Articles

VIDEO : ಕಿರಿ ಕಿರಿ ಮಾಡಿದ್ದಕ್ಕೆ ಕಿಕ್ ಕೊಟ್ಟ ಜಿರಾಫೆ! ಈ ಪ್ರಾಣಿಯ ಕಾಲುಗಳಲ್ಲಿ ಅದೆಂಥ ತಾಕತ್ತು ಇರುತ್ತದೆ ಗೊತ್ತಾ?

ವಿಡಿಯೊ ನೋಡುವ ಮೊದಲು ಜಿರಾಫೆಯ ಬಗ್ಗೆ ಸ್ವಲ್ಪ ಮಾಹಿತಿ ಓದಿ… ನೀವು ಹೆಚ್ಚಾಗಿ ಜಿರಾಫೆಯನ್ನು ಮೃಗಾಲಯದಲ್ಲಿ ಅಥವಾ ರಾಷ್ಟ್ರೀಯ ಉದ್ಯಾನವನದಲ್ಲಿ ನೋಡುತ್ತೀರಿ. ಇದು ಭೂಮಿಯ ಮೇಲಿನ ಪ್ರಾಣಿಗಳಲ್ಲಿ ಅತಿ ಎತ್ತರದ ಪ್ರಾಣಿಯಾಗಿದೆ. ವಿಶೇಷವಾಗಿ ತನ್ನ ಉದ್ದನೆಯ ಕುತ್ತಿಗೆ, ಉದ್ದನೆಯ ಕಾಲುಗಳಿಗೆ ಹೆಸರುವಾಸಿಯಾಗಿದೆ.

ಅದು ಉದ್ದನೆಯ ಕುತ್ತಿಗೆಯನ್ನು ಏಕೆ ಹೊಂದಿದೆ ನಿಮಗೆ ತಿಳಿದಿದೆಯೇ? ಇಂದು ನಾವು ಈ ಪ್ರಶ್ನೆಗೆ ಉತ್ತರವನ್ನು ಮತ್ತು ಜಿರಾಫೆಗೆ ಸಂಬಂಧಿಸಿದ ಕೆಲವು ಆಸಕ್ತಿದಾಯಕ ಸಂಗತಿಗಳನ್ನು ನಿಮಗೆ ಹೇಳಲಿದ್ದೇವೆ. ಮೊದಲು ಓದಿ ನಂತರ ವಿಡಿಯೊ ನೋಡಿ…

ಜಿರಾಫೆಗಳು ಮೂಲತಃ ಆಫ್ರಿಕಾದ ಪ್ರಾಣಿಗಳಾಗಿದ್ದರೂ, ಈಗ ಅವು ಪ್ರಪಂಚದ ಅನೇಕ ದೇಶಗಳಲ್ಲಿ ಕಂಡುಬರುತ್ತವೆ. ಜಿರಾಫೆಯು ಒಂದು ದಿನದಲ್ಲಿ ಕೇವಲ ಅರ್ಧ ಘಂಟೆಯವರೆಗೆ ನಿದ್ದೆ ಮಾಡುವ ಪ್ರಾಣಿ. ಅದೂ ಕೂಡ ಒಂದೇ ಸಲಕ್ಕೆ ಮಾಡುವುದಿಲ್ಲ. ಒಂದು ಸಮಯದಲ್ಲಿ ಕೇವಲ ಐದು ನಿಮಿಷಗಳು ಮಾತ್ರ ನಿದ್ರಿಸುತ್ತದೆ!

ಗಂಡು ಜಿರಾಫೆಯ ಎತ್ತರವು ಸುಮಾರು 18 ಅಡಿಗಳು. ಅದರ ಕುತ್ತಿಗೆ ಆರು ಅಡಿಗಳಿಂದ ಎಂಟು ಅಡಿಗಳಷ್ಟಿದ್ದರೆ, ಕಾಲುಗಳು ಆರೇಳು ಅಡಿ ಎತ್ತರವಿರುತ್ತವೆ. ಅಂದರೆ ಭೂಮಿಯ ಮೇಲೆ ವಾಸಿಸುವ ಮನುಷ್ಯರ ಸರಾಸರಿ ಎತ್ತರ ಜಿರಾಫೆಯ ಕಾಲುಗಳಷ್ಟಿರುತ್ತದೆ!

ಜಿರಾಫೆ ಒಂಟೆಯಂತಹ ಪ್ರಾಣಿಯಾಗಿದ್ದು, ಇದು ಹಲವು ದಿನಗಳಿಗೆ ಒಮ್ಮೆ ಮಾತ್ರ ನೀರನ್ನು ಕುಡಿಯುತ್ತದೆ. ಏಕೆಂದರೆ ಇದು ಹುಲ್ಲು ತಿನ್ನುವ ಪ್ರಾಣಿ ಮತ್ತು ಅದರ ದೇಹದಲ್ಲಿ ಯಾವಾಗಲೂ ತೇವಾಂಶ ಇರುತ್ತದೆ. ಇನ್ನೂ ಒಂದು ಆಶ್ಚರ್ಯಕರ ಸಂಗತಿಯೆಂದರೆ, ಜಿರಾಫೆಯು ಕುಡಿಯಲು ನೀರಿಲ್ಲದೆ ಒಂಟೆಗಿಂತ ಹೆಚ್ಚು ನಡೆಯಬಲ್ಲದು!

ಜಿರಾಫೆ ಮರಿ ಹುಟ್ಟಿದ 30 ನಿಮಿಷಗಳಲ್ಲಿ ನಡೆಯಲು ಪ್ರಾರಂಭಿಸುತ್ತದೆ ಮತ್ತು ಕೇವಲ 10 ಗಂಟೆಗಳಲ್ಲಿ ಓಡಲು ಪ್ರಾರಂಭಿಸುತ್ತದೆ. ಜನನದ ಸಮಯದಲ್ಲಿ ಮರಿಗಳ ತೂಕ ಸುಮಾರು 100 ಕೆ.ಜಿ! ಮಾನವರಂತೆ ಜಿರಾಫೆಗಳಲ್ಲೂ 32 ಹಲ್ಲುಗಳಿವೆ ಎಂದು ನಿಮಗೆ ತಿಳಿದಿರಲಿಕ್ಕಿಲ್ಲ!

ಜಿರಾಫೆ ಉದ್ದವಾದ ಕುತ್ತಿಗೆಯನ್ನು ಏಕೆ ಹೊಂದಿದೆ ಎಂಬುದಕ್ಕೆ ವಿಜ್ಞಾನಿಗಳ ಪ್ರಕಾರ, ಕೆಲವು ಆನುವಂಶಿಕ ಬದಲಾವಣೆಗಳಿಂದಾಗಿ ಅದು ಉದ್ದನೆಯ ಕುತ್ತಿಗೆ ಮತ್ತು ದೊಡ್ಡ ಹೃದಯ (ಸುಮಾರು 10 ಅಥವಾ 11 ಕೆಜಿ) ಕಾಲಾನಂತರದಲ್ಲಿ ಅಭಿವೃದ್ಧಿಗೊಂಡಿತು. ಆದಾಗ್ಯೂ ಈ ಬಗ್ಗೆ ಇನ್ನೂ ಕೆಲವು ವಾದಗಳಿವೆ.

ಇದಿಷ್ಟು ಜಿರಾಫೆಯ ಬಗೆಗಿನ ಕಥೆಯಾಯಿತು, ಈಗ ಈ ವಿಡಿಯೊದಲ್ಲಿ ಜಿರಾಫೆ ತನಗೆ ಕಿರಿ ಕಿರಿ ಮಾಡಿದ ಘೇಂಡಾಕ್ಕೆ ಎಂಥ ಕಿಕ ಕೊಟ್ಟಿತೆಂದರೆ, ಅದು ಇನ್ಯಾವತ್ತೂ ಜಿರಾಫೆ ತಂಟೆಗೆ ಬರಲ್ಲ. ಅದು ಘೇಂಡಾ ಆಗಿದ್ದಕ್ಕೆ ಬದುಕುಳಿಯಿತು, ಅದೇ ಕಿಕ್ ಬೇರೆ ಪ್ರಾಣಿಗೆ ಬಿದ್ದಿದ್ದರೆ ಹರೋಹರ.

ನಿಮಗೆ ಗೊತ್ತಿರಲಿ, ಜಿರಾಫೆಯ ಕಾಲುಗಳಲ್ಲಿ ಅದೆಂಥ ಪವರ್ ಇರುತ್ತದೆಂದರೆ, ಇದರ ಒಂದೇ ಒಂದು ಕಿಕ್ ಗೆ ಕಾಡಿನ ರಾಜ ಸಿಂಹಗಳೇ ಜೀವ ಕಳೆದುಕೊಂಡಿವೆ. ಸಿಂಹ – ಹುಲಿಗಳು ಜಿರಾಫೆಯ ಬೇಟೆಯಾಡುವಾಗ ಸಾಧ್ಯವಾದಷ್ಟು ಅದರ ಕಾಲುಗಳಿಗೆ ನಿಲುಕದ ಹಾಗೆ ಅಥವಾ ಅದು ಕಾಲು ಎತ್ತದ ಹಾಗೆ ನೋಡಿಕೊಳ್ಳುತ್ತವೆ.

ಸ್ವಲ್ಪ ಮೈ ಮರೆತರೆ ಜಿರಾಫೆಯ ಬಳಿ ಬರುವ ಎಲ್ಲ ಪ್ರಾಣಿಗಳ ಕಥೆ ಮುಗಿದ ಹಾಗೆಯೇ ಲೆಕ್ಕ. ಹಿಂದಿನ ಹಾಗೂ ಮುಂದಿನ ನಾಲ್ಕೂ ಕಾಲುಗಳಿಂದ ಜಿರಾಫೆ ಬಲವಾಗಿ ಒದೆಯಬಲ್ಲುದು. ಮೇಲಿನ ವೈರಲ್ ವಿಡಿಯೊ ನೋಡಿ, ಜಿರಾಫೆ ಕಿಕ್ ಬಗ್ಗೆ ಅದು ಕೇವಲ ಸ್ಯಾಂಪಲ್ ಮಾತ್ರ.
-Team Infotrend

Leave a Comment

Your email address will not be published. Required fields are marked *