Youtube Vs TikTok: ಯೂಟ್ಯೂಬ್ ಜೊತೆಗಿನ ಜಗಳ ಟಿಕ್ ಟಾಕ್ ಗೆ ಬಿತ್ತು ಭಾರಿ ಹೊಡೆತ! ಟಿಕ್ ಟಾಕ್ ಭಾರತದಿಂದ ಗಂಟು ಮೂಟೆ ಕಟ್ಟಿಕೊಂಡು ಹೋಗುವ ಸಮಯ ಬಂತಾ?
TikTok ಜನಪ್ರಿಯತೆ ಸದ್ಯಕ್ಕೆ ದಿನದಿಂದದಿನಕ್ಕೆ ಕಡಿಮೆಯಾಗುತ್ತಿರುವದು ಕಂಡು ಬಂದಿದೆ. ಪ್ಲೇ ಸ್ಟೋರ್ ನಲ್ಲಿ ಟಿಕ್ ಟಾಕ್ ರೇಟಿಂಗ್ ಒಮ್ಮೆಲೇ ಕಡಿಮೆಯಾಗಿದೆ. ಇದೇ ಟಿಕ್ ಟಾಕ್ ಗೆ ಒಂದು ಸಮಯದಲ್ಲಿ 4.6 ರೇಟಿಂಗ್ ಇದ್ದದ್ದು ಈಗ 1.2 ರೇಟಿಂಗ್ ಗೆ ಬಂದಿದೆ. ಇಷ್ಟೇ ಸಾಕು ಭಾರತೀಯರು ಮನಸ್ಸು ಮಾಡಿದರೆ ಒಂದು ರಾತ್ರಿಯಲ್ಲಿ ಹೀರೊ, ಇಲ್ಲ ಒಂದೇ ರಾತ್ರಿಯಲ್ಲಿ ಜೀರೋ ಸಹಿತ ಮಾಡುತ್ತಾರೆ. ಈ ಯೂಟ್ಯೂಬ್ ಮತ್ತು ಟಿಕ್ ಟಾಕ್ ವಾರ್ ನಲ್ಲಿ ಸಾಕಷ್ಟು ಜನ ಯೂಟ್ಯೂಬಿಗೆ ಸಮರ್ಥನೆ ಮಾಡಿದ್ದೂ ಅಷ್ಟೇ ಅಲ್ಲ ಟಿಕ್ ಟಾಕ್ ಅಕೌಂಟ್ ಡಿಲೀಟ್ ಮಾಡಿದ್ದಾರೆ. ಅನೇಕ ನೆಟ್ಟಿಗರು ಈ ವರ್ಚ್ಯುಅಲ್ ವಾರ್ ನಲ್ಲಿ ಭಾಗಿಯಾಗಿ ಟಿಕ್ ಟಾಕ್ ಮೇಲೆ ಆಕ್ರಮಣ ಮಾಡುತ್ತಾ ಯುಟ್ಯೂಬಿಗೆ ಸಮರ್ಥನೆ ತೋರಿದ್ದಾರೆ. ಕಳೆದ ಕೆಲವು ದಿನಗಳಿಂದ ಯೂಟ್ಯೂಬ್ ಮತ್ತು ಟಿಕ್ ಟಾಕ್ ಇವೆರಡರಲ್ಲಿ ಯಾರು ಶ್ರೇಷ್ಠವೆಂಬ ಶೀತಯುದ್ಧ ಸದ್ಯಕ್ಕೆ ಕಾಣಸಿಗುತ್ತಿದೆ.

ಈ ಯುದ್ಧದ ಪ್ರಾರಂಭ ಅಮೀರ್ ಸಿದ್ಧಿಕಿ ಹೆಸರಿನ ಪ್ರಸಿದ್ಧ ಟಿಕ್ ಟಾಕರ್ ನ ವಿಡಿಯೋದಿಂದ ಆಯಿತು. ಅಮೀರ್ ಮೊದಲು ಯುಟ್ಯೂಬರ್ಸ್ ಗಳ ಕುಚೇಷ್ಟೆ ಮಾಡಿದ ವಿಡಿಯೋ ಒಂದನ್ನು ಶೇರ್ ಮಾಡಿದ ನಂತರ ಅದಕ್ಕೆ ಉತ್ತರವಾಗಿ ಸುಪ್ರಸಿದ್ಧ ಯುಟ್ಯೂಬರ್ ಕ್ಯಾರಿ ಮಿನತಿ ಅಮೀರ್ ನಿಗೆ ಆತನ ಭಾಷೆಯಲ್ಲಿಯೇ ಜಬರ್ ದಸ್ತ ಉತ್ತರವನ್ನು ಕೊಡುತ್ತ ರೋಸ್ಟ್ ಮಾಡಿದನು. ಕ್ಯಾರಿಯ ಈ ವಿಡಿಯೋ ಶರವೇಗದಲ್ಲಿ ವೈರಲ್ ಆಯಿತು, ಆದ್ರೆ ಈ ವಿಡಿಯೋ ಯುಟ್ಯೂಬಿನ ಶರತ್ತುಗಳಿಗನುಗುಣವಾಗಿಲ್ಲದ್ದರಿಂದ ಯೂಟ್ಯೂಬ್ ಅದನ್ನು ತೆಗೆದು ಹಾಕಿತು. ಅದಾದ ನಂತರ ಕ್ಯಾರಿ ಮತ್ತೊಂದು ವಿಡಿಯೋವನ್ನು ಯುಟ್ಯೂಬಿನಲ್ಲಿ ಶೇರ್ ಮಾಡಿದ ಅದೂ ಸಹ ಸಾಕಷ್ಟು ವೈರಲ್ ಆಗಿದೆ.
ಇನ್ನೊಬ್ಬ ಟಿಕ್ ಟಾಕರ್ ಫೈಜಲ್ ಸಿದ್ಧಿಕೀ ಹುಡುಗಿಯ ಮೇಲೆ ಎಸಿಡ್ ಚೆಲ್ಲಿದ ವಿಡಿಯೋ ಶೇರ್ ಮಾಡಿದ, ನಂತರ ಈ ವಿಡಿಯೋಗೆ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಆಕ್ಷೇಪ ವ್ಯಕ್ತಪಡಿಸಿ ಮಹಾರಾಷ್ಟ್ರದ ಡಿಜಿಪಿಗೆ ಪತ್ರ ಬರೆದು ಫೈಜಲ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಬೇಡಿಕೆ ಇಟ್ಟಿದ್ದಾರೆ. ಸದ್ಯಕ್ಕೆ 13 ಮಿಲಿಯನ್ ಗಿಂತಲೂ ಅಧಿಕ ಫಾಲೋವರ್ಸ್ ಇರುವ ಫೈಜಲ್ ಸಿದ್ದಿಕಿ ಅಕೌಂಟ್ ಟಿಕ್ ಟಾಕ್ ಬ್ಯಾನ್ ಮಾಡಿದೆ.