Articles

ರಾತ್ರಿ ವೇಳೆ ಮನೆಯಲ್ಲಿ ಕೇಳುತ್ತಿತ್ತು ವಿಚಿತ್ರ ಶಬ್ದ, ಹೆಂಡತಿ ಕಣ್ಮರೆ: CCTV ನೋಡಿದ ಗಂಡನಿಗೆ ಕಾದಿತ್ತು ಆಘಾತ!

ಮದುವೆಯ ನಂತರ ಮಹಿಳೆಯು ನೆರೆಮನೆಯ ಯುವಕನ ಕಡೆಗೆ ಆಕರ್ಷಿತಳಾದಳು. ಪತಿಗೆ ಕತ್ತಲಲ್ಲಿಟ್ಟು ತಾನು ಮಾತ್ರ ಅನೇಕ ಸಲ ರಾತ್ರಿ ನೆರಮನೆಯ ಯುವಕನಿಗೆ ಭೇಟಿಯಾಗಲು ಹೋಗುತ್ತಿದ್ದಳು. ಒಂದು ಬಾರಿ ಆಕೆಯ ಪತಿ ಸಿಸಿಟಿವಿ ಫುಟೇಜ್ ಗಳನ್ನು ನೋಡಿದಾಗ ವಿಷಯ ಎಲ್ಲವೂ ಗೊತ್ತಾಗಿ ಆತನಿಗೆ ಶಾಕ್ ಆಯ್ತು. ನಾನೆಂದು ನಿನಗೆ ಕ್ಷಮಿಸುವುದಿಲ್ಲ ಎಂದು ಗಂಡ ಸ್ಪಷ್ಟವಾಗಿ ಪತ್ನಿಗೆ ಹೇಳಿದನು. ಅದಕ್ಕೆ ಪತ್ನಿ ನೀಡಿದ ಮರು ಉತ್ತರ ಕೇಳಿ ಪತಿ ಸುಮ್ಮನೆ ಕುಳಿತನು.

ದ ಸನ್ ನೀಡಿದ ರಿಪೋರ್ಟ್ ಪ್ರಕಾರ, ಪತ್ನಿಯು ಮೋಸ ಮಾಡಿದ ಕಾರಣದಿಂದಾಗಿ ಈಗ ಪತಿ ಡಿಪ್ರೆಶನ್ ನಲ್ಲಿದ್ದಾನೆ. ತನ್ನ ಪ್ರೀತಿಯ ಪತ್ನಿಯು ತನ್ನ ಜೊತೆಗೆ ಈ ರೀತಿ ಮೋಸ ಮಾಡುತ್ತಾಳೆ ಎಂದು ಆತ ಕನಸಿನಲ್ಲಿಯೂ ಯೋಚಿಸಿರಲಿಲ್ಲ. ಅದರಲ್ಲಿಯೂ ನೆರೆಮನೆಯ ಯುವಕ ಈತನ ಒಳ್ಳೆಯ ಮಿತ್ರ ಹಾಗೂ ವಿವಾಹಿತ ಪುರುಷನಾಗಿದ್ದ. ಒಂದು ರಾತ್ರಿ ಸಿಸಿಟಿವಿಯಲ್ಲಿಯ ಫುಟೇಜ್ ಗಳನ್ನು ಚೆಕ್ ಮಾಡಿದ ನಂತರ ಈ ಎಲ್ಲ ಘಟನೆಯ ಬಗ್ಗೆ ತಿಳಿದುಬಂತು.

ಒಮ್ಮೆ ರಾತ್ರಿ ಮಲಗಿದಾಗ ಪತಿಗೆ ಏನೋ ವಿಚಿತ್ರ ಶಬ್ದ ಕೇಳಿಬಂತು. ಆತ ಹೆದರಿ ಮನೆಯಲ್ಲಿ ಕಳ್ಳರೇನಾದರೂ ಸೇರಿದ್ದಾರೆಯೇ ಎಂಬ ಸಂಶಯದಿಂದ ಸಿಸಿಟಿವಿ ತಪಾಸಣೆ ಮಾಡಿದ. ಅದರಲ್ಲಿಯ ದೃಶ್ಯ ನೋಡಿದ ನಂತರ ಆತನಿಗೆ ದೊಡ್ಡ ಶಾಕ್ ಕಾದಿತ್ತು. ತನ್ನ ಪತ್ನಿ ನೆರೆಮನೆಯ ಯುವಕನಿಗೆ ಕಿಸ್ ಕೊಡುತ್ತಿರುವುದು ಸಿಸಿಟಿವಿಯಲ್ಲಿ ಕಂಡುಬಂತು. ಆತ ಇದರ ಬಗ್ಗೆ ತನ್ನ ಪತ್ನಿಗೆ ಕೇಳಿದನು ಮತ್ತು ಪತ್ನಿ ತನ್ನ ಕ್ಷಮೆ ಕೇಳುವಳು ಎಂಬ ನಿರೀಕ್ಷೆ ಇಟ್ಟಿದ್ದನು. ಆದರೆ ಹೆಂಡತಿ ನನಗೆ ನೆರೆಮನೆಯ ಯುವಕನ ಜೊತೆಗೆ ಪ್ರೀತಿ ಅಂಕುರಿಸಿದೆ. ನನಗೆ ನಿನ್ನ ಜೊತೆಗೆ ಇರಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ನುಡಿದಳು.

ಕಳೆದ ಅನೇಕ ತಿಂಗಳುಗಳಿಂದ ನಾನು ಆತನ ಜೊತೆಗೆ ಸಮಯ ಕಳೆಯುತ್ತಿದ್ದೇನೆ ಎಂದು ಪತ್ನಿಯು ತನ್ನ ಗಂಡನಿಗೆ ಹೇಳಿದಳು. ನೆರೆಮನೆಯ ಯುವಕನ ಜೊತೆ ಅಫೇರ್ ಮಾಡಿದ್ದಕ್ಕಾಗಿ ಆಕೆಯು ತನ್ನ ಗಂಡನೇ ಕಾರಣ ಎಂದು ಹೇಳುತ್ತಾಳೆ. ಮದುವೆಯ ನಂತರ ನೀನು ಬದಲಾಗಿರುವಿ, ಮೊದಲಿನ ಹಾಗೆ ನೀನು ನನ್ನನ್ನು ಪ್ರೀತಿಸುತ್ತಿಲ್ಲ ಹಾಗೂ ಕಾಳಜಿ ಮಾಡುತ್ತಿಲ್ಲ. ಆದ್ದರಿಂದ ನಾನು ನೆರಮನೆಯ ಯುವಕನನ್ನು ಪ್ರೀತಿಸತೊಡಗಿದೆ. ಎಂದು ಹೇಳುತ್ತಾ ತನ್ನ ಗಂಡನನ್ನು ದೂಷಿಸಿದಳು.

Leave a Comment

Your email address will not be published. Required fields are marked *