Articles

ಬಾಗಿಲು ನುಚ್ಚುನೂರು ಮಾಡಿ ರೆಸ್ಟೋರೆಂಟಿನ ಒಳಗೆ ಬಂದ ಕೋಣ ಮಾಡಿದ್ದೇನು! ಭ#ಯಾನಕ ವಾದ ವೈರಲ್ ವಿಡಿಯೋ…

ಎಮ್ಮೆ, ಕೋಣ, ಹಸು, ಎತ್ತು, ಗೂಳಿ ಇವು ಸಾಕುಪ್ರಾಣಿಗಳೇ ಆದರೂ ರೊಚ್ಚಿಗೆದ್ದಾಗ ಮಾತ್ರ ಮನುಷ್ಯನ ಅಂಕುಶಕ್ಕೆ ಬರುವುದು ತುಂಬಾ ಕಠಿಣವಾಗುತ್ತದೆ. ತಲೆ ಕೆಟ್ಟಾಗ ಈ ಪ್ರಾಣಿಗಳು ತಮ್ಮ ದಾರಿಯಲ್ಲಿ ಬರುವವರಿಗೆ ಗಾಳಿಪಟದಂತೆ ಹಾರಿಸಿ ಉಡಾಯಿಸುತ್ತವೆ ಅಥವಾ ಕಾಲಿನಲ್ಲಿ ತುಳಿದು ಕೊಚ್ಚಿ ಹಾಕುತ್ತವೆ.

ಇದೇ ರೀತಿಯ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದದ್ದನ್ನು ಇಲ್ಲಿ ನೋಡಲಿದ್ದೇವೆ. ತಲೆಕೆಟ್ಟ ಕೋಣವೊಂದು ಆಕಸ್ಮಿಕವಾಗಿ ರೆಸ್ಟೋರೆಂಟ್ ಒಂದರಲ್ಲಿ ಬಾಗಿಲು ಒಡೆದು ಒಳನುಗ್ಗಿ ಬಂದಿದೆ. ನಂತರದ ದೃಶ್ಯ ನೋಡಿದಾಗ ಅಕ್ಷರಶಃ ಮೈ ಜುಮ್ಮೆನ್ನುತ್ತದೆ. ಆ ರೆಸ್ಟೋರೆಂಟ್ ನಲ್ಲಿ ನುಗ್ಗಿದ ಕೋಣ ಭಯಾನಕವಾದ ಆತಂಕ ಸೃಷ್ಟಿಸಿದೆ. ತಲೆಕೆಟ್ಟು ಓಡುತ್ತಿರುವಾಗ ತನ್ನ ಮಾರ್ಗದಲ್ಲಿರುವ ವ್ಯಕ್ತಿಗಳನ್ನು ತನ್ನ ಕೊಂಬುಗಳಿಂದ ಹವೆಯಲ್ಲಿ ಹಾರಿಸುತ್ತಾ ನೆಲದ ಮೇಲೆ ಅಪ್ಪಳಿಸಿದೆ.

ರೆಸ್ಟೋರೆಂಟ್ ನಲ್ಲಿರುವ ವಸ್ತುಗಳನ್ನು ಸಹ ಪುಡಿಪುಡಿ ಮಾಡಿದೆ. ಈ ಎಲ್ಲ ಸಂಪೂರ್ಣ ಘಟನೆಯು ಅಲ್ಲಿರುವ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ವಿಡಿಯೋ ನೋಡಿದಾಗ ನಮಗೂ ಸಹ ಭಯ ಆವರಿಸುತ್ತದೆ. ರೆಸ್ಟೋರೆಂಟ್ ನಲ್ಲಿ ನಿಂತಿರುವ ಇಬ್ಬರು ವ್ಯಕ್ತಿಗಳಲ್ಲಿ ಒಬ್ಬನ ಗಮನ ಈ ಕೋಣದ ಕಡೆಗೆ ಹೋಗುತ್ತದೆ ಆಗ ಆತ ಥಟ್ಟನೆ ಬದಿಗೆ ಸರಿಯುತ್ತಾನೆ. ಆದರೆ ಇನ್ನೊಬ್ಬನು ತನ್ನ ಕೆಲಸದಲ್ಲಿ ಮಗ್ನನಾಗಿದ್ದಾನೆ. ಆಗ ಕ್ಷಣಾರ್ಧದಲ್ಲಿಯೇ ಬಾಗಿಲನ್ನು ಒಡೆದು ಒಳನುಗ್ಗಿದ ಕಾಡುಕೋಣ ಎದುರಿಗಿದ್ದ ವ್ಯಕ್ತಿಗೆ ಏನೂ ತಿಳಿಯುವ ಮೊದಲೇ ಆತನನ್ನು ತನ್ನ ಕೊಂಬುಗಳಿಂದ ಎತ್ತಿ ಮೇಲಕ್ಕೆ ಹಾರಿಸಿತು. ಅಲ್ಲಿದ್ದ ಇನ್ನೊಬ್ಬ ವ್ಯಕ್ತಿ ಆತನ ಸಹಾಯಕ್ಕಾಗಿ ಹಿಂದೆ ಓಡಿದ್ದು ಕಂಡುಬರುತ್ತದೆ. ಆ ವ್ಯಕ್ತಿಯ ಮೇಲೆ ಹಲ್ಲೆ ಮಾಡಿದ ನಂತರ ಕೋಣ ರೆಸ್ಟೋರೆಂಟ್ ನಲ್ಲಿರುವ ಚೇರ್ ಗಳನ್ನು ಸಹ ಚೆಲ್ಲಾಪಿಲ್ಲಿ ಮಾಡಿದೆ. ನಂತರ ಮತ್ತೆ ಬಂದು ಬಾಗಿಲ ಹತ್ತಿರ ಸ್ವಲ್ಪ ಸಮಯ ನಿಂತು ಆಮೇಲೆ ಹೊರಗೆ ಹೋಗುತ್ತದೆ. ಈ ವಿಡಿಯೋವನ್ನು nature27_12 ಹೆಸರಿನ ಅಕೌಂಟ್ ನಿಂದ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಲಾಗಿದೆ. ಪ್ರಸ್ತುತ ವಿಡಿಯೋ ಚೀನಾದಲ್ಲಿಯ ಒಂದು ರೆಸ್ಟೋರೆಂಟ್ ನಲ್ಲಿಯದೆಂದು ತಿಳಿದುಬಂದಿದೆ.

ವೀಡಿಯೋ ನೋಡಿ

Leave a Comment

Your email address will not be published. Required fields are marked *