ಅಲ್ಲು ಅರ್ಜುನ್ ಅವರು ನಟಿಸಿದ ಪುಷ್ಪ ಚಿತ್ರವು ಎಲ್ಲೆಡೆಯೂ ಭಾರಿ ಸದ್ದು ಮಾಡಿತು. ಚಿತ್ರ ತೆರೆಕಂಡು ತಿಂಗಳುಗಳೇ ಗತಿಸಿದರೂ ಚಿತ್ರದ ಕ್ರೇಜ್ ಮಾತ್ರ ಸ್ವಲ್ಪವೂ ಕಡಿಮೆಯಾಗುತ್ತಿಲ್ಲ. ಈ ಚಿತ್ರದಲ್ಲಿ ನಟಿಸಿದ ಮುಖ್ಯ ನಟ, ನಟಿ ಅಲ್ಲು ಅರ್ಜುನ್ ಮತ್ತು ಕನ್ನಡತಿ ರಶ್ಮಿಕ ಮಂದಣ್ಣ ಅವರು ಮತ್ತಷ್ಟು ಯಶಸ್ಸಿನ ಶಿಖರಕ್ಕೆ ಏರಿದರು. ಚಿತ್ರದಲ್ಲಿಯ ಹಾಡುಗಳು ಮತ್ತು ಡ್ಯಾನ್ಸ್ ಗಳು ರಸಿಕರಿಗೆ ಮೋಡಿ ಮಾಡುವಲ್ಲಿ ಯಶಸ್ವಿಯಾದವು. ಅದರಲ್ಲೂ ಶ್ರೀವಲ್ಲಿ ಸಾಂಗ್ ಅಂತೂ ಅನೇಕ ಸೆಲೆಬ್ರಿಟಿಗಳಿಗೆ ಕುಣಿಯುವಂತೆ ಮಾಡಿತು. ಈ ಹಾಡಿಗೆ ಅನೇಕ ದೊಡ್ಡ ದೊಡ್ಡ ಕಲಾವಿದರು ಕುಣಿದು ರೀಲ್ಸ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದರು.
ಈಗ ಇದೇ ಹಾಡಿಗೆ ಸ್ಪೈಸ್ ಜೆಟ್ ನ ಗಗನಸಖಿಯೊಬ್ಬಳು ವಿಮಾನಿನಲ್ಲಿಯೇ ಹುಕ್ ಸ್ಟೆಪ್ ಹಾಕಿದ್ದಾರೆ. ಇವರ ಹೆಸರು ಉಮಾ ಮೀನಾಕ್ಷಿ ಇದ್ದು ಇವರು ಯಾವತ್ತು ತಮ್ಮ ಡ್ಯಾನ್ಸ್ ಗಳ ವಿಡಿಯೋದಿಂದಾಗಿ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುತ್ತಾರೆ. ಇವರು ಇನ್ಸ್ಟಾಗ್ರಾಮ್ ಅಕೌಂಟ್ ನಿಂದ ವಿಡಿಯೋ ಒಂದನ್ನು ಶೇರ್ ಮಾಡಿದ್ದಾರೆ, ಇದೇ ವಿಡಿಯೋ ಸದ್ಯ ಗಾಳಿಯಂತೆ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಮೀನಾಕ್ಷಿಯವರು ಗಗನಸಖಿಯ ಯೂನಿಫಾರ್ಮ್ ನಲ್ಲಿ ಕಂಡುಬಂದಿದ್ದಾರೆ. ಡ್ಯಾನ್ಸ್ ಮಾಡುವಾಗ ಮೀನಾಕ್ಷಿಯವರು ವಿಮಾನಿನಲ್ಲಿಯೇ ತುಂಬಾ ಮುಕ್ತವಾಗಿ ಹೆಜ್ಜೆ ಹಾಕಿದ್ದಾರೆ.
ನೋಡಿ ಈ ವಿಡಿಯೋ…
View this post on Instagram
ಇನ್ಸ್ಟಾಗ್ರಾಮ್ ನಲ್ಲಿ ಉಮಾ ಮೀನಾಕ್ಷಿಯವರು ಶೇರ್ ಮಾಡಿದ ಈ ವಿಡಿಯೋವನ್ನು ಇಲ್ಲಿಯವರೆಗೆ ಲಕ್ಷಾವಧಿ ಜನರು ವೀಕ್ಷಿಸಿದ ನಂತರ ಅವರಿಗೆ ಇಷ್ಟವಾಗಿ 3.2 ಮಿಲಿಯನ್ ಜನರು ಲೈಕ್ಸ್ ಗಳ ಸುರಿಮಳೆಯನ್ನೇ ಮಾಡಿದ್ದಾರೆ.
