Articles

ವಿಶ್ವದ ಅತಿ ಎತ್ತರದ ಕಟ್ಟಡ Burj Khalifa ದ ಮೇಲೆ ನಿಂತಿರುವ ಯುವತಿ; ಎದೆ ಡವಡವ ಎನಿಸುವ Video

ಜಗತ್ತಿನ ಅತಿ ಎತ್ತರದ ಕಟ್ಟಡ ಬುರ್ಜ್ ಖಲೀಫಾದ ಮೇಲೆ ಹೋಗಬೇಕೆಂದು ಅನೇಕರು ಕನಸು ಕಾಣುತ್ತಾರೆ. ಬುರ್ಜ್ ಖಲೀಫಾದ ಎತ್ತರದ ಮೇಲಿಂದ ಕೆಳಗೆ ಕಂಡು ಬರುವ ದೃಶ್ಯ ಅಮೋಘವಾದದ್ದು. ಸ್ವಲ್ಪೇ ಎತ್ತರದ ಮೇಲೆ ಹೋಗಿ ಕೆಳಗೆ ನೋಡಿದಾಗ ಎದೆ ಡವಡವ ಎಂದು ಬಡಿದುಕೊಳ್ಳುವುದು. ಇನ್ನು ಬುರ್ಜ್ ಖಲೀಫಾದ ಮೇಲಿನಿಂದ ಕೆಳಗೆ ನೋಡಿದಾಗ ಯಾವ ರೀತಿಯ ಅನುಭವ ಆಗುವುದು ಬರೀ ವಿಚಾರ ಮಾಡಿದರೆ ಸಾಕು ತಲೆ ಸುತ್ತಿ ಬರುತ್ತದೆ. ಈ ಬುರ್ಜ್ ಖಲೀಫಾದ ಎಲ್ಲಕ್ಕೂ ಎತ್ತರದ ಪಾಯಿಂಟ್ ಮೇಲೆ ನಿಂತ ಒಬ್ಬಳು ಯುವತಿಯ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ವಿಡಿಯೋದಲ್ಲಿ ಬುರ್ಜ್ ಖಲೀಫಾದ ಕಟ್ಟಡದ ಮೇಲೆ ಒಬ್ಬಳು ಯುವತಿ ಕೈಯಲ್ಲಿ ಬೋರ್ಡ್ ಗಳನ್ನು ಹಿಡಿದು ಜಾಹೀರಾತು ಮಾಡುತ್ತಿರುವುದು ಕಂಡುಬರುತ್ತದೆ. ಇದು ಯುಎಇ ನಲ್ಲಿಯ ಏರ್ಲೈನ್ಸ್ ಕಂಪನಿ ಎಮಿರೇಟ್ಸ್ ಏರ್ಲೈನ್ಸ್ ನ ಜಾಹಿರಾತು ಇದೆ. ಸೋಶಿಯಲ್ ಮೀಡಿಯಾದಲ್ಲಿ ಸದ್ಯ ತುಂಬಾ ಚರ್ಚೆ ನಡೆದಿದೆ.

ವಿಡಿಯೋ ನೋಡಿ

ವಿಡಿಯೋದಲ್ಲಿ ಮೊದಲು ವಿವಿಧ ಪ್ರಕಾರದ ಬೋರ್ಡುಗಳ ಮೇಲೆ ಮೆಸೇಜ್ ಗಳನ್ನು ಕಾಣಬಹುದು. ಆಮೇಲೆ ಕ್ಯಾಮೆರಾ ಝೂಮ್ ಔಟ್ ಮಾಡಿದನಂತರ ಗೊತ್ತಾಗುತ್ತದೆ ಜಗತ್ತಿನ ಅತೀ ಎತ್ತರದ ಕಟ್ಟಡ ಬುರ್ಜ್ ಖಲೀಫಾದ ಮೇಲೆ ಯುವತಿ ನಿಂತದ್ದು. ಈ ಯುವತಿಯು ಅಲ್ಲಿ ನಿಂತು ಎಮಿರೇಟ್ಸ್ ಫ್ಲೈಟ್ ನ ಮೂವತ್ತು ಸೆಕೆಂಡುಗಳ ಜಾಹೀರಾತು ಮಾಡುವುದನ್ನು ನೋಡಬಹುದು.

Leave a Comment

Your email address will not be published. Required fields are marked *