ಅಯ್ಯೋ! ಇದೆಂಥ ಅವಸ್ಥೆಯಾಯಿತು? ಸುಂದರವಾಗಿ ಕಾಣಲು ಮುಖದ ಮೇಲೆ ಪ್ರಯೋಗ ಮಾಡುವ ಮುನ್ನ ಈ ವೀಡಿಯೋವನ್ನು ತಪ್ಪದೇ ನೋಡಿ….!!

ಪ್ರತಿಯೊಬ್ಬರು ಸುಂದರವಾಗಿ ಕಾಣಬೇಕೆಂದು ಬಯಸುವುದರಲ್ಲಿ ತಪ್ಪೇನಿಲ್ಲ. ಇಂದು ಸುಂದರವಾಗಿ ಇರುವ ವ್ಯಕ್ತಿಗೆ ತುಂಬಾ ಮಹತ್ವ ಕೊಡುತ್ತಾರೆ. ಅದರ ಸಲುವಾಗಿ ಇಂದಿನ ಯುವತಿಯರು ತಾವು ಸುಂದರವಾಗಿ ಕಾಣುವ ಸಲುವಾಗಿ ಮುಖದ ಮೇಲೆ ಹಲವು ಪ್ರಕಾರದ ಪ್ರಯೋಗಗಳು ಮಾಡುತ್ತಾರೆ. ಆದರೆ ಕೆಲವೊಮ್ಮೆ ಈ ಪ್ರಯೋಗಗಳು ಹಾನಿ ಸಹ ಮಾಡುವವು. ಸದ್ಯಕ್ಕೆ ಅಂತಹದೇ ಒಂದು ವಿಡಿಯೋ ತುಂಬಾನೇ ವೈರಲ್ ಆಗುತ್ತಿದೆ ತರುಣಿ ತಾನು ಸುಂದರವಾಗಿ ಕಾಣುವ ಸಲುವಾಗಿ ಒಂದು ವಿಚಿತ್ರ ಪ್ರಯೋಗ ಮಾಡಿದಳು ಅದರ ಪರಿಣಾಮವಾಗಿ ಅವಳ ಮುಖವೇ ಬೇರೆಯಾಗಿದೆ.

ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಅನೇಕ ಸೌಂದರ್ಯವರ್ಧಕಗಳು ಲಭ್ಯವಿವೆ. ಬ್ಯೂಟಿ ಪಾರ್ಲರ್‌ಗೆ ಹೋಗಿ ಮೇಕಪ್, ಫೇಶಿಯಲ್ ಅಥವಾ ಬ್ಯೂಟಿ ಟ್ರೀಟ್‌ಮೆಂಟ್‌ಗಳಿಗೆ ಸಮಯ ವ್ಯರ್ಥ ಮಾಡುವ ಬದಲು, ಕೆಲವು ಉತ್ಪನ್ನಗಳನ್ನು ಮನೆಯಲ್ಲಿಯೂ ಸಹ ಕಡಿಮೆ ಸಮಯದಲ್ಲಿ ಸುಂದರವಾಗಿ ಕಾಣಲು ಬಳಸಲಾಗುತ್ತದೆ. ಇವುಗಳಲ್ಲಿ ಫೇಶಿಯಲ್, ಪೀಲ್ ಆಫ್ ಮಾಸ್ಕ್ ಒಳಗೊಂಡಿರುತ್ತವೆ. ಈ ಯುವತಿ ಕೂಡ ಅಂತಹದೇ ಒಂದು ಪೀಲ್ ಆಫ್ ಮಾಸ್ಕ್ ಬಳಸಿದಳು ಮತ್ತು ನಂತರ ಆಕೆಯ ಸ್ಥಿತಿ ಅಕ್ಷರಶಃ ಭ#ಯಾನಕವಾಗಿದೆ.

ಉತ್ಸಾಹದಿಂದ ಯುವತಿ ತನ್ನ ಮುಖಕ್ಕೆ ಪೀಲ್ ಆಫ್ ಮಾಸ್ಕ್ ಹಚ್ಚಿಕೊಂಡಳು ಆದರೆ ಅವಳು ಅದನ್ನು ತೆಗೆಯುವಾಗ ಎಷ್ಟೊಂದು ನೋವಾಗಿದೆ ಎಂದರೆ ಆ ನೋವಿನಿಂದ ಜೀವವು ಸಹ ಬೇಡವಾದ ರೀತಿಯಲ್ಲಿ ನೋವು ಅನುಭವಿಸಿದ್ದಾಳೆ. ಅಲ್ಲದೆ ತಗೆಯುವಾಗ ಅವಳು ತುಂಬಾ ಅತ್ತಿದ್ದಾಳೆಯೂ ಸಹ. ಈ ವಿಡಿಯೋವನ್ನು ಆಕೆಯ ಕುಟುಂಬಸ್ಥರು ಚಿತ್ರೀಕರಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದು, ಇದೀಗ ಈ ವೀಡಿಯೋ ವೈರಲ್ ಆಗಿದೆ.

ವಿಡಿಯೋದಲ್ಲಿ ನೋಡಬಹುದು, ಯುವತಿಗೆ ಪೀಲ್ ಆಫ್ ಮಾಸ್ಕ್ ಹಚ್ಚಲಾಗಿತ್ತು. ತದನಂತರ ಅದನ್ನು ತಗೆದು ಹಾಕಲು ಪ್ರಯತ್ನ ಮಾಡಿದಳು ಆದರೆ ಮಾಸ್ಕ್ ತುಂಬಾ ಬಿಗಿಯಾಗಿ ಅಂಟಿಕೊಂಡಿದ್ದರಿಂದ ಅದನ್ನು ತಗೆಯಲು ಸಾಧ್ಯವಾಗಲಿಲ್ಲ ಆಗ ಯುವತಿ ಅದನ್ನು ಜೋರಾಗಿ ತಗೆಯಲು ಪ್ರಯತ್ನ ಮಾಡಿದಳು, ಮಾಸ್ಕ್ ಮುಖಕ್ಕೆ ಅಂಟಿಕೊಂಡಿದ್ದರಿಂದ ಅವಳಿವೆ ನೋವಾಗಲು ಶುರುವಾಯಿತು ಆಗ ಆಕೆ ಅಳಲು ಸಹ ಶುರುಮಾಡಿದಳು ಆಗ ಅವರ ಕುಟುಂಬದ ಇಬ್ಬರು ಸದಸ್ಯರು ಬಂದು ಈ ಮಾಸ್ಕ್ ತಗೆಯುವದಕ್ಕೆ ಸಹಾಯ ಮಾಡಿದರು. ಬಹಳಷ್ಟು ಸಮಯದ ನಂತರ ಅವಳ ಮುಖದ ಮೇಲಿನ ಮಾಸ್ಕ್ ತಗೆಯಲು ಸಾಧ್ಯವಾಯಿತು.

ವೀಡಿಯೋ ನೋಡಿ

ಈ ವೀಡಿಯೊವನ್ನು punjabi_industry ಎಂಬ Instagram ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ. ಹೆಚ್ಚಿನ ನೆಟಿಜನ್‌ಗಳು ಈ ಯುವತಿಗೆ ಮತ್ತೆ ಅದೇ ತಪ್ಪನ್ನು ಮಾಡಬೇಡಿ ಎಂದು ಸಲಹೆ ನೀಡಿದ್ದಾರೆ.