ಅಯ್ಯೋ ಸಾಕು ಮಾಡಿ, ಅವಳಿಗ್ಯಾಕೆ ಅಷ್ಟು ಮಾರ್ಯಾದೆ ಕೊಡ್ತಿದ್ದೀರಾ? ಕರೀನಾ ವರ್ತನೆ ನೋಡಿ ಸಿಟ್ಟಿಗ್ಗೆದ್ದ ನೆಟ್ಟಿಗರು!

ಎರಡನೇ ಮಗುವಿಗೆ ಜನ್ಮ ನೀಡಿದ ನಂತರ ಕರೀನಾ ಕಪೂರ್ ಸುಮಾರು ಒಂದು ತಿಂಗಳ ನಂತರ ಕೆಲಸಕ್ಕೆ ಹಾಜರಾದರು. ಸತತ ಅವರು ಎಲ್ಲಿಯಾದರೂ ಕೆಲಸದ ಪ್ರೀತ್ಯರ್ಥವಾಗಿ ತಿರುಗಾಡುತ್ತಿರುತ್ತಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಕರೀನಾ ಅವರ ವರ್ತನೆಯನ್ನು ಕಂಡು ನೆಟ್ಟಿಗರು ತುಂಬಾ ಸಿಟ್ಟಾಗಿದ್ದಾರೆ. ಇದೇ ಕಾರಣದಿಂದ ಕರೀನಾ ಟ್ರೋಲ್ ಆಗುತ್ತಿದ್ದಾರೆ.

ಸೆಲೆಬ್ರಿಟಿ ಫೋಟೋಗ್ರಾಫರ್ ವಿರಲ್ ಭಯ್ಯಾನಿ ಅವರು ತಮ್ಮ ಇನ್ಸ್ಟಾಗ್ರಾಂ ಅಕೌಂಟ್ ನಲ್ಲಿ ಕರೀನಾ ಕಪೂರ್ ಅವರ ವಿಡಿಯೋ ಒಂದನ್ನು ಶೇರ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಕರೀನಾ ಕಪೂರ್ ಅವರು ಒಂದು ಬಿಲ್ಡಿಂಗ್ ನಿಂದ ಹೊರಗೆ ಬರುತ್ತಿದ್ದು ನಂತರ ಅವರು ಒಂದು ಕಾರಿನಲ್ಲಿ ಹೋಗಿ ಕುಳಿತುಕೊಳ್ಳುತ್ತಿದ್ದಾರೆ. ಏತನ್ಮಧ್ಯೆ ಅಲ್ಲಿ ಉಪಸ್ಥಿತರಿರುವ ಫೋಟೋಗ್ರಾಫರ್ ಕರೀನಾ ಅವರನ್ನು ನಿಲ್ಲಿಸಿ ಫೋಟೋ ಸಲುವಾಗಿ ಪೋಸ್ ನೀಡಲು ವಿನಂತಿಸಿದ್ದಾರೆ. ಆದರೆ ಕರೀನಾ ಕಪೂರ್ ಮಾತ್ರ ಅವರ ಮಾತು ಕೇಳಿಯೂ ಕೇಳಿಸದ ಹಾಗೆ ಅಲ್ಲಿಂದ ಹೊರಟು ಹೋಗಿದ್ದಾರೆ.

ಕರೀನಾ ಅವರು ತಮ್ಮ ಕಾರಿನ ಕಡೆಗೆ ಹೋಗುತ್ತಿರುವಾಗ ಅಲ್ಲಿಯ ಫೋಟೋಗ್ರಾಫರ್ ಒಬ್ಬನು ‘ಕರೀನಾ ಮೇಡಂ ಒನ್ ಮಿನಿಟ್, ಸ್ವಲ್ಪ ನಿಲ್ಲಿ ನಾವು ಬಹಳ ಹೊತ್ತಿನಿಂದ ನಿಮ್ಮ ದಾರಿಯನ್ನು ಕಾಯುತ್ತ ನಿಂತಿದ್ದೇವೆ’ ಎಂದು ಗೋಗರೆಯುತ್ತಿದ್ದನು. ಆದರೆ ಕರೀನಾಳು ಮಾತ್ರ ಅಲ್ಲಿ ಒಂದು ಕ್ಷಣವೂ ನಿಲ್ಲದೆ ಹಾಗೆ ಹೋದರು.

ವಿಡಿಯೋ ನೋಡಿ

ಕರೀನಾ ಕಪೂರ್ ಅವರ ಇದೇ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ವಿಡಿಯೋದಲ್ಲಿಯ ಕರೀನಾ ಅವರ ಈ ವರ್ತನೆಯನ್ನು ನೋಡಿ ನೆಟ್ಟಿಗರು ತುಂಬಾ ಸಿಟ್ಟಿಗೆದ್ದಿದ್ದಾರೆ. ಒಬ್ಬ ನೆಟ್ಟಿಗನು ಕಮೆಂಟ್ ಮಾಡುತ್ತಾ ಹೀಗೆ ಹೇಳಿದ್ದಾನೆ, ಸಾಕು ಬಿಡಿ ಇಷ್ಟೊಂದು ಗೌರವ ಯಾಕೆ ನೀಡುತ್ತಿದ್ದೀರಿ? ಆಕೆ ನಿಮಗೆ ಗೌರವ ನೀಡುತ್ತಿಲ್ಲ, ಪ್ರತಿಯಾಗಿ ನೀವೇಕೆ ಅಷ್ಟೊಂದು ಗೌರವ ನೀಡುತ್ತಿದ್ದೀರಿ? ಎಂಬ ವಿಚಾರವನ್ನು ಹೊರಹಾಕಿದ್ದಾನೆ. ಇದಕ್ಕೆ ಅನುಸರಿಸಿ ಇನ್ನೊಬ್ಬ ನೆಟ್ಟಿಗನು, ಆಕೆ ತುಂಬಾ ಅಸಭ್ಯ ಮಹಿಳೆಯಾಗಿದ್ದಾಳೆ ಎಂದಿದ್ದಾನೆ.