ಅಲಾಸ್ಕಾ ರಹಸ್ಯ: ಅಮೆರಿಕೆಯ ಈ ಸುಂದರ ರಾಜ್ಯ, ರಶಿಯಾದಿಂದ ಖರೀದಿಸಿದ್ದು ಬರೀ 45 ಕೋಟಿ ರೂಪಾಯಿಗಳಿಗೆ!

ಸಾಮಾನ್ಯವಾಗಿ ಯಾವುದೇ ರಾಜ್ಯದ ಹೆಸರು ತಗೆದುಕೊಳ್ಳುವದಕ್ಕಿಂತ ಮುಂಚೆ ಅದು ಒಂದು ದೇಶದ ಭಾಗವಿರುವದು ಅಲ್ಲದೆ ಆ ರಾಜ್ಯವು ಯುದ್ಧದಲ್ಲಿ ಗೆದ್ದುಕೊಂಡು ಅದನ್ನು ತಮ್ಮ ದೇಶದಲ್ಲಿ ವಿಲೀನ ಮಾಡುವರು. ಆದರೆ ಅಮೇರಿಕಾದಲ್ಲಿ ಒಂದು ರಾಜ್ಯ ವಿದೆ . ಆ ರಾಜ್ಯವು ರಶಿಯಾ ದೇಶದಿಂದ ಖರೀದಿ ಮಾಡಲಾಗಿತ್ತು . ಅದರ ಮೊತ್ತ 45 ಕೋಟಿ 81 ಲಕ್ಷ ಕೊಟ್ಟು ಅಮೇರಿಕಾವು ಈ ರಾಜ್ಯವನ್ನು ಖರೀದಿ ಮಾಡಲಾಗಿತ್ತು. ಇದನ್ನು ಕೇಳಿ ನಿಮಗೆ ಆಶ್ಚರ್ಯವೆನಿಸಿರಬಹುದು ಆದರೆ ಇದು ಸತ್ಯ. ಕ್ಷೇತ್ರಫಲದ ದೃಷ್ಟಿಯಿಂದ ಅಮೇರಿಕಾದ 50 ರಾಜ್ಯಗಳಲ್ಲಿ ಈ ರಾಜ್ಯವು ಸಹ ಒಂದಾಗಿದೆ. ಆ ರಾಜ್ಯ ಯಾವುದು ಅದರ ಕುರಿತು ನಾವು ಇಂದು ತಿಳಿಸುವವರಿದ್ದೇವೆ.

ಈ ಅಮೇರಿಕಾದ ರಾಜ್ಯದ ಹೆಸರು ಅಲಾಸ್ಕಾ. ಅಲಾಸ್ಕಾ ರಾಜ್ಯದ ಪೂರ್ವದಲ್ಲಿ ಕೆನಡಾ, ಉತ್ತರದಲ್ಲಿ ಆರ್ಕಟಿಕ್ ಮಹಾಸಾಗರ, ದಕ್ಷಿಣ-ಪಶ್ಚಿಮ ದಲ್ಲಿ ಪ್ರಶಾಂತ ಮಾಹಾಸಾಗರ ಮತ್ತು ಪಶ್ಚಿಮ ದಲ್ಲಿ ರಶಿಯಾ ಇದೆ. ಈ ರಾಜ್ಯದ ಹೆಸರು ಅಲಾಸ್ಕಾ ಎಂದು ರೂಸ್ ಸಾಮ್ರಾಜ್ಯದ ಕಾಲದಲ್ಲಿ ಉಪಯೋಗ ಮಾಡಲಾಗಿತ್ತು, ತನದಂತರ ಅಮೇರಿಕಾ ಖರೀದಿಸಿ ಅದರ ಹೆಸರು ಬದಲಾವಣೆ ಮಾಡಲಿಲ್ಲ.

ಅಲಾಸ್ಕಾ ಎಂದರೆ, ಮುಖ್ಯ ಭೂಮಿ ಅಥವಾ ಮಹಾನ್ ಭೂಮಿ ಎಂದರ್ಥವಾಗುವದು.
ಜಗತ್ತಿನ ಎಲ್ಲಕ್ಕಿಂತ ದೊಡ್ಡ ಹಿಮ ಪ್ರದೇಶದಲ್ಲಿ ಏಳನೇಯ ಸ್ಥಾನದಲ್ಲಿರುವ ಜೋನೌ ಆಯ್ಸ್ ಫೀಲ್ಡ್ ಇದು ಅಲಾಸ್ಕಾದಲ್ಲಿದೆ. 1500 ಕಿಲೋಮೀಟರ್ ಕ್ಷೇತ್ರದಲ್ಲಿ ಹರಡಿರುವ ಈ ಫೀಲ್ಡ್ ನಲ್ಲಿ ವರ್ಷಕ್ಕೆ ಸುಮಾರು 100 ಫೀಟ್ ಎತ್ತರದಷ್ಟು ಹಿಮ ಬೀಳುತ್ತದೆ. ಏಕೆಂದರೆ ಈ ಪ್ರದೇಶ ಎಲ್ಲಕ್ಕಿಂತ ಎತ್ತರದಲ್ಲಿದೆ ಆದುದರಿಂದ ಬೇಸಿಗೆಯಲ್ಲಿ ಸಹ ಇಲ್ಲಿಯ ಹಿಮ ಕಡಿಮೆ ಪ್ರಮಾಣದಲ್ಲಿ ಕರಾಗುವದು.

ಈ ವಿಷಯ ತಿಳಿದರೆ ನೀವು ಆಶ್ಚರ್ಯ ವಾಗುವದು ಖಚಿತ, ಅದೆಂದರೆ ಅಲಾಸ್ಕಾ ರಾಜ್ಯದ ದ್ವಜವನ್ನು 13 ವರ್ಷದ ಒಬ್ಬ ಹುಡುಗ ಡಿಸೈನ್ ಮಾಡಿದ್ದನು, ಆತನ ಹೆಸರು ಬೆನಿ ಬೆನ್ ಸನ್ಸ್ ಇದೆ. ಈ ದ್ವಜದ ಸಲುವಾಗಿ 1927 ರಲ್ಲಿ ಒಂದು ಸ್ಪರ್ಧೆಯನ್ನು ಆಯೋಜಿಸಲಾಗಿತ್ತು ಅದರಲ್ಲಿ ಬೆನಿ ವಿಜೇತರಾಗಿದ್ದರು ಆಲ್ಲದೆ ಅವರಿಗೆ ಪುರಸ್ಕಾರದ ರೂಪದಲ್ಲಿ 1000 ಡಾಲರ್( 76 ಸಾವಿರ ರೂಪಾಯಿ) ನೀಡಲಾಗಿತ್ತು. ಮೂರು ಜನೇವರಿ 1959 ರಂದು ಅಲಾಸ್ಕಾ ಅಮೇರಿಕಾದ 49 ರಾಜ್ಯವೆಂದು ಘೋಷಣೆ ಮಾಡಲಾಯಿತು. 30 ಮಾರ್ಚ್ 1867 ರಲ್ಲಿ ಅಮೆರಿಕಾವೂ ಅಲಾಸ್ಕಾವನ್ನು ರೂಸ್ ಸಾಮ್ರಾಜ್ಯದಿಂದ ಖರೀದಿ ಮಾಡಲಾಗಿತ್ತು. ಇದರ ಸಲುವಾಗಿ ರಶಿಯಾಗೆ 72 ಲಕ್ಷ ಡಾಲರ್ ( 45 ಕೋಟಿ 81 ಲಕ್ಷ ರೂಪಾಯಿ) ನೀಡಲಾಗಿತ್ತು. ರುಸ್ ನ ಜಾರ್ ಅಲೆಕ್ಸಾಂಡರ್ ದ್ವಿತೀಯ ಇವರು ಮಾರಾಟ ಮಾಡಿದ್ದರು. ಆದರೆ ಆ ಸಮಯದಲ್ಲಿ ಅಲಾಸ್ಕಾ ಜನರು ಈ ವ್ಯವಹಾರ ತಿರಸ್ಕಾರ ಮಾಡಿದ್ದರು, ಆದರೆ ಅವರ ಮಾತನ್ನು ಕಡೆಗೆಣಸಿ ಈ ಕರಾರ್ ಮಾಡಲಾಗಿತ್ತು. ಅಲ್ಲಿದ್ದ ಜನರಿಗೆ ಅಮೆರಿಕಾ ದೇಶ ತಮ್ಮದೆಂದು ಹೇಳಿಕೊಳ್ಳಲು ತುಂಬಾ ಸಮಯ ಬೇಕಾಯಿತು.