ಅಂಗೈಯಲ್ಲಿಯ ನೀರಿನಲ್ಲಿ ತನ್ನ ದಾಹ ತೀರಿಸಿಕೊಂಡ ಹಾವು: “ಬೇಸಿಗೆ ದಿನಗಳಲ್ಲಿ ಪ್ರಾಣಿಗಳಿಗೆ ಅಲ್ಲಲ್ಲಿ ನೀರಿನ ವ್ಯವಸ್ಥೆ ಮಾಡಿ” ಎಂದ ಐಎಎಸ್ ಅಧಿಕಾರಿ!!!!

ಸದ್ಯಕ್ಕೆ ಬೇಸಿಗೆಯ ಕಾಲ ಶುರುವಾಗಿದ್ದು, ಬಿಸಿಲಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲಿದೆ. ಇಂದಿನ ದಿನಗಳಲ್ಲಿ ಎಲ್ಲಿ ನೋಡಿದರಲ್ಲಿ ಬರಿ ಬರುಡಾದ ಭೂಮಿ ಹಾಗೂ ಒಣಗಿದ ಗಿಡಮರಗಳು ಕಾಣುತ್ತವೆ. ಅಲ್ಲದೆ ಗುಡ್ಡುಗಾಡು ಪ್ರದೇಶದಲ್ಲಿ ಒಣಗಿದ ಹುಲ್ಲು ಕಾಣುತ್ತದೆ. ಮಳೆಗಾಲ ಬರುವ ವರೆಗೆ ಇದೆ ತರಹದ ವಾತಾವರಣ ನಿರ್ಮಾಣವಾಗುತ್ತದೆ. ಇದರಿಂದ ಮನುಷ್ಯರಿಗೆ ಅಷ್ಟೇ ಅಲ್ಲದೆ ಪ್ರಾಣಿಗಳಿಗೂ ಸಹ ಹಲವಾರು ಪ್ರಕಾರದ ಸಮಸ್ಯೆ ನಿರ್ಮಾಣ ವಾಗುತ್ತವೆ. ಮನುಷ್ಯನು ಹೇಗಾದರೂ ಮಾಡಿ ತನ್ನ ಬುದ್ಧಿವಂತಿಕೆಯಿಂದ ಆಹಾರ ಮತ್ತು ನೀರಿನ ಸೌಲಭ್ಯ ಮಾಡಿಕೊಳ್ಳುತ್ತಾನೆ. ಆದರೆ ಪ್ರಾಣಿಗಳು ಮಾತ್ರ ತಿನ್ನಲು ಆಹಾರವಿಲ್ಲದೆ ಹಾಗೂ ಕುಡಿಯಲು ನೀರಿಲ್ಲದೆ ಅಲೆದಾಟ ಮಾಡುತ್ತವೆ. ಎಷ್ಟೋ ಮೈಲುಗಳ ವರೆಗೆ ಪ್ರವಾಸ ಸಾಗಿಸಿದರು ಸಹ ಕೆಲವೊಮ್ಮೆ ಪ್ರಾಣಿಗಳಿಗೆ ಆಹಾರ ಮತ್ತು ನೀರು ದೊರೆಯುವದೇ ಇಲ್ಲ.

ಈ ಬೇಸಿಗೆಯ ಕಾಲದಲ್ಲಿ ಪ್ರಾಣಿಗಳು ಆಹಾರ ಮತ್ತು ನೀರಿನ ಹುಡುಕಾಟ ಮಾಡುತ್ತ ಮಾನವನ ವಸತಿಯ ಕಡೆಗೆ ಬರುತ್ತವೆ. ಆಗ ಏನು ಅರಿಯದ ಮಾನವ ಈ ಪ್ರಾಣಿಗಳ ಬೇ#ಟೆಯಾಡುವದು ಅಥವಾ ಅವುಗಳನ್ನು ಹೊಡೆದು ಓಡಿಸುವ ಕಾರ್ಯ ಮಾಡುತ್ತಿರುತ್ತಾನೆ. ಆದರೆ ಎಲ್ಲರೂ ಹಾಗೆ ಇರುತ್ತಾರೆ ಅಂದುಕೊಳ್ಳುವದು ನಮ್ಮ ತಪ್ಪು ಕಲ್ಪನೆ ಏಕೆಂದರೆ ಕೆಲವರು ಪ್ರಾಣಿಗಳನ್ನು ತುಂಬಾನೇ ಪ್ರೀತಿಸುತ್ತಾರೆ ಅದು ಕಾಡು ಪ್ರಾಣಿನೆ ಆಗಲಿ ಅಥವಾ ಸಾಕು ಪ್ರಾಣಿಯೇ ಆಗಲಿ ಅವರು ಅವುಗಳನ್ನು ತುಂಬಾನೇ ಪ್ರೀತಿಸುತ್ತಾರೆ ಅಷ್ಟೇ ಅಲ್ಲದೆ ಅವುಗಳ ಕುರಿತು ತುಂಬಾನೇ ಕಾಳಜಿ ಸಹ ವಹಿಸುತ್ತಾರೆ. ಸದ್ಯಕ್ಕೆ ಅಂತಹದೇ ಒಬ್ಬ ವ್ಯಕ್ತಿಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾನೆ ವೈರಲ್ ಆಗುತ್ತಿದೆ.

ಪ್ರಸ್ತುತ ವೀಡಿಯೋದಲ್ಲಿ ಒಂದು ಹಾವು ತುಂಬಾ ದಾಹದಿಂದ ಅತ್ತ ಇತ್ತ ನೀರು ಹುಡುಕಾಟ ಮಾಡುತ್ತಿರುತ್ತದೆ ಅಷ್ಟರಲ್ಲಿ ಹಾವು ಒಂದು ಸಣ್ಣ ಗಿಡದ ಟೊಂಗೆಯಲ್ಲಿ ಕುಳಿತುಕೊಳ್ಳುತ್ತದೆ ಆಗ ಅಲ್ಲಿಂದ ಹಾಯ್ದು ಹೋಗುತ್ತಿದ್ದ ಒಬ್ಬ ಪ್ರಾಣಿ ಪ್ರೇಮಿ ಈ ಹಾವಿನ ದಾಹದ ಕುರಿತು ಅರ್ಥ ಮಾಡಿಕೊಳ್ಳುತ್ತಾನೆ. ತಕ್ಷಣ ತನ್ನ ಬಳಿಯಲ್ಲಿದ್ದ ನೀರಿನ ಬಾಟಲ್ ಹೊರಗಡೆ ತಗೆದು ಅದಕ್ಕೆ ನೀರು ಕುಡಿಸಬೇಕು ಎಂದು ವಿಚಾರ ಮಾಡುತ್ತಾನೆ. ಆದರೆ ಹಾವು ಬಾಟಲಿಗೆ ರೆಸ್ಪಾನ್ಸ್ ಕೊಡದೆ ಇದ್ದಾಗ ಈ ವ್ಯಕ್ತಿ ಬೇರೇನೇ ಉಪಾಯ ಮಾಡುತ್ತಾನೆ. ಅದೇನೆಂದರೆ ತನ್ನ ಅಂಗೈ ಮುಂದೆ ಮಾಡಿ ಅದರಲ್ಲಿ ಸಾವಕಾಶವಾಗಿ ನೀರು ಹಾಕುತ್ತಾನೆ ಆಗ ತುಂಬಾ ನಿರಡಿಸಿದ ಹಾವು ಅಂಗೈಯಲ್ಲಿಯ ನೀರನ್ನು ಕಂಡು ಮೆಲ್ಲಗೆ ಮುಂದಕ್ಕೆ ಬಂದು ನೀರು ಕುಡಿಯಲು ಶುರು ಮಾಡುತ್ತದೆ.

ವಿಡಿಯೋ ನೋಡಿ

ಒಂದು ಹಾವು ಕಂಡರೆ ಸಾಕು ನಾವು ಹೆದರಿ ಅಲ್ಲಿಂದ ಓಡಿ ಹೋಗುತ್ತೇವೆ. ಆದರೆ ಈ ವ್ಯಕ್ತಿ ಮಾತ್ರ ಅಂತ ವಿಷಕಾರಿ ಹಾವು ಇದ್ದರೂ ಸಹ ಎದೆಗುಂದದೆ ಧೈರ್ಯದಿಂದ ತನ್ನ ಅಂಗೈಯಲ್ಲಿ ನೀರು ಹಾಕಿಕೊಂಡು ಅದಕ್ಕೆ ನೀರು ಕುಡಿಸುತ್ತಾನೆ. ಹಾವಿನ ದಾಹ ಮತ್ತು ವ್ಯಕ್ತಿಯ ಧೈರ್ಯ ಎರಡು ಸಹ ಪ್ರಸ್ತುತ ವಿಡಿಯೋದಲ್ಲಿ ನೀವು ಕಾಣಬಹುದು. ಪ್ರಸ್ತುತ ವೀಡಿಯೋವನ್ನು ಟ್ವಿಟ್ಟರ್ ನಲ್ಲಿ ಶೇರ್ ಮಾಡಲಾಗಿದ್ದು. ಈ ವಿಡಿಯೋ ನೋಡಿದ ಕೂಡಲೇ ಗೆಳೆಯರೇ ನಿಮ್ಮ ಮನೆಯ ಹೊರಗಡೆ ಅಥವಾ ಮನೆಯ ಮೇಲ್ಗಡೇ ಪಕ್ಷಿಗಳಿಗಾಗಿ ನಿಮ್ಮ ಕೈಲಾದಷ್ಟು ಆಹಾರ ಮತ್ತು ನೀರಿನ ಸೌಲಭ್ಯ ಮಾಡಿರಿ ಇದರಿಂದ ಬರುವ ಬೇಸಿಗೆಯ ದಿನಗಳಲ್ಲಿ ಪಕ್ಷಿಗಳಿಗೆ ತುಂಬಾ ಸಹಾಯ ವಾಗುತ್ತೆ. ಅಷ್ಟೇ ಅಲ್ಲ ಯಾವುದೇ ಪ್ರಾಣಿ ಹಸಿವು ಅಂತ ಮನೆಯ ಮುಂದೆ ಬಂದಾಗ ಅದಕ್ಕೆ ಆಹಾರ ನೀಡಿ ಹೊರೆತು ಹೊಡೆದು ಓಡಿಸಬೇಡಿ.