Articles

9 ಪತ್ನಿಯರಿಗಾಗಿ ಪತಿ ಅಪ್ಲಾಯ್ ಮಾಡಿದ ವಿಚಿತ್ರ ನಿಯಮ, ಮಗುವಿಗಾಗಿ ತಯಾರಿಸಿದನು ರೋಮ್ಯಾನ್ಸ್ ನ ರೋಸ್ಟರ್..

ಬ್ರೆಜಿಲ್ ನಿವಾಸಿಯಾದ ಮಾಡೆಲ್ ಒಬ್ಬನಿಗೆ 9 ಪತ್ನಿಯರಿದ್ದಾರೆ. ಈತ ಕಳೆದ ಅನೇಕ ತಿಂಗಳುಗಳಿಂದ ತನ್ನ ಎಲ್ಲ ಪತ್ನಿಯರ ಜೊತೆಗೆ ವಾಸಿಸುತ್ತಿದ್ದಾನೆ. ಈಗ ಆತನಿಗೆ ಮಗು ಬೇಕಾಗಿದೆ. ಹೀಗಾಗಿ ಸದ್ಯಕ್ಕೆ ಆತ ಒಂದು ರೂಟೀನ್ ತಯಾರಿಸಿದ್ದಾನೆ. ಆತ ಹೇಳುವ ಪ್ರಕಾರ, ಇದು ‘ಫಸ್ಟ್ ಕಮ್, ಫಸ್ಟ್ ಸರ್ವ್’ ಬೇಸ್ ಮೇಲೆ ಇರಲಿದೆ.

ಬ್ರೆಜಿಲ್ ನಲ್ಲಿ ವಾಸಿಸುವ ಆರ್ಥರ್ ಒ ಉರ್ಸೋ ಹೆಸರಿನ ಮಾಡೆಲ್ ತನ್ನ ಎಲ್ಲ 9 ಪತ್ನಿಯರ ಜೊತೆಗೆ ರೋಮಾನ್ಸ್ ಮಾಡಲು ಒಂದು ನಿಯಮಾವಳಿಯನ್ನು ತೆಗೆದಿದ್ದಾನೆ. ಸದ್ಯಕ್ಕೆ ಇದು ಸೋಶಿಯಲ್ ಮೀಡಿಯಾದಲ್ಲಿ ತುಂಬಾ ಚರ್ಚೆಯ ವಿಷಯವಾಗಿದೆ. ಆದರೆ ಈ ರೊಮ್ಯಾನ್ಸ್ ರೋಸ್ಟರ್ ತೆಗೆದನಂತರ ಈಗ ಆತನಿಗೆ ಇದು ತುಂಬಾ ತಲೆನೋವಾಗಿ ಪರಿಣಮಿಸಿದೆ. ಇದರಿಂದ ಆತನಿಗೆ ಪ್ರೀತಿಸಲು ಪ್ರೆಷರ್ ನಿರ್ಮಾಣವಾಗಲು ಶುರುವಾಯಿತಂತೆ. ಈಗ ಆರ್ಥರ್ ಮಗುವಿಗಾಗಿ ಮೊದಲಿನ ನಿಯಮವನ್ನು ರದ್ದುಗೊಳಿಸಿ ತನ್ನ 9 ಪತ್ನಿಯರಿಗಾಗಿ ಮತ್ತೆ ಹೊಸದಾಗಿ ನಿಯಮ ಒಂದನ್ನು ಜಾರಿಗೆ ತಂದಿದ್ದಾನೆ. ಎಲ್ಲ ನಿಯಮಗಳನ್ನು ಸದ್ಯ ಆತ ಶೀಘ್ರದಲ್ಲಿ ತಂದೆಯಾಗುವ ಕನಸಿಗಾಗಿ ಬದಲಾಯಿಸಿದ್ದಾನೆ ಎಂದು ತಿಳಿದುಬಂದಿದೆ.

ಏತನ್ಮದ್ಯೆ ಯಾವ ಪತ್ನಿಯಿಂದ ನಿನಗೆ ಮೊದಲ ಮಗು ಬೇಕು ಎಂದು ಕೇಳಿದ ಪ್ರಶ್ನೆಗೆ ಆರ್ಥರ್, ‘ಆ ರೀತಿ ನಾನು ಯಾವುದೇ ವಿಚಾರ ಇಲ್ಲಿಯವರೆಗೆ ಮಾಡಿಲ್ಲ, ಮಗು ಯಾರೇ ನೀಡಲಿ ಅದರಿಂದ ಯಾವುದೇ ಡಿಫರೆನ್ಸ್ ಆಗುವುದಿಲ್ಲ. ಎಲ್ಲರೂ ಕೂಡಿಯೇ ಮಗುವಿನ ಪಾಲನೆ-ಪೋಷಣೆ ಪ್ರೀತಿಯಿಂದ ಮಾಡಲಿದ್ದೇವೆ ಎಂದು ಹೇಳಿದ್ದಾನೆ.

ಈ 9 ಪತ್ನಿಯರಲ್ಲಿ ಯಾವಳು ಒಬ್ಬಳೇ ನನ್ನ ಫೇವರೆಟ್ ಪತ್ನಿ ಆಗಿಲ್ಲ, ಎಲ್ಲರೂ ನನಗೆ ಫೇವರೆಟ್ ಆಗಿದ್ದಾರೆ. ಮತ್ತು ನನಗೆ ನೈಸರ್ಗಿಕವಾಗಿಯೇ ಹೆತ್ತ ಮಗು ಬೇಕಾಗಿದೆ. ಈ ವಿಷಯವನ್ನು ಆರ್ಥರ್ ತನ್ನ ಪತ್ನಿಗಳ ಜೊತೆಗೆ ಹಂಚಿಕೊಂಡಾಗ ಅವರೆಲ್ಲರೂ ಇದಕ್ಕೆ ತುಂಬಾ ಉತ್ಸುಕತೆಯನ್ನು ತೋರಿಸಿದ್ದಾರೆ. ಒಮ್ಮೆ ಮನೆಯಲ್ಲಿ ಮಗು ಬಂದರೆ ಎಲ್ಲರಿಗೂ ಆ ಅನುಭವ ಪಡೆಯಬೇಕೆಂಬ ಆಸೆ ನಿರ್ಮಾಣವಾಗುತ್ತದೆ ಎಂದು ನನಗನಿಸುತ್ತದೆ ಎನ್ನುತ್ತಾನೆ ಆರ್ಥರ್. ಸದ್ಯಕ್ಕಂತೂ ಫಸ್ಟ್ ಕಮ್ ಫಸ್ಟ್ ಸರ್ವ್ ಈ ನಿಯಮವನ್ನು ಚಾಲ್ತಿಯಲ್ಲಿ ಇಡಲಿದ್ದೇನೆ ಎನ್ನುತ್ತಾನೆ ಈ ಫೇಮಸ್ ಮಾಡೆಲ್.

 

View this post on Instagram

 

A post shared by Arthur O Urso (@arthurourso)

ಇದಕ್ಕೂ ಮೊದಲು ಆರ್ಥರ್ ತನ್ನ ಪತ್ನಿಗಳ ಮಧ್ಯದಲ್ಲಿರುವ ಅಸೂಯೆ ಮತ್ತು ಹೊಟ್ಟೆಕಿಚ್ಚಿನ ಬಗ್ಗೆ ಕೆಲವು ವಿಷಯಗಳನ್ನು ಚರ್ಚಿಸಿದ್ದಾನೆ. ಎಲ್ಲರ ಜೊತೆಗೆ ಸರಿಯಾಗಿ ಬ್ಯಾಲೆನ್ಸ್ ಇಟ್ಟುಕೊಳ್ಳುವುದು ತುಂಬಾ ಕಷ್ಟದ ಕೆಲಸವಾಗಿದೆ ಎನ್ನುತ್ತಾನೆ. ಅದರಲ್ಲಿ ಒಬ್ಬಳು ಪತ್ನಿಯು ವಿಚ್ಛೇದನವನ್ನು ತೆಗೆದುಕೊಂಡಿದ್ದಾರೆ ಎಂಬ ಚರ್ಚೆ ಇತ್ತು. ಅದರ ಬಗ್ಗೆ ಕೇಳಿದಾಗ ಆರ್ಥರ್ ಹೇಳುತ್ತಾನೆ, ಒಬ್ಬಳು ಪತ್ನಿ ನನ್ನ ಜೊತೆಗೆ ಮಾತನಾಡಲು ಕರೆದಳು, ಮೊದಲು ಎಲ್ಲವೂ ಸರಿಯಾಗಿ ನಡೆದಿತ್ತು ಆದರೆ ಈಗ ನೇರವಾಗಿ ಹೇಳುವುದೆಂದರೆ, ಆಕೆಗೆ ನಾನು ವಿಚ್ಛೇದನೆ ಕೊಡಲಿದ್ದೇನೆ ಎಂದು ಆರ್ಥರ್ ಹೇಳುತ್ತಾನೆ.

Leave a Comment

Your email address will not be published. Required fields are marked *