ಇದನ್ನು ಓದಿದ ನಂತರ ಇನ್ನು ಮುಂದೆ ನೀವು ‘ಬಳಸಿದ ಟೀ ಪುಡಿಯನ್ನು’ ತಪ್ಪಿಯೂ ಚೆಲ್ಲುವುದಿಲ್ಲ!
ಚಹಾ ಇದು ಭಾರತದಲ್ಲಿ ಎಲ್ಲರಿಗೂ ಪ್ರಿಯವಾದ ಮತ್ತು ತುಂಬಾ ಮುಖ್ಯವಾದ ಪೇಯವಾಗಿದೆ. ತಮಾಷೆಗಾಗಿ ಹೇಳಬೇಕಾದರೆ ಚಹಾ ಇದು ನಮ್ಮ ದೇಶದ ಎನರ್ಜಿ ಡ್ರಿಂಕ್ ಗಳಲ್ಲಿ ಬಹುಶಃ 1 ನಂಬರ್ ಆಗಿದೆ. ಈ ಚಹಾದ ಬಗ್ಗೆ ಇಂದು ಒಂದಲ್ಲ ಅನೇಕ ಲಾಭದ ವಿಷಯಗಳನ್ನು ಈ ಲೇಖನದಲ್ಲಿ ಹೇಳಲಿದ್ದೇವೆ.
ಸರಾಸರಿ ವಿಚಾರ ಮಾಡಲಾಗಿ ಎಲ್ಲರ ಮನೆಯಲ್ಲಿ ಚಹಾ ಕುಡಿದೇ ಕುಡಿಯುತ್ತಾರೆ. ಚಹಾ ತಯಾರಿಸಿದ ನಂತರ ಅದನ್ನು ಸೋಸಿದ ಮೇಲೆ ಜರಡಿಯಲ್ಲಿ ಉಳಿದ ಉಪಯೋಗಿಸಿದ ಚಹಾದ ಪುಡಿಯನ್ನು ನಾವು ಯಾವುದೇ ವಿಚಾರ ಮಾಡದೆ ಕಸದ ಬುಟ್ಟಿಗೆ ಹಾಕಿ ಬಿಡುತ್ತೇವೆ. ಆದರೆ ಆ ಜರಡಿಯಲ್ಲಿ ಉಪಯೋಗಿಸಿದ ಚಹಾಪುಡಿ ನಮ್ಮ ಅನೇಕ ಕೆಲಸಗಳಿಗೆ ಉಪಯೋಗವಾಗುತ್ತದೆ ಎಂಬುದು ಬಹಳ ಜನರಿಗೆ ಗೊತ್ತಿಲ್ಲ. ಇಂಥ ಉಪಯೋಗಿಸಿದ ಚಹಾದ ಪುಡಿಯ ಪುನರ್ ಉಪಯೋಗ ಹೇಗೆ ಮಾಡಲಾಗುತ್ತದೆ ಎಂಬುದನ್ನು ಈ ಲೇಖನದಲ್ಲಿ ತಿಳಿದುಕೊಳ್ಳುವ.
ಇದನ್ನು ಉಪಯೋಗ ಮಾಡುವ ಮೊದಲು ಮಾಡಿಕೊಳ್ಳುವ ಮಹತ್ವದ ಕೆಲಸವೇನೆಂದರೆ ಅದನ್ನು ಸ್ವಚ್ಛಗೊಳಿಸಿ ಕೊಳ್ಳುವುದು. ಸ್ವಚ್ಛಗೊಳಿಸುವುದು ಎಂದರೆ ಅದರಲ್ಲಿಯ ಸಕ್ಕರೆಯಂಶವನ್ನು ಸಂಪೂರ್ಣವಾಗಿ ತೆಗೆಯಬೇಕು. ಆನಂತರ ಅದನ್ನು ಬೇರೆ ಕೆಲಸಗಳಿಗೆ ಉಪಯೋಗಿಸಲು ಬರುವುದು.
ಈ ಚಹ ಪುಡಿಯ ಮೊದಲ ಉಪಯೋಗ ಗೊಬ್ಬರದ ಹಾಗೆ ಮಾಡಲು ಬರುತ್ತದೆ. ಚಹಾ ಸೋಸಿದ ನಂತರ ಜರಡಿಯಲ್ಲಿ ಉಳಿದ ಚಹ ಪುಡಿಯನ್ನು ಮನೆಯಲ್ಲಿರುವ ವಿವಿಧ ಹೂಕುಂಡಗಳಲ್ಲಿ ಮತ್ತು ಬೇರೆ-ಬೇರೆ ಪ್ರಕಾರದ ಗಿಡಗಳ ಕುಂಡಗಳಲ್ಲಿ ಹಾಕಬಹುದು. ಆ ಚಹಾಪುಡಿ ಅಲ್ಲಿ ಒಳ್ಳೆಯ ಗೊಬ್ಬರದಂತೆ ಕೆಲಸ ಮಾಡುತ್ತದೆ. ಚಹಾ ಪುಡಿಯಲ್ಲಿ ಎಂಟಿ ಆಕ್ಸಿಡೆಂಟ್ ಔಷಧೀಯ ಗುಣ ಇರುವುದರಿಂದ ಗಿಡಗಳ ಆರೋಗ್ಯದಲ್ಲಿ ಸುಧಾರಣೆಯಾಗುತ್ತದೆ.

ಇದರ ಎರಡನೆಯ ಲಾಭ ಏನೆಂದರೆ, ಈ ಪುಡಿಯಲ್ಲಿ ಸ್ವಲ್ಪ ವಿಮ್ ಬೆರೆಸಿ ಕ್ರೋಕೆರಿ ಗಳನ್ನು ತೊಳೆದಾಗ ಅವು ತುಂಬಾ ಫಳಫಳ ಮಿನುಗುವವು. ಇದರ ಉಪಯೋಗ ಪಾತ್ರೆಗಳನ್ನು ತೊಳೆಯಲು ಸಹಿತ ಮಾಡಬಹುದು. ಇದರಿಂದ ಪಾತ್ರೆಗಳು ಮಿನುಗುವವು.
ಇದರ ಇನ್ನೊಂದು ಉಪಯೋಗವೆಂದರೆ ಹಲ್ಲು ನೋವಾದಾಗ ಉಗುರು ಬೆಚ್ಚಗಿನ ನೀರಲ್ಲಿ ಸ್ವಲ್ಪ ಇದೇ ಪುಡಿಯನ್ನು ಹಾಕಿ ಬಾಯಿ ಮುಕ್ಕಳಿಸುವುದರಿಂದ ಹಲ್ಲುಬೇನೆ ಕಡಿಮೆಯಾಗಲು ಸಹಾಯವಾಗುತ್ತದೆ.
ಇದರ ಮಹತ್ವದ ಉಪಯೋಗವೇನೆಂದರೆ ನಮ್ಮ ಇದು ಕೂದಲುಗಳಿಗೆ ನೈಸರ್ಗಿಕವಾದ ಕಂಡೀಷನರ್ ಹಾಗೆ ಕೆಲಸ ಮಾಡುತ್ತದೆ. ಈ ಉಪಯೋಗಿಸಿದ ಚಹಾದ ಪುಡಿಯನ್ನು ನೀರಿನಲ್ಲಿ ಚೆನ್ನಾಗಿ ಕುದಿಸಿದ ನಂತರ ಅದೇ ನೀರು ತಣ್ಣಗಾದ ಮೇಲೆ ಅದರಿಂದ ತಲೆಗೂದಲನ್ನು ತೊಳೆದುಕೊಳ್ಳುವುದರಿಂದ ಕೂದಲು ಸಾಫ್ಟ್ ಮತ್ತು ಸಿಲ್ಕಿ ಆಗುತ್ತವೆ.
ಈ ಚಹಾದ ಪುಡಿಯಲ್ಲಿ ಎಂಟಿ ಆಕ್ಸಿಡೆಂಟ್ ತತ್ವ ಇರುವುದರಿಂದ ಗಾಯವನ್ನು ಇದರಿಂದ ತೊಳೆಯಲು ಗಾಯ ಬೇಗನೆ ತುಂಬಿ ಬರುವುದು.
ಈ ಚಹಾ ಪುಡಿಯ ಇನ್ನೊಂದು ಉಪಯೋಗ ಮನೆಯಲ್ಲಿ ಹೆಚ್ಚಾಗಿದ್ದರೆ ಅವುಗಳನ್ನು ಕಡಿಮೆ ಮಾಡಲು ಉಪಯೋಗವಾಗುತ್ತದೆ. ಹೇಗೆಂದರೆ ಈ ರೀತಿಯ ಚಹಾ ಪುಡಿಯನ್ನು ಬಾದಲಿಯಲ್ಲಿ ಹಾಕಿ ಫ್ಲೋರ್ ಒರೆಸುವುದರಿಂದ ನೊಣಗಳು ದೂರಾಗುವವು.
ದಪ್ಪಾದ ಕಡಲೆಯ ಅಂದರೆ ಕಾಬೂಲಿ ಕಡಲೆಯ ಪಲ್ಲೆಯನ್ನು ಮಾಡುವಾಗ ಈ ಚಹಾ ಪುಡಿಯನ್ನು ಬಟ್ಟೆಯಲ್ಲಿ ಸುತ್ತಿ ಕಡಲೆ ಜೊತೆಗೆ ಕುದಿಸಲು ಬಿಟ್ಟು ಆನಂತರ ಪಲ್ಯ ಮಾಡಿದಾಗ ಒಳ್ಳೆಯ ಸ್ವಾದ ಲಭಿಸುವುದು.
ಈಗ ಹೇಳಿ ಫ್ರೆಂಡ್ಸ್ ಉಪಯೋಗಿಸಿದ ಚಹಾದ ಪುಡಿಯ ಇಷ್ಟೊಂದು ಉಪಯೋಗಗಳು ಇರುವಾಗ ಚಹಾ ಕುಡಿದ ನಂತರ ಅದನ್ನು ಇನ್ನಿತರ ಕೆಲಸಗಳಿಗೆ ಉಪಯೋಗಿಸದೆ ಹಾಗೆ ಬಿಸಾಕುವುದು ಸರಿಯಲ್ಲ ಅಲ್ವಾ?