VIDEO : ಹೇಗಿದ್ದ ವಿಷ್ಣುಪ್ರಿಯಾ ಹೇಗಾಗಿದ್ದಾಳೆ ಗೊತ್ತಾ? ನೋಡಿದ್ರೆ ಶಾಕ್ ಆಗ್ತಿರಿ!
ಈ ಹುಡುಗಿಯ ಮುಖ ನಿಮಗೆ ನೆನಪಿರಲೇಬೇಕು. ಖುದಾ ಕೀ ಇನಾಯತ್ ಎಂಬ ಹಾಡಿನ ತುಣುಕಿನ ಮೂಲಕ ಭಾರತದಾದ್ಯಂತ ಮನೆಮಾತಾದವಳು. ಆಕೆಯ ಟಿಕ್ ಟಾಕ್ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಯಾವ ಪರಿ ವೈರಲ್ ಆಗಿತ್ತೆಂದರೆ, ಬಹುತೇಕ ಎಲ್ಲರ ಗೋಡೆ ಮೇಲೂ ಆಕೆಯ ವಿಡಿಯೊ ರಾರಾಜಿಸಿತ್ತು. ಟಿಕ್ ಟಾಕ್ ಮೂಲಕ ಬೆಳಕಿಗೆ ಬಂದು ಆಕೆ ಯಶಸ್ವಿ ಯೂಟ್ಯೂಬರ್ ಕೂಡ ಆದಳು.
ಹಲವಾರು ಹಿಂದಿ ಹಾಡುಗಳಿಗೆ ತುಟಿ ಸಿಂಕ್ ಮಾಡುವ ಮೂಲಕ ವಿಷ್ಣುಪ್ರಿಯಾ ಹರೆಯದ ಹುಡುಗರ ನಿದ್ದೆಗೆಡಿಸಿದ್ದಳು. ಟಿಕ್ ಟಾಕ್ ಬ್ಯಾನ್ ಆದ ಮೇಲೆ ಆಕೆ ಇನ್ಸ್ಟಾಗ್ರಾಂ ನಲ್ಲಿ ಸಧ್ಯ 1.5 ಮಿಲಿಯನ್ ಫಾಲೊವರ್ಸ್ ಹೊಂದಿದ್ದಾಳೆ. ವಿಷ್ಣುಪ್ರಿಯಾ ತಮ್ಮ ಖುದಾ ಕೀ ಇನಾಯತ್ ಹಾಡಿನಿಂದ ಇಲ್ಲಿಯವರೆಗೆ ಹೇಗೆ ಬದಲಾಗಿದ್ದಾರೆಂದು ಸ್ಪಷ್ಟವಾಗಿ ನೋಡಬಹುದು.

ದೈಹಿಕವಾಗಿ ಸಾಕಷ್ಟು ಬದಲಾವಣೆಯಾಗಿರುವ ವಿಷ್ಣುಪ್ರಿಯಾರವರು ಈಗ ಹೇಗಿದ್ದಾರೆ ಅಂತ ಫೋಟೊ ಹೇಳುತ್ತದೆ. ಅವರ ಮೊದಲಿನ ವಿಡಿಯೊ ಕೂಡ ಇಲ್ಲಿದೆ ನೋಡಿ, ಅದರಲ್ಲಿ ಅವರು ಹೇಗಿದ್ದಾರೆ ಎಂದು ಗಮನಿಸಿ. ಮಹಾರಾಷ್ಟ್ರದ ಔರಂಗಾಬಾದಗ ಮೂಲದ ಇವರ ಪೂರ್ತಿ ಹೆಸರು ವಿಷ್ಣುಪ್ರಿಯಾ ನಾಯರ್ ಅಂತ.
ಅವತ್ತು ಆಕೆಯನ್ನು ನೋಡಿದವರು ಈಗ ನೋಡಿದರೆ ಒಂದು ಕ್ಷಣ ಶಾಕ್ ಆಗುವುದು, ಅಷ್ಟೊಂದು ಬದಲಾವಣೆ ಕಾಣಬಹುದು. ಇಂಟರ್ ನೆಟ್ ಸಾಕಷ್ಟು ಸ್ಟಾರ್ ಗಳನ್ನು ಕ್ರಿಯೇಟ್ ಮಾಡಿದೆ. ಅದರಲ್ಲಿ ಈ ವಿಷ್ಣುಪ್ರಿಯಾ ಕೂಡ ಒಬ್ಬರು. ಹಿಂದೆ ಪ್ರಿಯಾ ವರ್ರಿಯರ್ ಕೂಡ ಇಲ್ಲಿಂದಲೇ ಬೆಳಕಿಗೆ ಬಂದಿದ್ದು.
ಹಣ – ಹೆಸರು ಎರಡನ್ನೂ ಕೊಟ್ಟಿರುವ ಈ ಇಂಟರ್ ನೆಟ್ ಜಗತ್ತಿನಿಂದಲೇ ಇವತ್ತು ವಿಷ್ಣುಪ್ರಿಯಾ ಈ ಪರಿ ಬದಲಾಗಿದ್ದಾಳೆ. ಯೂಟ್ಯೂಬ್ ಮೂಲಕ ವಿಷ್ಣು ಸಾಕಷ್ಟು ಆದಾಯ ಹಾಘೂ ಖ್ಯಾತಿ ಗಳಿಸುತ್ತಿದ್ದಾಳೆ. ಆ ಮೂಲಕ ಹಲವು ಅವಕಾಶ ಕೂಡ ಕೈ ಬೀಸಿ ಕರೆದಿವೆ. ಮೇಲೆ ಆಕೆಯ ಹಳೆಯ ವಿಡಿಯೊ ಕೂಡ ಇದೆ ನೋಡಿ.
-Team Infotrend