ಅಜಯ್ ಬಗ್ಗೆ ಮದುವೆಯ 20 ವರ್ಷಗಳ ನಂತರ ಕಾಜೋಲ್ ಗೆ ತಿಳಿಯಿತು ‘ಈ’ ವಿಷಯ; ಅಂತಾರೆ – “ಮೊದಲೇ ಗೊತ್ತಿದ್ದರೆ ಮದುವೆನೇ ಆಗುತ್ತಿರಲಿಲ್ಲ!”

ಬಾಲಿವುಡ್ ಸಿಮರನ್ ಎಂದೇ ಪ್ರಸಿದ್ಧರಾದ ಕಾಜಲ್ ಅವರು ಇತ್ತೀಚೆಗೆ ಒಂದು ಸಂದರ್ಶನವನ್ನು ನೀಡಿದ್ದರು. ಆ ಸಂದರ್ಶನದಲ್ಲಿ ತಮ್ಮ ಪತಿ ಅಜಯ್ ಬಗ್ಗೆ ಹೀಗೆ ಹೇಳುತ್ತಾರೆ. ಅಜಯ್ ಅವರ ಬಗೆಗಿನ ಆ ವಿಷಯ ನನಗೆ ಒಂದು ವೇಳೆ ಮೊದಲೇ ಗೊತ್ತಿದ್ದರೆ ನಾನು ಅವರನ್ನು ಮದುವೆಯಾಗಲು ನಿರಾಕರಿಸಿ ಬಿಡುತ್ತಿದ್ದೆ ಎಂದಿದ್ದಾರೆ.

ವಾಚಕರೆ ಆ ವಿಷಯ ಯಾವುದು ಮತ್ತು ಕಾಜಲ್ ಅವರು ಅಜಯ್ ಅವರ ಯಾವ ಘಟನೆಯ ಬಗ್ಗೆ ನೆನಪಿಸಿಕೊಂಡು ಈ ಮಾತನ್ನು ಹೇಳಿದ್ದಾರೆ ಎಂಬುದನ್ನು ಇಲ್ಲಿ ನೋಡುವ.

ಬಾಲಿವುಡ್ ನಲ್ಲಿ ಯಾವುದೇ ಪಾತ್ರಕ್ಕೂ ಫಿಟ್ ಆಗಿರುವ ಅಜಯ್ ತಮ್ಮ ಅಭಿನಯ ಕೌಶಲ್ಯದ ಕಾರಣದಿಂದ ತುಂಬಾ ಬೇಡಿಕೆಯ ನಟರಾಗಿದ್ದಾರೆ. ಅಜಯ್ ಮತ್ತು ಪತ್ನಿ ಕಾಜಲರ ಅನೇಕ ವರ್ಷಗಳ ವೈವಾಹಿಕ ಜೀವನ ಅನೇಕರಿಗೆ ಒಂದು ಆದರ್ಶವಾಗಿದೆ.

ಈ ಸಂದರ್ಭದಲ್ಲಿ ಕಾಜಲ್ ಅವರು ತಮ್ಮ ಪತಿ ಅಜಯ್ ಬಗ್ಗೆ ಯಾಕೆ ಹೀಗೆ ಹೇಳುತ್ತಾರೆ. ಮತ್ತು ಅದು ಯಾವ ವಿಷಯದ ಬಗ್ಗೆ ಈ ರೀತಿ ಪ್ರಸ್ತಾಪ ಮಾಡಿದ್ದಾರೆ ಎಂಬುದನ್ನು ನೋಡುವ. ಕಾಜಲ್ ಅವರು ನೀಡಿದ ಒಂದು ಪ್ರೈವೇಟ್ ಟಿವಿ ಸಂದರ್ಶನದಲ್ಲಿ ಈ ವಿಷಯ ಹೊರಗೆ ಬಿದ್ದಿದೆ. ಇಲ್ಲಿ ಕಾಜಲ್ ಅವರು ಅಜಯ್ ಮತ್ತು ಅವರ ಕುಟುಂಬದ ಅನೇಕ ವಿಷಯಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.

ಕಾಜಲ್ ಅವರಿಗೆ ಆಂಕರ್ ಕೇಳಿದ ಒಂದು ಪ್ರಶ್ನೆ ಹೀಗಿತ್ತು, ನೀವು ಯಾವ ಬಣ್ಣದವರಾಗಲು ಇಚ್ಛೆ ಪಡುತ್ತೀರಿ ಎಂದಾಗ ಕಾಜಲ್ ಸ್ವಲ್ಪವೂ ತಡಮಾಡದೆ ಬೆಳ್ಳಗಾಗಲು ಇಚ್ಚೆ ಪಡುತ್ತೇನೆ ಎಂದಿದ್ದಾರೆ.

ನಂತರದ ಪ್ರಶ್ನೆ ಹೀಗಿತ್ತು, ಒಳ್ಳೆಯ ಕಲಾಕಾರರು ಜನ್ಮದಿಂದಲೇ ಬಂದಿರುತ್ತಾರೆಯೇ? ಅಥವಾ ಮಧ್ಯದಲ್ಲಿಯೇ ತಯಾರಾಗುತ್ತಾರೆ ಹೇಳಿ ಎಂದಾಗ, ಕಾಜಲ್ ಅವರು ಹೀಗೆ ಹೇಳುತ್ತಾರೆ, ನನ್ನ ಪ್ರಕಾರ ಎರಡು ಸರಿ ಇದೆ. ಕೆಲವರು ತಾಯಿಯ ಗರ್ಭದಿಂದ ಒಳ್ಳೆಯ ಕಲಾಕಾರರಾಗಿ ಜನ್ಮ ತಾಳಿರುತ್ತಾರೆ. ಇನ್ನು ಕೆಲವರು ತಮ್ಮ ಪರಿಶ್ರಮದ ಫಲದಿಂದ ಒಳ್ಳೆಯ ಕಲಾಕಾರರಾಗಿ ಪ್ರಸಿದ್ಧಿ ಪಡೆಯುತ್ತಾರೆ.

ಇದನ್ನು ಕೇಳಿದ ನಂತರ ಆಂಕರ್ ಅಜಯ್ ಅವರು ಆಕ್ಟಿಂಗ್ ಕ್ಲಾಸ್ ಪೂರ್ಣ ಮಾಡಿದ್ದಾರೆ ಆದರೆ ನೀವು? ಎಂದು ಪ್ರಶ್ನೆ ಹಾಕಿದಾಗ, ಇದಕ್ಕೆ ಉತ್ತರವಾಗಿ, ಕಾಜಲ್ ಅವರು ಆಶ್ಚರ್ಯದಿಂದ ಹೇಳಿದ್ದು ಹೀಗೆ, (ಕಾರಣ ಕಾಜಲ್ ಅವರಿಗೆ ಅಜಯ್ ಆಕ್ಟಿಂಗ್ ಕ್ಲಾಸ್ ಮಾಡಿದ್ದು ಗೊತ್ತೇ ಇರಲಿಲ್ಲ) ಒಂದು ವೇಳೆ ಅಜಯ್ ಅವರು ಆಕ್ಟಿಂಗ್ ಕ್ಲಾಸ್ ಮಾಡಿದ್ದು ಗೊತ್ತಿದ್ದರೆ ಮದುವೆಯ ಮೊದಲೇ ನಾನು ಅವರನ್ನು ನಿರಾಕರಿಸಿ ಬಿಡುತ್ತಿದ್ದೆ ಎಂದರು. ಅಜಯ್ ಮತ್ತು ನಾನು ಇಬ್ಬರೂ ಬೇರೆ ಬೇರೆ ಪ್ರಕಾರದ ಆಕ್ಟರ್ ಇದ್ದೇವೆ. ಅಜಯ್ ಒಂದು ಪರಿಪೂರ್ಣ ಕಲಾಕಾರರು ಇದ್ದಾರೆ. ನಿಜವಾಗಿ ಹೇಳಬೇಕಾದರೆ ಅಜಯ್ ನಟನಾಗದೆ ಡೈರೆಕ್ಟರ್ ಆಗುವವರು ಇದ್ದರು. ಆದರೆ ಹಣೆಬರಹದಲ್ಲಿ ಏನು ಬರೆದಿತ್ತು ಅದನ್ನೇ ಅವರಾದರು ಎಂದು ಸಂದರ್ಶನದ ಕೊನೆಗೆ ಅಜಯ್ ಬಗ್ಗೆ ಕಾಜಲ್ ತಮ್ಮ ಭಾವನೆಯನ್ನು ಈ ರೀತಿಯಾಗಿ ವ್ಯಕ್ತ ಮಾಡಿದರು.