ಅಚ್ಚರಿ ಎನಿಸಿದರೂ ಇದು ಸತ್ಯ! ಅಲಾಸ್ಕಾದಲ್ಲಿಯ ‘ಈ’ ಪಟ್ಟಣದಲ್ಲಿ ಸೂರ್ಯೋದಯ ವಾಗೋದು 2021 ರಲ್ಲಿಯೇ!

ಪ್ರಪಂಚದಲ್ಲಿ ಅನೇಕ ವಿಸ್ಮಯಗಳು ಕಾಣಲು ಕೇಳಲು ಮತ್ತು ನೋಡಲು ಸಿಗುತ್ತವೆ. ಅದರಲ್ಲಿಯದೇ ಒಂದು ವಿಸ್ಮಯ ನೋಡಿ ಇದು. ಅಲಸ್ಕದಲ್ಲಿ ಒಂದು ಪಟ್ಟಣದಲ್ಲಿಯ ಮುಂಬರುವ ಸೂರ್ಯೋದಯ ನೇರವಾಗಿ ಇನ್ನು 2021ರಲ್ಲಿಯೇ ಎಂದರೆ ಯಾರಿಗೂ ವಿಶ್ವಾಸವೇ ಕೂಡುವದಿಲ್ಲ. ಆದರೆ ಇದು ನಿಜವಾಗಿದೆ.

ಅಲಸ್ಕದಲ್ಲಿ ಈ ರೀತಿ ಪ್ರತಿವರ್ಷವಾಗುವ ಈ ಬದಲಾವಣೆಗೆ ಪೋಲಾರ್ ನೈಟ್ ಎಂದು ಕರೆಯಲಾಗುತ್ತದೆ. ಈ ಭಾಗದಲ್ಲಿ 23 ಜನೇವರಿ 2021 ರ ವರೆಗೆ ಸೂರ್ಯೋದಯವಾಗುವದಿಲ್ಲ. ಇದರ ಅರ್ಥ ಅಲ್ಲಿ ಬರೀ ಕತ್ತಲೆ ಇರುತ್ತದೆ ಎಂದಲ್ಲ, ಹಗಲು ಹೊತ್ತಿನಲ್ಲಿ ಸ್ವಲ್ಪ ಸಮಯದವರೆಗೆ ಬೆಳಕು ಇರುತ್ತದೆ ಆದರೆ ಆಕಾಶದಲ್ಲಿ ಸೂರ್ಯ ಮಿನುಗುವದು ಮಾತ್ರ ಕಾಣುವದಿಲ್ಲ.

ಇನ್ಸ್ಟಾಗ್ರಾಮ್ ನಲ್ಲಿ ಸೂರ್ಯಸ್ತದ ಸುಂದರವಾದ ಚಿಕ್ಕ ವಿಡಿಯೋ ಒಂದನ್ನು kirsten_alburg ಹೆಸರಿನ ವ್ಯಕ್ತಿಯೊಬ್ಬ ಶೇರ್ ಮಾಡಿದ್ದಾನೆ. ಕ್ಯಾಪ್ಷನ್ ನಲ್ಲಿ Utqiagvik ಈ ಪಟ್ಟಣದ 2020 ರ ಕೊನೆಯ ಸೂರ್ಯಸ್ತವೆಂದು ಉಲ್ಲೇಖಿಸಿದ್ದಾನೆ. ಈ ದೃಶ್ಯವನ್ನು ನೋಡುವಾಗ ಕಣ್ಣು ತೇವವಾಗಿತ್ತು ಎಂದು ಸಹ ಹೇಳಿದ್ದಾನೆ.

ಪೃಥ್ವಿಯು ತನ್ನ ಅಕ್ಷದ ಮೇಲೆ ಸ್ವಲ್ಪ ಓರೆಯಾಗಿದೆ.ಪೃಥ್ವಿಯ ಎರಡು ಧ್ರುವಗಳ ಉತ್ತರ ಮತ್ತು ದಕ್ಷಿಣ ಧ್ರುವಗಳ ಮೇಲೆ ಸೂರ್ಯನ ಪ್ರಕಾಶವು ಒಂದೇ ಸಮಯದಲ್ಲಿ ಬೀಳಲು ಸಾಧ್ಯವಿಲ್ಲ. ಈ ಕಾರಣದಿಂದ ಉತ್ತರ ಧ್ರುವದಲ್ಲಿ 6 ತಿಂಗಳು ಬೆಳಕು ಇದ್ದರೆ ದಕ್ಷಿಣ ಧ್ರುವದಲ್ಲಿ 6 ತಿಂಗಳು ಕತ್ತಲೆ ಕವಿದಿರುತ್ತದೆ. ಈ ವಿಷಯವನ್ನು ನಾವು ಶಾಲೆಯ ದಿನಗಳಲ್ಲಿ ಸಹಿತ ಓದಿದ್ದೇವೆ.

ಉತ್ತರ ಧ್ರುವಕ್ಕೆ ಆರ್ಕಿಟಿಕ್ ಸರ್ಕಲ್ ಮತ್ತು ದಕ್ಷಿಣ ಧ್ರುವಕ್ಕೆ ಅಂಟಾರ್ಕಟಿಕ್ ಸರ್ಕಲ್ ಎಂದು ಕರೆಯುತ್ತಾರೆ. ಅಲಾಸ್ಕಾದ Utqiagvik ಈ ಪುಟ್ಟ ಪಟ್ಟಣವು ಆರ್ಕಟಿಕ್ ಸರ್ಕಲ್ ನ ಅತೀ ಎತ್ತರದ ಸ್ಥಾನದಲ್ಲಿ ಇದೆ. 18 ನವೆಂಬರ್ ಪಟ್ಟಣದ ಇದು ಇಲ್ಲಿ ಸೂರ್ಯಕಾಣುವ ಕಟ್ಟಕಡೆಯ ದಿವಸ ಎಂದು ಹೇಳಲಾಗುತ್ತದೆ.

ನವೆಂಬರ್ ನಿಂದ ಜನವರಿವರೆಗೆ ಈ ಪಟ್ಟಣದಲ್ಲಿ ತುಂಬಾ ಕೊರೆಯುವ ಚಳಿ ಇರುತ್ತದೆ. ಈ ಸಮಯದಲ್ಲಿ ಇಲ್ಲಿಯ ತಾಪಮಾನ -23° ಸೆಲ್ಸಿಯಸ್ ಇರುತ್ತದೆ.

ಇದೊಂದು ಪೃಥ್ವಿಯ ಮೇಲಿನ ತುಂಬಾ ವಿಚಿತ್ರವಾದ ವಾತಾವರಣವೇ ಎನ್ನಬಹುದು. ಏಕೆಂದರೆ ದಿನಂಪ್ರತಿ ಸೂರ್ಯೋದಯ ಮತ್ತು ಸೂರ್ಯಾಸ್ತ ನೋಡುವ ಹವ್ಯಾಸವಿರುವವರಿಗೆ ತುಂಬಾ ವಿಶೇಷವೇ ಅನಿಸುವುದು. ಇಲ್ಲಿ ಉಲ್ಲೇಖಿಸಿದ ಈ ಪಟ್ಟಣದಲ್ಲಿ 66 ದಿವಸಗಳ ನಂತರ ಸೂರ್ಯೋದಯವಾಗಲಿದೆ. ಇದೇ ಕಾರಣದಿಂದ ಈ ಪಟ್ಟಣದಲ್ಲಿರುವ ನಿವಾಸಿಗಳು ತಮ್ಮ ಭಾವನೆಗಳನ್ನು ವ್ಯಕ್ತ ಮಾಡುವ ಸಲುವಾಗಿ ಅನೇಕ ವಿಡಿಯೋ ಮತ್ತು ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.