Articles

ರಸ್ತೆಯ ಮೇಲೆ ಹೋಗು-ಬರುವ ಪ್ರವಾಸಿಗರ ಗಾಡಿಯ ಮೇಲೆ ದಾಳಿ ಮಾಡುತ್ತಿತ್ತು ಆನೆ, ಹೀಗೆ ಮಾಡುವುದರ ಹಿಂದಿನ ಕಾರಣ ಕೇಳಿದರೆ ನಿಜಕ್ಕೂ ಹ್ಯಾಟ್ಸಾಫ್ ಅಂತೀರಾ!! ವೀಡಿಯೋ ನೋಡಿ…

ಅರಣ್ಯದಲ್ಲಿ ಎಲ್ಲಕ್ಕಿಂತ ಹೆಚ್ಚು ದಷ್ಟಪುಷ್ಟವಾದ ಪ್ರಾಣಿ ಎಂದರೆ ಅದು ಆನೆ. ಆನೆಯನ್ನು ಕಂಡರೆ ಸಾಕು ನಾವು ಹೆದರಿ ಅಲ್ಲಿಂದ ಪಲಾಯನ ಮಾಡುತ್ತೇವೆ. ಏಕೆಂದರೆ ಆನೆಯ ಭಾರವೇ ಅಷ್ಟೊಂದು ಇರುತ್ತದೆ ಅದು ಒಂದು ಹೆಜ್ಜೆ ಮನುಷ್ಯನ ಮೇಲೆ ಇಟ್ಟರೆ ಕೆಳಗಿದ್ದ ಮನುಷ್ಯ ಚೂರು ಚೂರಾಗುತ್ತಾನೆ. ಆದ್ದರಿಂದಲೇ ಈ ಪ್ರಾಣಿಯನ್ನು ಕಂಡಾಗ ಅಲ್ಲಿಂದ ದೂರ ಹೋಗುವದೇ ತುಂಬಾ ಒಳ್ಳೆಯದು. ಸಾಮಾನ್ಯವಾಗಿ ಆನೆಯನ್ನು ಸಹ ಮನೆಯಲ್ಲಿ ಸಾಕುತ್ತಾರೆ. ಆನೆಯನ್ನು ಸಾಕಿ ಅವುಗಳಿಂದ ತಮಗೆ ಬೇಕಾದ ಭಾರವಾದ ಕೆಲಸ ಸಹ ಮಾಡಿಸಿಕೊಳ್ಳುತ್ತಾರೆ ಹೀಗಾಗಿ ಆನೆ ಇದೊಂದು ಸಹಾಯ ಮಾಡುವ ಪ್ರಾಣಿ ಸಹ ಎಂದು ತಿಳಿಯಲಾಗುತ್ತದೆ. ಆದರೆ ಆನೆ ಒಮ್ಮೊಮ್ಮೆ ತನ್ನ ಸಿಟ್ಟಿನಿಂದ ಏನೆಲ್ಲಾ ಮಾಡಬಹುದು ಎಂಬುದು ನಾವು ಎಷ್ಟೋ ಸಲ ನೋಡಿದ್ದೇವೆ.

ಪ್ರಸ್ತುತವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಒಂದು ವೀಡಿಯೋ ತುಂಬಾನೇ ವೈರಲ್ ಆಗುತ್ತಿದೆ. ಈ ವೀಡಿಯೋ ಸಹ ಆನೆಯದ್ದಾಗಿದೆ. ಈ ಪ್ರಸ್ತುತ ವಿಡಿಯೋದಲ್ಲಿ ಆನೆಯ ಕೋಪ ಮತ್ತು ಪ್ರೀತಿ ಎರಡನ್ನು ನಾವು ನೋಡಬಹುದು. ಅದು ಹೇಗೆ ಅಂತ ಯೋಚಿಸುತ್ತಿದ್ದೀರಾ? ಹೌದು ಈ ವಿಡಿಯೋದಲ್ಲಿ ಮೊದಲಿಗೆ ಆನೆಯ ರೌದ್ರರೂಪ ನೋಡಲು ಸಿಗಬಹುದು, ತದನಂತರ ಆನೆಯ ಸಿಟ್ಟಿನ ಹಿಂದಿನ ಪ್ರೀತಿ ಸಹ ನೋಡಲು ಸಿಗುತ್ತದೆ.

ಈ ವಿಡಿಯೋದಲ್ಲಿ ಒಂದು ಬೃಹದಾಕಾರದ ಆನೆ ರಸ್ತೆಯ ಬದಿಯಲ್ಲಿ ನಿಂತು, ರಸ್ತೆಯ ಮೇಲೆ ಹೋಗುಬರುವ ವಾಹನಗಳಿಗೆ ತನ್ನ ಸೊಂಡಿಲಿನಿಂದ ಹಿಡಿಯುವ ಹಾಗೂ ತಡೆಯುವ ಪ್ರಯತ್ನ ಮಾಡಿತ್ತಿರುತ್ತದೆ. ಹೀಗೆ ಬಹಳಷ್ಟು ಗಾಡಿಗಳಿಗೆ ತೊಂದರೆ ಕೊಡುತ್ತಿದ್ದನ್ನು ಕಂಡು ಅರಣ್ಯ ಅಧಿಕಾರಿಗಳು ಆನೆಯನ್ನು ಹೇಗಾದರೂ ಮಾಡಿ ಅರಣ್ಯದ ಮಧ್ಯದಲ್ಲಿ ಓಡಿಸಿಬೇಕೆಂದು ಎಷ್ಟೇ ಪ್ರಯತ್ನ ಪಟ್ಟರು ಸಹ ಆನೆ ರಸ್ತೆಯಿಂದ ಸರಿಯದೆ ಹಾಗೆ ನಿಂತಿತ್ತು. ಆಗ ಕೋಪಗೊಂಡ ಅಧಿಕಾರಿಗಳು ಆನೆಯ ಮಗ್ಗುಲಲ್ಲಿ ಪಟಾಕಿ ಹಚ್ಚುತ್ತಾ ಅದಕ್ಕೆ ಅಲ್ಲಿಂದ ಓಡಿಸಲು ಪ್ರಯತ್ನ ಮಾಡುತ್ತಾರೆ. ಅಷ್ಟಾದ್ರೂ ಸಹ ಆನೆಯು ಕದಲದೇ ಅಲ್ಲಿಯೇ ನಿಲ್ಲುವ ಪ್ರಯತ್ನ ಮಾಡುತ್ತಿತ್ತು. ಇದರ ಹಿಂದೆ ಏನೋ ಕಾರಣ ಇರಬಹುದು ಎಂದು ಅರಿತ ಅಧಿಕಾರಿಗಳು ಆನೆಯ ಹಿಂದೆ ಸಾಗುತ್ತ ಹೊರಟರು. ಆಗ ಆನೆ ಮಾತ್ರ ಅಲ್ಲಿದ್ದ ಒಂದು ನೀರಿನ ಹೊಂಡದ ಬಳಿಯಲ್ಲಿ ಇವರನ್ನು ಕರೆದುಕೊಂಡು ಹೋಗುತ್ತದೆ.

ಹೊಂಡದ ಬಳಿ ಹೋಗಿ ಆನೆ ನಿಲ್ಲುತ್ತದೆ. ಆಗ ಅಧಿಕಾರಿಗಳು ಹೊಂಡದಲ್ಲಿ ಏನೋ ಸಮಸ್ಯೆ ಇದೆ ಎಂದು ಭಾವಿಸಿ ಹೊಂಡದಲ್ಲಿ ನೋಡಿದಾಗ ಅದರಲ್ಲಿ ಆನೆಯ ಮರಿಯೊಂದು ನೀರಿನಲ್ಲಿ ಬಿದ್ದು ಮೇಲೆ ಬರಲು ಆಗದೆ ಅಲ್ಲಿಯೇ ಬಡಿದಾಡುತ್ತಿರುತ್ತದೆ. ಆಗ ಅಧಿಕಾರಿಗಳು ಆನೆಯ ಕೋಪದ ಕಾರಣ ಇದೆ ಎಂದು ಅರಿತರು. ತದನಂತರ ಆನೆಯ ಮರಿಯನ್ನು ಮೇಲೆ ತಗೆಯಲು ಹೊಂಡದ ಒಂದು ಬದಿಯಲ್ಲಿ ಸಲಿಕೆಯಿಂದ ರಸ್ತೆ ಮಾಡುತ್ತಾರೆ. ಆಗ ಆನೆ ಮರಿ ತುಂಬಾ ಪ್ರಯತ್ನ ಮಾಡಿ ಕೊನೆಗೆ ಮೇಲೆ ಬರುತ್ತದೆ. ಆಗ ಆನೆ ಮತ್ತು ಆನೇಮರಿ ಎರಡು ಸಹ ಅಲ್ಲಿಂದ ಸಂತೋಷವಾಗಿ ಹೋಗುತ್ತವೆ.

ವಿಡಿಯೋ ನೋಡಿ

Leave a Comment

Your email address will not be published. Required fields are marked *