಾಟಿಂಗ್‌ ನಲ್ಲಿ ಭಾರತವನ್ನು ಕೇವಲ 170 ರನ್‌ ಗಳಿಗೆ ಪೆವೆಲಿಯನ್ ಗೆ ಕಳಿಸಲಾಯಿತು. ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ ಮತ್ತು ರೋಹಿತ್ ಶರ್ಮಾ ಅವರಂತಹ ದೊಡ್ಡ ಆಟಗಾರರು ರನ್ ಮಾಡಲು ಸಾಧ್ಯವಾಗಲಿಲ್ಲ.

ಮತ್ತೊಂದೆಡೆ, ಅಶ್ವಿನ್ ಹೊರತುಪಡಿಸಿ, ಬೌಲರ್‌ಗಳಲ್ಲಿ ಯಾರೊಬ್ಬರೂ ನಿರೀಕ್ಷೆಗೆ ತಕ್ಕಂತೆ ಆಡಲು ಸಾಧ್ಯವಾಗಲಿಲ್ಲ. ಎರಡನೇ ಇನ್ನಿಂಗ್ಸ್‌ನಲ್ಲಿ 170 ರನ್‌ಗಳಿಗೆ ಆಲೌಟ್ ಆದ ನಂತರ, ಟೀಮ್ ಇಂಡಿಯಾ ನ್ಯೂಜಿಲೆಂಡ್ ಎದುರು 139 ರನ್‌ಗಳ ಸಣ್ಣ ಗುರಿಯನ್ನು ನೀಡಿತು. ಎರಡು ವಿಕೆಟ್‌ಗಳನ್ನು ಕಳೆದುಕೊಳ್ಳುವ ಮೂಲಕ ಅವರು ಸುಲಭವಾಗಿ ಗೆಲುವು ಸಾಧಿಸಿದರು. ಇದರೊಂದಿಗೆ ನ್ಯೂಜಿಲ್ಯಾಂಡ್ ತಂಡವು ವಿಶ್ವದ ಮೊದಲ ಟೆಸ್ಟ್ ಚಾಂಪಿಯನ್ ಆಗಿ ಹೊರಹೊಮ್ಮಿತು.