Articles

ನಮ್ಮ ಜನಾನೇ ಹೀಗೆರಿ! ನಿಂತಿರೋ ಬಸ್ಸೇನು, ಹಾರೋ ವಿಮಾನಿನಲ್ಲಿಯೂ ಜಾಗ ಹಿಡಿಯುತ್ತಾರೆ! ನೋಡಿ ಹಳ್ಳಿ ದಂಪತಿಗಳ ಐಡಿಯಾದ ಸೂಪರ್ರೋ ಸೂಪರ್ ವಿಡಿಯೋ…

ನಮ್ಮ ದೇಶದಲ್ಲಿ ಟ್ಯಾಲೆಂಟ್ ಗೆ ಏನೂ ಕಮ್ಮಿ ಇಲ್ಲ ಅಂತ ಆಗಾಗ ಅಲ್ಲಲ್ಲಿ ಕೇಳಿಯೇ ಕೇಳುತ್ತವೆ. ಕೆಲವರ ಐಡಿಯಾಗಳು ಇಷ್ಟೊಂದು ಡಿಫರೆಂಟ್ ಆಗಿರುತ್ತವಲ್ಲ ಅವುಗಳನ್ನು ನೋಡಿದಾಗ ನಕ್ಕು ನಕ್ಕು ಹೊಟ್ಟೆ ಹುಣ್ಣಾಗುತ್ತದೆ.

ಸೋಶಿಯಲ್ ಮೀಡಿಯಾದಲ್ಲಿ ಅನೇಕ ರೀತಿಯ ಜನರ ಅನೇಕ ತರದ ಜೂಗಾಡು ಅಂದರೆ ಐಡಿಯಾದ ವಿಡಿಯೋಗಳು ನೋಡಲು ಸಿಗುತ್ತವೆ. ಅಂಥ ಐಡಿಯಾದ ವಿಡಿಯೋಗಳನ್ನು ನೋಡಿ ನಕ್ಕಾಗ ನಿಜಕ್ಕೂ ಮನಸ್ಸು ಒಮ್ಮೊಮ್ಮೆ ಪ್ರಸನ್ನವಾಗಿ ಬಿಡುತ್ತದೆ.

ಈಗ ಇದೇ ರೀತಿಯ ಹೊಸ ವಿಡಿಯೋ ಒಂದು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಎಲ್ಲರನ್ನೂ ನಕ್ಕು ನಗಿಸುತ್ತಿದೆ. ವಿಡಿಯೋದಲ್ಲಿ ಹಳ್ಳಿ ದಂಪತಿಗಳು ಬಸ್ಸಿನಲ್ಲಿ ಜಾಗ ಹಿಡಿಯುವ ಸಲುವಾಗಿ ತಲೆ ನಡೆಸಿದ ಐಡಿಯಾದ ವಿಡಿಯೋ ನಿಜಕ್ಕೂ ನೋಡುವಂತಿದೆ.

ಬಸ್ ಸ್ಟಾಂಡಿನಲ್ಲಿ ಜನಜಂಗುಳಿ ಹೆಚ್ಚಿದ್ದರೆ ಬಸ್ಸಿನಲ್ಲಿ ಆರಾಮಾಗಿ ಕುಳಿತುಕೊಂಡು ಹೋಗುವ ಸಲುವಾಗಿ ಪ್ರವಾಸಿಗರು ಬಸ್ಸು ಬರುತ್ತಿದ್ದಂತೆ ಎಲ್ಲರಿಗಿಂತ ಮೊದಲೇ ಜಾಗ ಹಿಡಿಯಲು ಏನಾದರೊಂದು ಪ್ರಯತ್ನ ಅಥವಾ ಐಡಿಯಾ ಮಾಡಲು ಮುಂದಾಗುತ್ತಾರೆ. ಎಷ್ಟೋ ಸಲ ಕೈಯಲ್ಲಿಯ ಕರ್ಚೀಫ್, ಕೈಚೀಲ ಅಥವಾ ನ್ಯೂಸ್ ಪೇಪರ್ ಹೀಗೆ ಏನಾದರೊಂದು ಬಸ್ಸಿನಲ್ಲಿ ಒಗೆದು ಜಾಗ ಹಿಡಿಯಲು ಪ್ರಯತ್ನಿಸುವುದನ್ನು ಎಲ್ಲರೂ ನೋಡಿಯೇ ಇರಬೇಕು.

ಆದರಿಲ್ಲಿ ಬಸ್ಸಿನಲ್ಲಿ ಕುಳಿತ ಗಂಡನು ಹೊರಗೆ ನಿಂತ ತನ್ನ ಪತ್ನಿಯನ್ನು ಒಳಗೆ ಸೆಳೆದುಕೊಳ್ಳಲು ಮಾಡಿದ ಐಡಿಯಾ ಭರ್ಜರಿಯಾಗಿ ವೈರಲ್ ಆಗುತ್ತಿದೆ. ವ್ಯಕ್ತಿ ಬಸ್ಸಿನಲ್ಲಿ ಹಿಂದಿನ ಸೀಟಿನ ಹತ್ತಿರವಿರುವ ಕಿಟಕಿಯಿಂದ ತನ್ನ ಪತ್ನಿಯನ್ನು ಒಳಗೆ ಜಗ್ಗಿ ಸೆಳೆದುಕೊಂಡಿದ್ದಾನೆ. ಇಬ್ಬರೂ ಬಸ್ಸಿನಲ್ಲಿ ಸೀಟ್ ಹಿಡಿಯಲು ಮಾಡಿದ ಪ್ರಯತ್ನವನ್ನು ಯಾರೋ ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಈ ಸೀಟ್ ಹಿಡಿಯುವ ಪ್ರಯತ್ನದಲ್ಲಿ ದಂಪತಿಗಳು ಯಶಸ್ವಿಯೂ ಆಗಿದ್ದಾರೆ.

ನೀವು ನೋಡಿ ಈ ವಿಡಿಯೋ…

ಈ ವೀಡಿಯೋವನ್ನು ಒಂದು ಇನ್ಸ್ಟಾಗ್ರಾಮ್ ಅಕೌಂಟ್ ನಿಂದ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಇಲ್ಲಿಯವರೆಗೆ ಪ್ರಸ್ತುತ ವಿಡಿಯೋವನ್ನು ಲಕ್ಷಾವಧಿ ಜನರು ನೋಡಿದ್ದಾರೆ ಮತ್ತು ತರತರದ ತಮಾಷೆಯ ಕಾಮೆಂಟ್ ಗಳನ್ನು ಸಹ ಮಾಡುತ್ತಿದ್ದಾರೆ.

Leave a Comment

Your email address will not be published. Required fields are marked *