ಅಬ್ಬಾ! ಮದುವೆ ಸಮಾರಂಭ, ಪಾರ್ಟಿಗಳಲ್ಲಿ ಸಹಭಾಗಿಯಾಗಲು ‘ಈ’ ನಟಿ ಪಡೆದುಕ್ಕೊಳುವ ಹಣ ಕೇಳಿದರೆ ತಲೆ ತಿರುಗುತ್ತೆ!

ಬಾಲಿವುಡ್ ನಟಿ ಎಂದರೆ ಆಯ್ತು ಹೆಸರಿನ ಜೊತೆಗೆ ಹಣವೂ ಅಪಾರ…ಅದಕ್ಕೆ ತಕ್ಕಂತೆ ಅವರ ದುಡಿಮೆಯೇನೂ ಕಡಿಮೆ ಇರಲ್ಲ. ಆದರೆ ನೋಡುವವರಿಗೆ ಮಾತ್ರ ಬರೀ ಅವರ ಆಷಾರಾಮಿ ಜೀವನ, ಥಳುಕು ಬಳಕಷ್ಟೇ ಕಾಣುತ್ತದೆ.

ಈ ಬಾಲಿವುಡ್ ತಾರೆಯರು ಬರೀ ಚಲನಚಿತ್ರಗಳಿಂದಷ್ಟೇ ಹಣವನ್ನು ಗಳಿಸುವದಿಲ್ಲ. ಅವರ ಹಣ ಗಳಿಸುವ ಮೂಲ ಫಿಲ್ಮ್ ಇದ್ದರೂ ತಮ್ಮ ಈ ವ್ಯವಸಾಯವನ್ನು ಅನೇಕ ಕಾರಣಗಳಿಗಾಗಿ ಬಳಸುತ್ತಾರೆ. ಹಣವನ್ನು ಗಳಿಸುವ ಬೇರೆ ಬೇರೆ ಮಾಧ್ಯಮಗಳಿಗಾಗಿ ತಮ್ಮ ಥಳಕು ಬಳುಕಿನ ಚಲನಚಿತ್ರ ವ್ಯವಸಾಯದ ಉಪಯೋಗವನ್ನು ಮಾಡಿಕೊಳ್ಳುತ್ತಾರೆ. ಇದರಲ್ಲಿ ಯಾವುದಾದರೂ ಕಂಪನಿಯ ಜಾಹಿರಾತು ಇರಬಹುದು, ಇಲ್ಲ ಮಾಲ್ ಉದ್ಘಾಟನೆ ಇರಬಹುದು, ದೊಡ್ಡ ದೊಡ್ಡ ಶಾಪ್ ಗಳ ಉದ್ಘಾಟನೆ ಮತ್ತು ಪ್ರಾಡಕ್ಟ್ ಗಳ ಶಾಪ್ ಓಪನಿಂಗ್ ಇರಬಹುದು, ಅಥವಾ ಯಾವುದೇ ಸಭೆ ಸಮಾರಂಭಗಳಲ್ಲಿ ಅತಿಥಿಯಾಗಿ ಹೋಗುತ್ತಾರೆ.

ಈ ತಾರೆಯರು ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಸುಮ್ಮನೆ ಬರುವದಿಲ್ಲ ಎಂಬುದು ತಿಳಿದುಕೊಳ್ಳಬೇಕು. ಯಾವುದೇ ಸಮಾರಂಭಕ್ಕೆ ಅಥವಾ ಮದುವೆಗೆ ಬರಬೇಕಾದರೆ ಕರೆಸಿಕೊಳ್ಳುವವರು ಇವರಿಗೆ ಫೀ ಸ್ವರೂಪದಲ್ಲಿ ಹಣವನ್ನು ಪಾವತಿಸಬೇಕಾಗುತ್ತದೆ. ಈ ಹಣ ಅವರವರ ಸ್ಥಾನದಿಂದ ನಿಶ್ಚಿತವಾಗುತ್ತದೆ. ಅವರು ಒಂದು ವೇಳೆ ಟಾಪ್ ಶ್ರೇಣಿಯಲ್ಲಿ ಇದ್ದರೆ ಅವರು ಕೇಳುವ ಹಣ ತುಂಬಾ ದೊಡ್ಡ ಮೊತ್ತವಾಗಿರುತ್ತದೆ. ನಾವಿಲ್ಲಿ ಒಂದು ಮದುವೆಯ ಸಮಾರಂಭಕ್ಕೆ ಉಪಸ್ಥಿತರಾಗಲು ನಟಿಯೊಬ್ಬಳು ತೆಗೆದುಕೊಳ್ಳುವ ಸಂಭಾವನೆಯ ಬಗ್ಗೆ ತಿಳಿಯುವಾ.

ಬಾಲಿವುಡ್ ಟಾಪ್ ನಟಿಯರ ಶ್ರೇಣಿಯಲ್ಲಿ ಶಾಮೀಲಾದ ಕರೀನಾ ಕಪೂರ್ ಅವರ ಬಗ್ಗೆ ಹೇಳುತ್ತಿದ್ದೇವೆ. ಕರೀನಾ ಬಾಲಿವುಡ್ ನಲ್ಲಿ ಎಂಟ್ರಿ ಮಾಡಿ ಎರಡು ದಶಕಗಳೇ ಆಗಿವೆ. ಹೀಗಾಗಿ ಕರೀನಾ ಎಲ್ಲರಿಗೂ ಗೊತ್ತೇ ಇದ್ದಾರೆ. ಅವರ ಫ್ಯಾನ್ಸ್ ಫಾಲೋಯಿಂಗ್ ಸಹಿತ ತುಂಬಾ ದೊಡ್ಡದಾಗಿದೆ. ಹಾಗಾಗಿ ಇವರು ತುಂಬಾ ಫೇಮಸ್ ಪರ್ಸನ್ಯಾಲಿಟಿಯಾಗಿದ್ದಾರೆ.

ಇವರು ಒಂದು ಪಾರ್ಟಿಯಲ್ಲಿ ಸಹಭಾಗಿಯಾಗಲು 60 ಲಕ್ಷ ರೂಪಾಯಿಗಳ ಫೀ ತೆಗೆದುಕೊಳ್ಳುವರು. ಹಾಗೂ ಯಾವುದೇ ಪ್ರಾಡಕ್ಟ್ ಗಳ ಓಪನಿಂಗ್ ಸೆರೆಮನಿಯಲ್ಲಿ ಭಾಗವಹಿಸಲು 30 ಲಕ್ಷಗಳವರೆಗೆ ಮತ್ತು ಮುಖ್ಯವಾಗಿ ಮದುವೆ ಸಮಾರಂಭದಲ್ಲಿ ಭಾಗವಹಿಸಬೇಕಾದರೆ ಆ ಹಣದಲ್ಲಿ ಇನ್ನು ಹೆಚ್ಚಾಗಿ ಒಟ್ಟು 1.5 ಕೋಟಿ ರೂಪಾಯಿಗಳವರೆಗೆ ಫೀ ತೆಗೆದುಕೊಳ್ಳುತ್ತಾರೆ.