ಅ ಶ್ಲೀ ಲ ಸಿನಿಮಾ ಶೂಟ್ ಮಾಡಲು, ನಟಿಯರಿಂದ ಮಾಡಿಸುವ ಅಗ್ರಿಮೆಂಟ್ ನಲ್ಲಿ ಏನಿರುತ್ತದೆ?? ಒಮ್ಮೆ ಓದಿ ನೋಡಿ

“ಚಿತ್ರಕ್ಕಾಗಿ ನಿಕಟವಾದ ಮತ್ತು ಕಾ ಮ ಪ್ರ ಚೋ ದಕ ದೃಶ್ಯಗಳು, ತುಟಿಗಳಿಗೆ ಚುಂಬನ, ಸೊಂಟದ ಮೇಲೆ ಮತ್ತು ಸಂಪೂರ್ಣವಾಗಿ ನ ಗ್ನ ದೃಶ್ಯಗಳನ್ನು ಮಾಡಲು ನನ್ನ ಒಪ್ಪಿಗೆಯನ್ನು ನಾನು ಘೋಷಿಸುತ್ತೇನೆ. ನನ್ನ ಸ್ವಂತ ಇಚ್ಛೆಯಿಂದ ನಾನು ಈ ದೃಶ್ಯಗಳನ್ನು ಮಾಡುತ್ತಿದ್ದೇನೆ. ಇಲ್ಲಿ ಪ್ರೊಡಕ್ಷನ್ ಹೌಸ್ ಒತ್ತಡ ಇರುವುದಿಲ್ಲ” ಈ ಸಾಲುಗಳು ರಾಜ್ ಕುಂದ್ರಾ ರಂತಹ ಅ ಶ್ಲೀ ಲ ಸಿನಿಮಾಗಳ ನಿರ್ಮಾಪಕರು ತಮ್ಮ ಸಿನಿಮಾಗಳಲ್ಲಿ ನಟಿಸುವ ನಟಿಯರಿಂದ ಸಹಿ ಪಡೆದುಕೊಳ್ಳುವ ಅಗ್ರೀಮೆಂಟಿನ ಸಾಲುಗಳಾಗಿವೆ. ರಾಜ್ ಕುಂದ್ರಾ ದೊಡ್ಡ ಹೆಸರನ್ನು ಮಾಡಿರುವ ವ್ಯಕ್ತಿಯಾಗಿರುವುದರಿಂದ ಅ ಶ್ಲೀ ಲ ಸಿನಿಮಾಗಳ ನಿರ್ಮಾಣ ಹಾಗೂ ಹಂಚಿಕೆ ವಿಚಾರದಲ್ಲಿ ಬಂಧಿತರಾದ ಮೇಲೆ ಆ ವಿಷಯ ದೊಡ್ಡಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಆದರೆ ಈ ಪ್ರಕರಣ ಹೊರ ಬಂದ ನಂತರ ಇದೇ ಫೀಲ್ಡ್ ನಲ್ಲಿ ಸಕ್ರಿಯವಾಗಿದ್ದ ಸಣ್ಣ ಮೀನುಗಳು ಸಹಾ ಸಿಕ್ಕಿದೆ ಎನ್ನುವ ವಿಚಾರ ಹೊರಗೆ ಬಂದಿದೆ.

ಇಂತಹ ಜನರು ನಟಿಯರಾಗಲು ಬಯಸುವ ಯುವತಿಯರನ್ನು ಪುಸಲಾಯಿಸಿ ಅಥವಾ ಬೆದರಿಕೆಯನ್ನು ಹಾಕುವ ಮೂಲಕ ಇಂತಹ ಸಿನಿಮಾಗಳಲ್ಲಿ ನಟಿಸಲು ಒಪ್ಪಿಸುತ್ತಾರೆ. ಯುವತಿಯರನ್ನು ಇಂತಹ ದೃಶ್ಯಗಳಲ್ಲಿ ನಟಿಸುವ ಮೊದಲೇ ಅಂದರೆ ಈ ಸಿನಿಮಾಗಳ ಚಿತ್ರೀಕರಣ ಪ್ರಾರಂಭ ಮಾಡುವ ಮೊದಲೇ ಬಹಳ ಬುದ್ಧಿವಂತಿಕೆ ತೋರುತ್ತಾ ಅವರಿಂದ ಅಗ್ರಿಮೆಂಟ್ ಗೆ ಸಹಿಯನ್ನು ಮಾಡಿಸಲಾಗುತ್ತದೆ. ಅಂತಹದೊಂದು ಅಗ್ರಿಮೆಂಟ್ ನ ಕಾಪಿ ಇಂಡಿಯಾ ಟುಡೇ ಮಾಧ್ಯಮಕ್ಕೆ ಸಿಕ್ಕಿದೆ. ಅಗ್ರಿಮೆಂಟ್ ನಲ್ಲಿ ಯಾವೆಲ್ಲಾ ಸಾಲುಗಳನ್ನು ಬರೆಯಲಾಗಿದೆ ಎನ್ನುವ ವಿಚಾರವನ್ನು ಒಮ್ಮೆ ತಿಳಿಯೋಣ ಬನ್ನಿ.

ಫ್ಲಿಜ್ ಮೂವೀಸ್ ಬ್ಯಾನರ್ ನಲ್ಲಿ ಸಿದ್ಧವಾಗುತ್ತಿರುವ ಹಾಗೂ ವಿಶ್ವದ ಒಂದು ದೊಡ್ಡ ಓಟಿಟಿ ಪ್ಲಾಟ್ ಫಾರ್ಮ್ ನಲ್ಲಿ ಬಿಡುಗಡೆಯಾಗಲಿರುವ ವೆಬ್ ಸೀರಿಸ್ ನಲ್ಲಿ ನಟಿಸಲು, ಹತ್ತು ಸಾವಿರ ರೂಪಾಯಿಗಳ ಪ್ಯಾಕೇಜ್ ನಲ್ಲಿ ನನಗೆ ಅವಕಾಶ ನೀಡಿರುವ ವಿಚಾರವಾಗಿ ನನಗೆ ಬಹಳ ಸಂತೋಷವಾಗಿದೆ. ಮಾತುಕತೆ ಯಲ್ಲಿ ಹೇಳಿದಂತೆ ಈ ಚಿತ್ರದ ಚಿತ್ರೀಕರಣ……….. ತಾರೀಖಿನಂದು ಪ್ರಾರಂಭವಾಗಲಿದೆ. ಈ ಚಿತ್ರಕ್ಕಾಗಿ ನಿಕಟ ಮತ್ತು ಕಾ ಮ ಪ್ರಚೋದಕ ದೃಶ್ಯಗಳು, ತುಟಿಗಳಿಗೆ ಚುಂಬನ, ಸೊಂಟದ ಮೇಲೆ ಮತ್ತು ಸಂಪೂರ್ಣವಾಗಿ ನ ಗ್ನ ದೃಶ್ಯಗಳನ್ನು ಮಾಡಲು ನನ್ನ ಒಪ್ಪಿಗೆಯನ್ನು ಘೋಷಿಸುತ್ತೇನೆ. ನನ್ನ ಸ್ವಂತ ಇಚ್ಛೆಯಿಂದ ಈ ದೃಶ್ಯಗಳನ್ನು ನಾನು ಮಾಡುತ್ತಿದ್ದೇನೆ ಎಂದು ನಾನು ಒಪ್ಪುತ್ತೇನೆ. ಪ್ರೊಡಕ್ಷನ್ ಹೌಸ್‌ನ ಒತ್ತಡ ಇಲ್ಲ.

ಯಾವುದೇ ಚಲನಚಿತ್ರ, ವೆಬ್‌ಸೈಟ್ ಅಥವಾ ಒಟಿಟಿಯಲ್ಲಿ ಪ್ರೊಡಕ್ಷನ್ ಹೌಸ್ ನನ್ನ ಕಾಮಪ್ರಚೋದಕ / ನಿಕಟ / ಅರೆ-ನಗ್ನ ಅಥವಾ ನಗ್ನ ದೃಶ್ಯಗಳನ್ನು ಬಳಸುವುದಕ್ಕೆ ನನಗೆ ಯಾವುದೇ ಆಕ್ಷೇಪವಿಲ್ಲ ಎಂದು ನಾನು ಸ್ಪಷ್ಟಪಡಿಸುತ್ತೇನೆ. ಈ ನಿಟ್ಟಿನಲ್ಲಿ ನಾನು ಅವರ ವಿರುದ್ಧ ಯಾವುದೇ ದೂರು ನೀಡುವುದಿಲ್ಲ. ಧನ್ಯವಾದಗಳು ” ಎನ್ನುವ ಸಾಲುಗಳು ಅಗ್ರಿಮೆಂಟ್ ನಲ್ಲಿ ಇರುತ್ತದೆ. ಆಸಕ್ತಿಕರ ವಿಷಯ ಏನೆಂದರೆ ಅಗ್ರಿಮೆಂಟ್ ಯಾವುದೇ ಭಾಗದಲ್ಲೂ ಸಿನಿಮಾದ ಹೆಸರು ಹಾಗೂ ಸಿನಿಮಾ ನಿರ್ಮಾಣ ಕಂಪನಿಯ ರಿಜಿಸ್ಟ್ರೇಷನ್ ನಂಬರ್ ನಮೂದಾಗಿರುವುದಿಲ್ಲ.

ಈ ಅಗ್ರಿಮೆಂಟ್ ನಲ್ಲಿ ಯುವತಿಯರಿಗೆ ನೀಡಲು ನಿರ್ಧರಿಸುವ ಹಣ ಸಿನಿಮಾದಿಂದ ಗಳಿಸುವ ಲಾಭಕ್ಕೆ ಹೋಲಿಕೆ ಮಾಡಿದಾಗ ಬಹಳ ಕಡಿಮೆಯಾಗಿರುತ್ತದೆ. ಒಂದು ವೇಳೆ ಅಗ್ರಿಮೆಂಟ್ ಸಹಿ ಹಾಕಿದ ನಂತರ ಯುವತಿಯರು ಇಂತಹ ದೃಶ್ಯಗಳಲ್ಲಿ ನಟಿಸಲು ಒಪ್ಪದೇ ಹೋದರೆ, ಚಿತ್ರೀಕರಣಕ್ಕಾಗಿ ಖರ್ಚು ಮಾಡಿದಂತಹ ಎಲ್ಲ ಹಣವನ್ನು ಅವರೇ ಪಾವತಿಸಬೇಕು ಎನ್ನುವ ಬೆದರಿಕೆಯನ್ನು ಹಾಕಲಾಗುತ್ತದೆ ಎಂದು ಪೋಲಿಸರು ತಿಳಿಸಿದ್ದಾರೆ.
ಮಾಧ್ಯಮಕ್ಕೆ ದೊರೆತಿರುವ ಅಗ್ರಿಮೆಂಟ್ ರಾಜ್ ಕುಂದ್ರಾ ಅವರ ಕಂಪನಿಗೆ ಸಂಬಂಧಪಟ್ಟಿಲ್ಲ ಎನ್ನಲಾಗಿದೆ. ಆದರೆ ಈ ಕಾಂಟ್ರಾಕ್ಟ್ ನೋಡಿದಾಗ ಇಂತಹ ಕಂಪನಿಗಳು ಯಾವ ರೀತಿಯಲ್ಲಿ ಅಗ್ರಿಮೆಂಟ್ ಮಾಡಿಕೊಳ್ಳುತ್ತವೆ ಎನ್ನುವ ಕುರಿತಾದ ಒಂದು ಸ್ಪಷ್ಟನೆ ದೊರೆಯುತ್ತದೆ.

ರಾಜ್ ಕುಂದ್ರಾ ಅವರ ನಿರ್ಮಾಣ ಸಂಸ್ಥೆಯ ಬೇರೆ ನಿರ್ಮಾಣ ಸಂಸ್ಥೆಗಳ ಅ ಶ್ಲೀ ಲ ಸಿನಿಮಾಗಳನ್ನು ಖರೀದಿ ಮಾಡಿ ವಿದೇಶದಲ್ಲಿ ಮಾರಾಟ ಮಾಡುತ್ತದೆ ಎನ್ನಲಾಗಿದೆ. ಹಾಟ್ ಶಾಟ್ ನಂತಹ ಆ್ಯಪ್ ಗಳಲ್ಲಿ ಈ ವಿಡಿಯೋಗಳನ್ನು ನೋಡಲು ಸಬ್ಸ್ಕ್ರಿಪ್ಷನ್ ಮಾಡಬೇಕಾಗುತ್ತದೆ. ಒಂದು ರೇಡಿಯೋ ದಿಂದಲೇ ನಿರ್ಮಾಪಕರು 3- 4 ಲಕ್ಷ ರೂಪಾಯಿಗಳನ್ನು ಗಳಿಸುತ್ತಾರೆ ಎನ್ನಲಾಗಿದ್ದು, ಅವರು ಗಳಿಸುವ ಲಾಭಕ್ಕೆ ಹೋಲಿಕೆ ಮಾಡಿದಾಗ ಅದರಲ್ಲಿ ನಟಿಸುವ ನಟಿಯರಿಗೆ ನೀಡುವ ಹಣ ಕೇವಲ 10ರಿಂದ 20 ಸಾವಿರ ರೂಪಾಯಿಗಳಾಗಿರುತ್ತವೆ.