ಅಂತರಿಕ್ಷದಲ್ಲಿ ಒದ್ದೆಯಾದ ಟವೆಲ್ ಹಿಂಡಿದಾಗ ಅದರಿಂದ ನೀರು ಬರುವ ಆ ದೃಶ್ಯ ಹೇಗಿರುತ್ತದೆ ನೋಡಿ ಈ ವಿಡಿಯೋದಲ್ಲಿ…

ಅಂತರಿಕ್ಷದ ಜಗತ್ತು ಇದು ತುಂಬಾ ಬೇರೆಯದೇ ಆದ ಆಶ್ಚರ್ಯ, ಅದ್ಭುತದಿಂದ ಕೂಡಿದೆ. ಇಲ್ಲಿ ಯಾವುದೇ ರೀತಿಯ ಪರ್ಯಾವರಣವು ಇರುವದಿಲ್ಲ ಮತ್ತು ಗುರುತ್ವಾಕರ್ಷಣೆಯೂ ಇರುವದಿಲ್ಲ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಅಂತರಿಕ್ಷ ಯಾತ್ರಿಕ ಒದ್ದೆಯಾದ ಟವೆಲ್ ಒಂದನ್ನು ಹಿಂಡುವ ಪ್ರಯತ್ನ ಮಾಡುತ್ತಿದ್ದಾನೆ. ಅಲ್ಲಿ ಗ್ರ್ಯಾವಿಟಿ ಇಲ್ಲದ ಕಾರಣ ಏನೋ ಒಂದು ಜಾದೂವನ್ನೇ ನೋಡುತ್ತಿದ್ದೆವೆ ಎಂಬಂತೆ ಭಾಸವಾಗುತ್ತದೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ತುಂಬಾ ವೇಗವಾಗಿ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದ ನಂತರ ಸೋಶಿಯಲ್ ಮೀಡಿಯಾ ಯೂಸರ್ಸ್ ತುಂಬಾ ಆಶ್ಚರ್ಯ ವ್ಯಕ್ತ ಮಾಡುತ್ತಿದ್ದಾರೆ.

ಈ ವಿಡಿಯೋದಲ್ಲಿ ಕಂಡು ಬರುವ ಹಾಗೆ ವ್ಯಕ್ತಿ ಒಂದು ಒದ್ದೆಯಾದ ಟವೆಲ್ ಜೊತೆಗೆ ಪ್ರಯೋಗ ಮಾಡುತ್ತಿರುವ ಹಾಗಿದೆ. ಈ ವೀಡಿಯೋವನ್ನು @wonderofscience ಟ್ವಿಟರ್ ಅಕೌಂಟ್ ನಿಂದ ಶೇರ್ ಮಾಡಲಾಗಿದೆ. ಈ ವೀಡಿಯೋವನ್ನು ಇಲ್ಲಿಯವರೆಗೆ 3.9 ಮಿಲಿಯನ್ ಜನರು ವೀಕ್ಷಿಸಿದ್ದಾರೆ. ಜೊತೆಗೆ ಈ ವಿಡಿಯೋಗೆ 1.6 ಲಕ್ಷ ಜನರು ಲೈಕ್ ಹಾಗೂ ರೀಟ್ವಿಟ್ ಮಾಡಿದ್ದಾರೆ.

ವಿಡಿಯೋ ನೋಡಿ

ಈ ವಿಡಿಯೋದ ಕ್ಯಾಪ್ಶನ್ ನಲ್ಲಿ ‘ಅಂತರಿಕ್ಷದಲ್ಲಿ ಒದ್ದೆಯಾದ ಟವೆಲ್ ಹಿಂಡಿ ಪ್ರಯೋಗ ಮಾಡಿದಾಗ ಈ ರೀತಿ ಕಂಡು ಬರುತ್ತದೆ’ ಎಂದಿದ್ದಾರೆ.