Articles

OMG! ಹೀಗೂ ಆಪರೇಷನ್ ಉಂಟೇ? ಸದ್ಯ ಅರ್ಧ ತಲೆಯನ್ನು ಹೊತ್ತುಕೊಂಡೇ ತಿರುಗಾಡುತ್ತಿದ್ದಾನೆ ‘ಈ’ ವ್ಯಕ್ತಿ!

ಮಧ್ಯ ಪ್ರದೇಶದ ಇಂದೋರ್ ನಲ್ಲಿಯ ವ್ಯಕ್ತಿಯ ಜೀವನ ವೈದ್ಯರ ಬೇಜವಾಬ್ದಾರಿತನದಿಂದ ಸರ್ವನಾಶವಾಗಿದೆ. ಡಾಕ್ಟರ್ ಈ ವ್ಯಕ್ತಿಯ ತಲೆಯಲ್ಲಿಂದ ಎಲುಬು ತೆಗೆದಿದ್ದರು. ಮರಳಿ ಅದನ್ನು ಕೂಡಿಸುವ ಸಲುವಾಗಿ ಡಾಕ್ಟರ್ ಗೆ ಕಾಲ್ ಮಾಡಿದಾಗ ಗಮನಕ್ಕೆ ಬಂದ ವಿಷಯವೇನೆಂದರೆ ಆ ಎಲುಬನ್ನೇ ನಷ್ಟ ಮಾಡಲಾಗಿತ್ತು. ಈ ಪ್ರಕರಣದಲ್ಲಿ ವ್ಯಕ್ತಿಯು ಡಾಕ್ಟರ್ ವಿರೋಧ ಕೇಸು ದಾಖಲಿಸಿದ್ದಾನೆ.

ದೊರೆತ ಮೂಲಗಳ ಪ್ರಕಾರ ಕೀರ್ತಿ ಪರಮಾರ್ ಹೆಸರಿನ ವ್ಯಕ್ತಿ ಉಜ್ಜೈನಿನ ನಿವಾಸಿಯಾಗಿದ್ದಾನೆ. ಕೆಲವು ವರ್ಷಗಳ ಹಿಂದೆ ಈತನಿಗೆ ಬ್ರೇನ್ ಟ್ಯೂಮರ್ ಆಗಿತ್ತು. ಮುಂದೆ 2019 ರಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಆಪರೇಷನ್ ಮಾಡಲಾಯಿತು. ಆಪರೇಷನ್ ಸಂದರ್ಭದಲ್ಲಿ ತಲೆಯಲ್ಲಿಯ ಒಂದು ಭಾಗದ ಎಲುಬನ್ನು ತೆಗೆಯಲಾಯಿತು. ಆಗ ಡಾಕ್ಟರ್ ಗಳು ಕೀರ್ತಿಗೆ, ರಿಕವರಿ ಆದ ನಂತರ ಮತ್ತೆ ಇದನ್ನು ಸ್ವಸ್ಥಾನಕ್ಕೆ ಕೂಡಿಸಲಾಗುವದು ಎಂದು ಹೇಳಿದರು.

ಕುಟುಂಬದವರು ಮಾಡಿದ ಆರೋಪ…

ಕೀರ್ತಿ ರಿಕವರಿ ಆದ ಕೆಲವು ದಿನಗಳ ನಂತರ ತನ್ನ ಕುಟುಂಬದ ಜೊತೆಗೆ ಆಸ್ಪತ್ರೆಗೆ ಹೋದನು. ಆಗ ಆಸ್ಪತ್ರೆಯ ವೈದ್ಯರು ಆ ಎಲುಬನ್ನು ನಷ್ಟ ಮಾಡಲಾಗಿದೆ ಎಂದು ಹೇಳಿದರು. ಹಾಗೂ ಇದನ್ನು ನಷ್ಟ ಮಾಡುವ ಸಲುವಾಗಿ ರೋಗಿಯ ಸಂಬಂಧಿಕರು ಒಪ್ಪಿಗೆಯನ್ನು ನೀಡಿದ್ದರು ಎಂದು ಹೇಳಿದರು. ಆದರೆ ಕುಟುಂಬದವರು ಮಾತ್ರ ಇದನ್ನು ಸಾರಾಸಗಟಾಗಿ ತಳ್ಳಿ ಹಾಕಿದ್ದಾರೆ.

ಕುಟುಂಬದವರು ಆಸ್ಪತ್ರೆಯ ಡಾಕ್ಟರ್ಸ್ ಮತ್ತು ಸಿಬ್ಬಂದಿ ವರ್ಗ ಹಾಗೂ ಸಂಪೂರ್ಣ ವ್ಯವಸ್ಥಾಪನೆಯ ಮೇಲೆಯೇ ಆರೋಪ ಮಾಡಿದ್ದಾರೆ. ಅವರ ಪ್ರಕಾರ ತಲೆಯ ಆಪರೇಷನ್ ಮಾಡಿದ ನಂತರ ಮತ್ತೆ ಮರಳಿ ಏಲುಬನ್ನು ಕೂಡಿಸಲು ಒಟ್ಟು ಖರ್ಚು 5 ಲಕ್ಷಕ್ಕಿಂತ ಹೆಚ್ಚು ಹೇಳಿದ್ದರು. ಅದನ್ನು ನಾವು ಪೂರೈಸಿದ್ದೇವೆ. ಈಗ ಅದು ಇಲ್ಲದೆ ರೋಗಿ ಕೀರ್ತಿಯ ಮುಖ ತುಂಬಾ ಕುರೂಪವಾಗಿ ಮತ್ತು ವಿಚಿತ್ರವಾಗಿ ಕಾಣುತ್ತಿದೆ. ಈ ಪ್ರಕರಣದಲ್ಲಿ ಸದ್ಯ ಪೊಲೀಸರ ಎಂಟ್ರಿ ಆಗಿದೆ. ಮುಂದಿನ ತನಿಖೆ ಶುರು ಆಗಿದೆ.

Leave a Comment

Your email address will not be published. Required fields are marked *