Video; ಸ್ವಲ್ಪ ಯಾಮಾರಿದ್ರೂ ಪ್ರಪಾತಕ್ಕೆ; ಆದರೂ ಕಂದಕದಲ್ಲಿ ಜಾರಿದ ಹಸುಗರುವಿಗೆ ಧೈರ್ಯದಿಂದ ಉಳಿಸಿ ಮರುಜೀವ ನೀಡಿದ ರೈತನ ಮಕ್ಕಳು…

ಮಳೆ ಶುರುವಾಯ್ತು ಅಂದರೆ ಮುಗೀತು. ಎಲ್ಲಡೆ ಸಂತೋಷವೇ ಸಂತೋಷ. ಆದರೆ ಈ ಮಳೆ ಸಂತೋಷದ ಜೊತೆಗೆ ಕೆಲವೊಮ್ಮೆ ಅತೀಯಾಗಿ ಕೆಲವೆಡೆ ಪ್ರವಾಹ ಪರಿಸ್ಥಿತಿಯನ್ನು ನಿರ್ಮಾಣ ಮಾಡಿ ಬಿಡುತ್ತದೆ. ಆಗ ಅದರ ರೌದ್ರ ರೂಪ ತುಂಬಾ ಭೀಕರವಾಗಿ ಕಂಡು ಬರುತ್ತದೆ. ಕರ್ನಾಟಕದ ಜೊತೆಗೆ ಮಹಾರಾಷ್ಟ್ರದಲ್ಲೂ ಮಳೆರಾಯ ಸದ್ಯ ಅಬ್ಬರಿಸುತ್ತಿದ್ದಾನೆ. ಇಂಥ ಮಳೆಯಲ್ಲಿ ಮನುಷ್ಯನ ಜೊತೆಗೆ ಪ್ರಾಣಿಗಳು ಸಹ ತುಂಬಾ ಸಂಕಷ್ಟಕ್ಕೆ ಸಿಲುಕುತ್ತವೆ. ಇದೇ ಮಳೆಯಲ್ಲಿ ತರುಣರು, ಪ್ರಪಾತಕ್ಕೆ ಬೀಳಲಿರುವ ಹಸುಗರುವಿನ ರೆಸ್ಕ್ಯೂ ಆಪರೇಶನ್ ಸಕ್ಸೆಸ್ ಮಾಡಿದ ವಿಡಿಯೋದ ದೃಶ್ಯವೊಂದು ನೇಟಿಜನ್ಸ್ ಗಳ ಮನ ಗೆದ್ದಿದೆ.

ಪ್ರಸ್ತುತ ವಿಡಿಯೋ ಮುಂಬಯಿ ಹತ್ತಿರದ ಪನವೆಲ್ ಪಟ್ಟಣದ ಹೊರವಲಯದಲ್ಲಿಯದಿದೆ. ಇಲ್ಲಿ ಬೆಟ್ಟದ ಮೇಲಿನಿಂದ ಪ್ರಪಾತಕ್ಕೆ ಹಸುವಿನ ಕರು ಒಂದು ಬೀಳುವದರಲ್ಲಿತ್ತು. ಅದೃಷ್ಟವಶಾತ್ ಹೇಗೋ ಅದು ಅಲ್ಲಿ ಮಳೆಯಲ್ಲಿ ಎಂಜಾಯ್ ಮಾಡುವ ಉದ್ದೇಶದಿಂದ ಸುತ್ತಾಡಲು ಬಂದ ಹರೆಯದ ಚಾರಣಿಗರಿಗೆ ಕಾಣಿಸಿದೆ. ಮನ ಕರಗಿದೆ. ಉಳಿಸುವ ಪ್ರಯತ್ನ ಪ್ರಾರಂಭಿಸಿಯೇ ಬಿಟ್ಟಿದ್ದಾರೆ.

ವಿಡಿಯೋದಲ್ಲಿಯ ದೃಶ್ಯ ನೋಡಿದಾಗ ನೋಡುಗರ ಮೈ ನವಿರೇಳಿಸುತ್ತದೆ. ಕಾರಣ ಈ ಪ್ರಯತ್ನ ಮಾಡುವಾಗ ಸ್ವಲ್ಪೇ ಸ್ವಲ್ಪ ಯಾಮಾರಿದ್ರೂ ಕಥೆ ಮುಗಿದಂತೆಯೇ ಸರಿ. ಅಂಥ ತುಂಬಾ ಕ್ಲಿಷ್ಟಕರವಾದ ಸ್ಥಳದಲ್ಲಿ ಇಳಿದು ಏರಿ ಕರುವಿನ ಕಾಲಿಗೆ ಹಗ್ಗವನ್ನು ಕಟ್ಟಿ ಅನಾಮತ್ತಾಗಿ ಅದಕ್ಕೆ ಮೇಲೆ ಎಳೆದುಕೊಂಡಿದ್ದಾರೆ. ಈ ಪ್ರಯತ್ನವನ್ನು ಸುಮಾರು ಏಳೆಂಟು ಜನ ಹದಿಹರೆಯದ ತರುಣರು ಕೂಡಿ ಮಾಡಿದ್ದಾರೆ, ಮತ್ತು ತಮ್ಮ ಪ್ರಯತ್ನದಲ್ಲಿ ಯಶಸ್ಸನ್ನು ಕಂಡಿದ್ದಾರೆ.

ಯುವಕರ ಈ ಸುಂದರ ಕೆಲಸ ಎಲ್ಲರಿಗೂ ಮನಸೋ ಇಚ್ಛೆ ಇಷ್ಟವಾಗಿದೆ. ಮತ್ತು ಕಾಮೆಂಟ್ ಸೆಕ್ಷನ್ ನಲ್ಲಿ ಯುವಕರನ್ನು ಹೊಗಳಿದ್ದೇ ಹೊಗಳಿದ್ದು. ಒಬ್ಬ ಯೂಸರ್ ಈ ಯುವಕರು ಪಕ್ಕಾ ರೈತನ ಮಕ್ಕಳಾಗಿದ್ದಾರೆ ಅದಕ್ಕೆ ಇಂಥ ಸಾಹಸದ ಕೆಲಸಕ್ಕೆ ಕೈ ಹಾಕಿದ್ದಾರೆ ಎಂದಿದ್ದಾನೆ. ಇನ್ನೊಬ್ಬ ಈ ತರುಣರ ರಕ್ತದಲ್ಲಿ ರೈತರ ರಕ್ತ ಸಂಚರಿಸುತ್ತಿದೆ ಅದಕ್ಕಾಗಿಯೇ ಇವರು ಇಂಥ ಮಹಾನ್ ಕೆಲಸ ಮಾಡಿ ಮೂಕ ಪ್ರಾಣಿಯ ಜೀವವನ್ನು ಉಳಿಸಿದ್ದಾರೆ ಎಂದಿದ್ದಾನೆ.

ವಿಡಿಯೋ ನೋಡಿ