ಅಮಿತಾಬ್ ಬಚ್ಚನ್ ರನ್ನು ‘ಅಮಿತ್’ ಎಂದ ತಪ್ಪಿಗೆ ಈ ನಟ ಏನೇನು ಅನುಭವಿಸಬೇಕಾಯಿತು ಗೊತ್ತಾ? ಕಾದರ್ ಖಾನ್ ಅವರ ನೋವಿನ ಕಥೆ ಇದು!
ಭಾರತೀಯ ಚಿತ್ರರಂಗದ ದಂತಕಥೆ ಎಂದು ಕರೆಯಲ್ಪಡುವ ಕೆಲವೇ ನಟರಲ್ಲಿ ಅಮಿತಾಬ್ ಬಚ್ಚನ್ ಕೂಡಾ ಒಬ್ಬರು. ಈ ನಟ ಬಹುತೇಕ ಎಲ್ಲರಿಗೂ ಪರಿಚಯ ಇರುವವರೇ, ಅಸಂಖ್ಯಾತ ಅಭಿಮಾನಿಗಳ ಆರಾಧ್ಯ ದೈವ ಕೂಡಾ ಹೌದು. ಬಾಲಿವುಡ್, ಕಿರುತೆರೆ ಹಾಗೂ ಜಾಹೀರಾತುಗಳಲ್ಲಿ ಕೂಡಾ ಮಿಂಚುವ ಈ ಹಿರಿಯ ನಟ ಎಂಬತ್ತರ ದಶಕದಲ್ಲಿ ಬಾಲಿವುಡ್ ನನ್ನು ಆಳಿದ ಶೆಹೆನ್ಶಾ ಎಂದೇ ಗುರುತಿಸಲ್ಪಟ್ಟಿದ್ದು, ಬಾಲಿವುಡ್ ನಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿ, ಇಂದಿಗೂ ಬಹು ಬೇಡಿಕೆಯ ನಟ ಎನ್ನುವ ಸ್ಥಾನವನ್ನು ಉಳಿಸಿಕೊಂಡಿರುವುದು ಅವರ ಹೆಗ್ಗಳಿಕೆ. ಈ ನಟನೊಂದಿಗೆ ಅದೆಷ್ಟೋ ಜನ ಕಲಾವಿದರು ತೆರೆಯನ್ನು ಹಂಚಿಕೊಂಡಿದ್ದು, ಅನೇಕರು ತಮ್ಮದೇ ಆದ ಸ್ಮರಣೆಯನ್ನು ಬಾಲಿವುಡ್ ನಲ್ಲಿ ಬಿಟ್ಟು ಹೋಗಿದ್ದಾರೆ, ಅಂತಹವರಲ್ಲಿ ಒಬ್ಬರು ಖಾದರ್ ಖಾನ್.

ನಟ ಖಾದರ್ ಖಾನ್ ಬಾಲಿವುಡ್ ನಲ್ಲಿ ಹಾಸ್ಯ ನಟನಾಗಿ ತನ್ನದೇ ಆದ ಒಂದು ನೆಲೆಯನ್ನು ಕಂಡು ಕೊಂಡ ನಟ ಇವರು. ಖಾದರ್ ಖಾನ್ ಅಮಿತಾಬ್ ಬಚ್ಚನ್ ಅವರ ಜೊತೆ ಕೂಡಾ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಚಿತ್ರರಂಗದಲ್ಲಿ ವಿಶೇಷ ಸ್ಥಾನವನ್ನು ಪಡೆದಿದ್ದ ಖಾದರ್ ಖಾನ್ ಅವರು ತೆರೆಯ ಮೇಲೆ ಕಾಣಿಸಿಕೊಂಡರೆ ಸಾಕು ಜನರ ಮುಖದಲ್ಲಿ ನಗೆಯು ಉಕ್ಕುತ್ತಿತ್ತು. ತನ್ನ ಆ ಹಾಸ್ಯದ ಅಭಿನಯದ ಮೂಲಕವೇ ಜನರ ಹೃದಯದಲ್ಲಿ ಒಂದು ಜಾಗವನ್ನು ಸಂಪಾದನೆ ಮಾಡಿದವರು ಖಾದರ್ ಖಾನ್. ಇವರು ಸಿನಿಮಾ ಮಾತ್ರವಲ್ಲದೇ ಸಿನಿಮಾಗಳ ಸ್ಕ್ರೀನ್ ಪ್ಲೇ ಹಾಗೂ ಸಂಭಾಷಣೆಗಳನ್ನು ಕೂಡಾ ಬರೆಯುತ್ತಿದ್ದರು ಎಂಬುದು ಕೂಡಾ ಅವರ ಪ್ರತಿಭೆಗೆ ಸಾಕ್ಷಿಯಾಗಿತ್ತು.
ಖಾದರ್ ಖಾನ್ ಅಮಿತಾಬ್ ಅವರೊಡನೆ ನೂರಾರು ಸಿನಿಮಾಗಳಲ್ಲಿ ನಟಿಸಿದ್ದರು. ಅಲ್ಲದೇ ಅವರು ಅಮಿತಾಬ್ ಅವರೊಡನೆ ಉತ್ತಮವಾದ ಸ್ನೇಹವನ್ನು ಹೊಂದಿದ್ದರು ಕೂಡಾ. ಅಮಿತಾಬ್ ಬಚ್ಚನ್ ಅವರೊಡನೆ ಎಷ್ಟು ಆತ್ಮೀಯರಾಗಿದ್ದರು ಎಂದರೆ ಖಾದರ್ ಖಾನ್ ಅವರನ್ನು ಅಮಿತ್ ಎಂದೇ ಕರೆಯುತ್ತಿದ್ದರಂತೆ. ಒಂದು ಇಂಟರ್ ವ್ಯೂ ನಲ್ಲಿ ಖಾದರ್ ಖಾನ್ ಅವರು ಮಾತನಾಡುತ್ತಾ, ನಾನು ಅಮಿತಾಬ್ ಅವರನ್ನು ಅಮಿತ್ ಅಮಿತ್ ಎಂದು ಕರೆಯುವಾಗ ಒಬ್ಬ ದಕ್ಷಿಣದ ನಿರ್ಮಾಪಕರು ಬಂದು ನೀವು ಸರ್ ಜಿ ಅವರನ್ನು ಭೇಟಿ ಯಾಗಿದ್ದಿರಾ ಅಂದರಂತೆ. ಆಗ ಖಾದರ್ ಖಾನ್ ಅವರೇ ಆ ಎತ್ತರವಾದ ವ್ಯಕ್ತಿ ಎಂದರಂತೆ.
ಆಗ ಖಾದರ್ ಖಾನ್ ಅವರು ಅಮಿತ್ ಸರ್ ಜೀ ಯಾಕೆ ಎಂದ್ರಂತೆ. ಅದಾದ ನಂತರ ಅಲ್ಲಿದ್ದವರೆಲ್ಲಾ ಅವರನ್ನು ಸರ್ ಜೀ, ಅಮಿತ್ ಜೀ ಎನ್ನುತ್ತಿದ್ದರು. ಆದರೆ ನನಗೆ ಅದು ಸಾಧ್ಯವಾಗಲಿಲ್ಲ, ನಾನು ಅಲ್ಲಿಂದ ಹೊರಗೆ ನಡೆದೆ, ಅನಂತರದ ದಿನಗಳಲ್ಲಿ ಅಮಿತಾಬ್ ಮತ್ತು ನನ್ನ ನಡುವೆ ವಿಚಾರಗಳು ಬದಲಾದವು. ಆದರೆ ಒಬ್ಬ ಸಹೋದರನನ್ನು ನಾನು ಹೇಗೆ ಸರ್ ಜಿ, ಅಮಿತ್ ಜೀ ಎಂದು ಕರೆಯೋಕೆ ಸಾಧ್ಯ ಹೇಳಿ? ಅದಾದ ಮೇಲೆ ನಾನು ಅವರ ಖುದಾ ಗವಾ ಸಿನಿಮಾಗಳಲ್ಲಿ ಮಾಡಲಿಲ್ಲ, ಗಂಗಾ ಜಮುನಾ ಸರಸ್ವತಿ ಅರ್ಧದಲ್ಲೇ ಬಿಟ್ಟೆ, ಇನ್ನು ಕೆಲವು ಸಿನಿಮಾಗಳ ಸಂಭಾಷಣೆ ಬರೆಯಲಿಲ್ಲ ಎಂದು ಹೇಳಿದ್ದಾರೆ.

ಒಂದು ಸಿನಿಮಾ ಕೂಡಾ ಮಾಡಿದೆ, ಆಗಲೂ ಅದೇ ಕಷ್ಟವಾಯಿತು, ನಟರು ನಿರ್ಮಾಪಕರಾಗಬಾರದು ಅನಿಸಿತು ಎಂದ ಖಾದರ್ ಖಾನ್ ಅವರಿಗೆ ಅಮಿತಾಬ್ ಅವರು ಕೂಲಿ ಸಿನಿಮಾ ಸಮಯದಲ್ಲಿ ಇನ್ನೆರಡು ದಿನದ ನಂತರ ಬಾ, ಕೂಲಿ ಸಿನಿಮಾ ಮುಗಿದ ಇದೇ ಜಾಗದಲ್ಲಿ ನಿನ್ನ ಸಿನಿಮಾ ಮುಹೂರ್ತ ಮಾಡಿಬಿಡೋಣ ಎಂದರಂತೆ. ಆದರೆ ಎರಡು ದಿನದ ನಂತರ ಆಗಿದ್ದೇ ಬೇರೆ, ಅಮಿತಾಬ್ ಅವರ ಸಹೋದರ ಕರೆ ಮಾಡಿ ಕೂಲಿ ಸಿನಿಮಾ ಸ್ಪಾಟ್ ನಲ್ಲಿ ಅಮಿತಾಬ್ ಅವರಿಗೆ ಅ ಪ ಘಾ ತ ವಾಗಿದೆ ಎಂದು ತಿಳಿಸಿದರಂತೆ. ಅವರಿಗೆ ಬಹಳ ಸೀ ರಿ ಯಸ್ ಆಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅನಂತರ ಹುಷಾರಾದ ಮೇಲೆ ಅವರು ರಾಜಕೀಯದ ಕಡೆ ಗಮನ ಹರಿಸಿದರು, ಎಲ್ಲಾ ಬದಲಾಯಿತು, ಅವರ ಜೊತೆ ನನ್ನ ಸ್ನೇಹ ಕೂಡಾ ಮೊದಲಿನಂತೆ ಉಳಿಯಲಿಲ್ಲ ಎಂದಿದ್ದಾರೆ.