WWF ರೇಂಜ್’ಗೆ ಫೈಟ್ ಮಾಡಿದ ಹುಲಿಗಳು! ನೋಡಿ ಈ ಅಪರೂಪದ Viral Video!

ಸೋಷಿಯಲ್ ಮೀಡಿಯಾದಲ್ಲಿ ಪ್ರಾಣಿಗಳ ವಿಡಿಯೋ ತುಂಬಾ ವೈರಲ್ ಆಗುತ್ತಿರುತ್ತವೆ. ಅದರಲ್ಲಿ ಪ್ರಾಣಿಗಳ ವಿಶೇಷವಾದ ವಿಡಿಯೋಗಳು ನೆಟ್ಟಿಗರಿಗೆ ತುಂಬಾ ತುಂಬಾ ಮೆಚ್ಚುಗೆಯಾಗುತ್ತವೆ. ಇತ್ತೀಚೆಗೆ ಎರಡು ಹುಲಿಗಳ ಕಾದಾಟದ ವಿಡಿಯೋ ಒಂದು ತುಂಬಾ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಹೆಣ್ಣು ಹುಲಿಗಾಗಿ ಎರಡು ಗಂಡು ಹುಲಿಗಳು ಸೆಣಸಿವೆ.

ಈ ವಿಡಿಯೋ ರಾಜಸ್ಥಾನದ ಸವಾಯಿ ಮಾಧೋಪುರ್ ದಲ್ಲಿಯ ರಣಥಂಬೋರ್ ನ್ಯಾಷನಲ್ ಪಾರ್ಕ್ ನಲ್ಲಿ ಟೈಗರ್ ನಂಬರ್ 57 ಮತ್ತು ಟೈಗರ್ ನಂಬರ್ 58 ರಲ್ಲಿ ಜೋರಾದ ಜಗಳವಾಗಿದೆ. ಅಲ್ಲಿ ಸುತ್ತಾಡಲು ಹೋಗ ಪ್ರವಾಸಿಗರು ಈ ವಿಡಿಯೋವನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ. ಈ ಜಗಳದ ಕಾರಣ ಮುಖ್ಯವಾಗಿ ಹೆಣ್ಣು ಹುಲಿಯಾಗಿದೆ.

ಈ ವಿಡಿಯೋವನ್ನು ಐಎಫ್ಎಸ್ ಅಧಿಕಾರಿಯಾದ ರಮೇಶ್ ಪಾಂಡೆಯವರು ತಮ್ಮ ಟ್ವಿಟರ್ ಅಕೌಂಟ್ ನಿಂದ ಶೇರ್ ಮಾಡಿದ್ದಾರೆ. ವರ್ಷದ ಹಿಂದೆ ಬೇರೊಬ್ಬ ಐಎಫ್ಎಸ್ ಅಧಿಕಾರಿಯಾದ ಪ್ರವೀಣ್ ಕಾಸ್ವಾನ್ ಅವರು ಶೇರ್ ಮಾಡಿದ ವಿಡಿಯೋವನ್ನು ಮತ್ತೊಮ್ಮೆ ರಮೇಶ್ ಅವರು ಶೇರ್ ಮಾಡಿದ್ದಾರೆ.

ವಿಡಿಯೋ ನೋಡಿ…..

ವಿಶೇಷವೆಂದರೆ, ಈ ಹುಲಿಗಳ ಜಗಳ ಪ್ರಾರಂಭವಾದ ನಂತರ ಹೆಣ್ಣು ಹುಲಿ ಮಾತ್ರ ಅಲ್ಲಿಂದ ಕಾಲ್ಕಿತ್ತಿದೆ. ಹುಲಿಗಳ ಜಗಳದಲ್ಲಿ ಯಾವ ಹುಲಿಗೂ ವಿಶೇಷವಾದ ಗಾಯಗವಾಗಿಲ್ಲ, ಆದರೆ ನೆಟ್ಟಿಗರು ಮಾತ್ರ ತುಂಬಾ ಇಂಟರೆಸ್ಟ್ ನಿಂದ ಈ ಜಗಳವನ್ನು ನೋಡುತ್ತಿದ್ದಾರೆ.