ಹುಡಿಗಿಯರ ಶರ್ಟ್ ಬಟನ್ ಹುಡುಗರ ಶರ್ಟ್ ಬಟನ್ ವಿರುದ್ದ ದಿಶೆಯಲ್ಲಿ ಏಕೆ ಇರುತ್ತವೆ ಗೊತ್ತಾ? ಶಾಕ್ ಆಗ್ತೀರಿ!

ನಮ್ಮ ಈ ಜಗತ್ತು ಅನೇಕ ಬೇರೆ ಬೇರೆ ಯಾದ ಕೌಶಲ್ಯ ಹಾಗೂ ವಿವಿಧ ಪ್ರಕಾರದ ಘಟನೆಗಳಿಂದ ತುಂಬಿಕೊಂಡಿದೆ. ಆದರೆ ಕೆಲವೊಂದು ವಿಷಯಗಳು ಹೇಗಿವೆ ಎಂದರೆ ಅವುಗಳ ಬಗ್ಗೆಕೆಲವೇಜನರಿಗೆ ಮಾತ್ರ ಮಾಹಿತಿ ಇರುತ್ತದೆ. ಅಂದರೆ ಈ ವಿಷಯಗಳು ದೈನಂದಿನ ಜೀವನದಲ್ಲಿ ಗಮನಿಸುತ್ತಾರೆ ಆದರೆ ಅವುಗಳ ಬಗ್ಗೆ ಸ್ವಲ್ಪವು ಮಾಹಿತಿ ಇರುವದಿಲ್ಲ. ನೋಡಿಯೂ ನೋಡಿದಂತೆ ಇರುವರು. ಹಾಗೆಯೇ ಈ ವಿಷಯವು ನಿಮಗೂ ಸಹ ಗೊತ್ತಿರಲಿಕ್ಕಿಲ್ಲ. ಏನೆಂದರೆ ಹುಡುಗಿಯರ ಅಥವಾ ಮಹಿಳೆಯರ ಶರ್ಟ್ ಬಟನ್ ಪುರುಷರ ಶರ್ಟ್ ಬಟನ್ ವಿರುದ್ಧ ಏಕೆ ಹಚ್ಚಿರುತ್ತಾರೆ ಗೊತ್ತಾ? ಹಾಗಿದ್ರೆ ಅದರ ಕಾರಣಗಳು ಏನೆಂಬುದು ತಿಳಿದುಕೊಳ್ಳೋಣ ಬನ್ನಿ.

ಮೊದಲನೆಯ ಕಾರಣ:- ಇದರಹಿಂದಿನ ಮೊದಲನೆಯ ಕಾರಣವೇನೆಂದರೆ, ಪುರುಷರ ಯಾವಾಗಲೂ ಶರ್ಟ್ ಬಟನ್ ಹಾಕಲು ಮತ್ತು ಶರ್ಟ್ ಬಟನ್ ತಗೆಯಲು ಯಾವಾಗಲೂ ಎಡಗೈ ಯ ಉಪಯೋಗ ಮಾಡುವರು ಆದರೆ ಮಹಿಳೆಯರು ತಮ್ಮ ಶರ್ಟ್ ಬಟನ್ ತಗೆಯಲು ಮತ್ತು ಬಟನ್ ಹಾಕಲು ಬಲಗೈ ಯ ಉಪಯೋಗ ಮಾಡುವರು ಅದುದರಿಂದ ಅವರಶರ್ಟ್ ಬಟನ್ ಪುರುಷರ ಶರ್ಟ್ ಬಟನ್ ವಿರುದ್ಧ ದಿಶೆಯಲ್ಲಿ ಇರುವದು.

ಎರಡನೆಯ ಕಾರಣ:- ಎರಡನೆಯ ಕಾರಣವೇನೆಂದರೆ ಮೊದಲಿಂದಲೂ ಪುರುಷರು ತಮ್ಮ ಶರ್ಟ್ಗಳು ತಾವೇ ಹಾಕೋಕೊಳ್ಳುವರು ಆದರೆ ಸ್ತ್ರೀಯರು ತಮ್ಮ ಕೆಲವು ಉಡುಪು ಗಳನ್ನು ಧರಿಸುವ ಸಲುವಾಗಿ ಇನ್ನೊಬ್ಬರ ಸಹಯ ಪಡೆಯುವರು. ಇದೇಕಾರಣದಿಂದಾಗಿ ಮಹಿಳೆಯರ ಶರ್ಟ್ ಬಟನ್ ಎಡಬದಿಗೆ ಹಚ್ಚಿರುವದು ಕಂಡು ಬರುವದು.

ಮೂರನೆಯ ಕಾರಣ:- ಪುರುಷರ ಶರ್ಟ್ ಬಟನ್ ಯಾವಾಗಲೂ ಬಲಬದಿಗೆ ಮತ್ತು ಸ್ತ್ರೀಯರ ಶರ್ಟ್ ಬಟನ್ ಯಾವಾಗಲೂ ಎಡಬದಿಗೆ ಇರಲು ಇನ್ನೊಂದು ಕಾರಣವೇನೆಂದರೆ, ಮೊದಲಿಂದಲೂ ಸ್ತ್ರೀ ಮತ್ತು ಪುರುಷರ ಉಡುಪುಗಳಲ್ಲಿ ತುಂಬಾ ಭಿನ್ನತೆ ಇರುವದನ್ನುನಾವುನೋಡಿದ್ದೇವೆ ಆದರೆ ಇಂದು ಮಹಿಳೆಯರು ಸಹ ಪುರುಷರ ಉಡುಪುಗಳನ್ನು ಧರಿಸಲು ಪ್ರಾರಂಭಿಸಿದ್ದಾರೆ ಆದ್ದರಿಂದ ಅವರ ಉಡುಪಲ್ಲಿ ಸ್ವಲ್ಪ ಬೇರೆ ಶೈಲಿ ಇರಬೇಕೆಂದು ಈ ತರ ಮಾಡುತ್ತಾರೆ.

ನಾಲ್ಕನೇಯಕಾರಣ:- ಇದರಹಿಂದಿನ ನಾಲ್ಕನೆಯ ಕಾರಣ ಏನೆಂದರೆ, ಈ ಕಾರಣವೂ ಸ್ವಲ್ಪ ಇತಿಹಾಸದ ಕಡೆಗೆ ಹೋಗುತ್ತದೆ ಏನೆಂದರೆ ಐತಿಹಾಸಿಕ ತತ್ವನುಸಾರ ಮಹಿಳೆಯರ ಶರ್ಟ್ ಬಟನ್ ಎಡಬದಿಗೆ ಹಚ್ಚಲು ನೆಪೋಲಿಯನ್ ಬೋನಾಪೇಟ್ ತಮ್ಮ ಸೇವಕರಿಕೆ ಆದೇಶಿಸಿದ್ದರಂತೆ. ಏಕೆಂದರೆ ಸ್ತ್ರೀ ಮತ್ತು ಪುರುಷರ ಉಡುಪುಗಳು ಗುರುತಿಸುವ ಸಲುವಾಗಿ ಈ ಒಂದು ವಿಚಾರ ಅವರು ಶರ್ಟ್ ಗಳಲ್ಲಿ ಅಳವಡಿಸಿದ್ದರಂತೆ.