Articles

ಚೀನಾದಲ್ಲಿ ಕರೋನಾ ಟೆಸ್ಟ್ ಬಲವಂತವಾಗಿ ಮಾಡಲಾಗುತ್ತದೆ; ಬೆಚ್ಚಿಬೀಳಿಸುವ ವೀಡಿಯೋ ವೈರಲ್!!

ಕರೋನಾ ಸಾಂಕ್ರಾಮಿಕ ರೋಗವನ್ನು ವಿಶ್ವಾದ್ಯಂತ ಹರಡಿದ ಆರೋಪ ಎದುರಿಸುತ್ತಿರುವ ಚೀನಾ ಈಗ ಮತ್ತೊಂದು ಹೊಸ ವಿವಾದದಲ್ಲಿ ಸಿಲುಕಿದೆ. ಕರೋನಾ ಸಾಂಕ್ರಾಮಿಕ ದೇಶಾದ್ಯಂತ ಮತ್ತೊಮ್ಮೆ ತನ್ನ ಇರುವಿಕೆಯನ್ನು ಸಾಬೀತುಪಡಿಸಿದೆ. ಹೀಗಾಗಿ ಇಂದು ಪ್ರತಿಯೊಂದು ದೇಶಗಳು ಕಳೆದ ಎರಡು ವರ್ಷಗಳ ಹಾಗೆ ಕಾಲ ಬರಬಹುದು ಅನ್ನೋ ವಿಚಾರ ನೆನಪಿಸಿ ಭಯಪಡುತ್ತಿವೆ. ದೈವ ಆಟ ಅನ್ನೋ ಹಾಗೆ ಇನ್ನೇನೋ ಕಳೆದ ದಿನಗಳ ಮರೆತು ಹೊಸ ಜೀವನ ನಡೆಸಬೇಕೆಂದು ಎಷ್ಟೋ ಜನರು ಅಸೆಪಟ್ಟು ಹೊಸ ಯೋಚನೆಯೊಂದಿಗೆ ಸಾಗುವಷ್ಟುರಲ್ಲಿ ಈ ಕರೋನಾ ಮತ್ತೊಮ್ಮೆ ತನ್ನ ವರ್ಚಸ್ಸು ಹೆಚ್ಚಿಸುತ್ತಿದೆ.

ಈ ಕರೋನಾ ಸೃಷ್ಟಿಸಿದ ಕಾರಣಕ್ಕಾಗಿ ಪ್ರತಿಯೊಂದು ದೇಶದೊಂದಿಗೆ ವೈರತ್ವ ಬೆಳೆಸಿಕೊಂಡಿರುವ ಚೀನಾ ಈಗ ಮತ್ತೊಂದು ಹೊಸ ವಿವಾದದ ಕುರಿತು ಚರ್ಚೆಯಲ್ಲಿದೆ.
ಅಲ್ಲದೆ ಚೀನಾದಲ್ಲಿ ಕರೋನಾ ಸಾಂಕ್ರಾಮಿಕ ಎಷ್ಟೊಂದು ಹರಡಿದೆ ಎಂದರೆ ಇದುವರೆಗೆ ಚೀನಾ ದೇಶದ ಸುಮಾರು 28 ಪಟ್ಟಣಗಳಲ್ಲಿ ಮತ್ತೆ ಲಾಕ್ಡೌನ್ ಜಾರಿಯಲ್ಲಿ ತರಲಾಗಿದೆ.

ಶಾಂಗಾಯ್ ಪಟ್ಟಣದಲ್ಲಿಯ ಒಂದು ವೀಡಿಯೋ ಸೋಶಿಯಲ್ ಮಿಡಿಯಾದಲ್ಲಿ ತುಂಬಾನೇ ವೈರಲ್ ಆಗುತ್ತಿದೆ. ಪ್ರಸ್ತುತ ವೈರಲ್ ಆಗುತ್ತಿರುವ ವೀಡಿಯೋ ತುಂಬಾ ಆಶ್ಚರ್ಯ ಪಡಿಸುವಂತಿದೆ. ಏಕೆಂದರೆ ವೀಡಿಯೋದಲ್ಲಿ ಕರೋನಾ ಟೆಸ್ಟ್ ಮಾಡುವ ಪರಿಯನ್ನು ನೋಡಿದರೆ ನೀವು ಸಹ ಭಯಪಡದೆ ಇರಲಾರಿರಿ. ಈ ವಿಡಿಯೋದಲ್ಲಿ ಪಟ್ಟಣದ ಒಂದು ಭಾಗದ ಮಾರ್ಕೆಟ್ ನಲ್ಲಿ ಒಬ್ಬ ಯುವತಿಯ ಕರೋನಾ ಕುರಿತಾಗಿ ಟೆಸ್ಟ್ ಮಾಡಲು ಆರೋಗ್ಯ ಅಧಿಕಾರಿಗಳು ಆ ಯುವತಿಯ ಕೈ ಕಾಲುಗಳನ್ನು ಹಿಡಿದು ಅವಳಿಗೆ ಒತ್ತಾಯಿಸಿ ಕರೋನಾ ಟೆಸ್ಟ್ ಮಾಡುತ್ತಿರುವ ದೃಶ್ಯ ಈ ವಿಡಿಯೋದಲ್ಲಿ ಕಂಡು ಬರುತ್ತದೆ. ಚೀನಾ ಪ್ರಶಾಸನದ ಮತ್ತೊಂದು ಮುಖ ಸದ್ಯಕ್ಕೆ ಎಲ್ಲರ ಎದುರಿಗೆ ಪ್ರದರ್ಶನವಾಗುತ್ತಿದ್ದು ಈ ಕುರಿತು ನೇಟಿಜನ್ ತುಂಬಾ ಪ್ರಕೋಪ ವ್ಯಕ್ತ ಪಡಿಸುತ್ತಿದ್ದಾರೆ. ಸಾಮಾನ್ಯವಾಗಿ ಯಾವುದೇ ವ್ಯಕ್ತಿಗೆ ಕರೋನಾ ಟೆಸ್ಟ್ ಮಾಡುವ ಸಂದರ್ಭ ಅಂತ ಬಂದರೆ ಆ ವ್ಯಕ್ತಿಯ ಅನುಮತಿ ತಗೆದುಕೊಂಡು ಆತನು ತನ್ನ ಆರೋಗ್ಯದ ತಪಾಸಣೆ ಮಾಡಿಕೊಳ್ಳಲು ತಯಾರಿದ್ದಾನೆ ಅಂತ ಎಲ್ಲ ಯೋಚಿಸಿ ಮಾಡುವದು ಸೂಕ್ತವಾದ ಪದ್ಧತಿ. ಆದರೆ ಈ ಚೀನಾ ದೇಶದಲ್ಲಿ ಈ ವಿಪರೀತ ಪದ್ಧತಿಯಿಂದಾಗಿ ಅಲ್ಲಿಯ ಜನರು ಸಹ ಪ್ರಶಾಸನದ ವಿರುದ್ಧ ದಂಗೆ ಎದ್ದಿದ್ದಾರೆ.

ವಿಡಿಯೋ ನೋಡಿ.

Leave a Comment

Your email address will not be published. Required fields are marked *