Articles

NZ vs SA : ವಿಲ್ ಯಂಗ್ ಹಿಡಿದರು ಕ್ರಿಕೆಟ್ ರಸಿಕರು ಅಚ್ಚರಿಪಡುವಂತಹ ಅದ್ಭುತವಾದ ಕ್ಯಾಚ್! ಕ್ಯಾಚ್ ನೋಡಿದ ನಂತರ ನಿಮ್ಮ ಬಾಯಿಂದ ತಾನಾಗಿಯೇ ಬರುತ್ತದೆ, ಸೂಪರ್! ನೋಡಿ ಸೂಪರ್ ವಿಡಿಯೋ…

ಕ್ರೈಸ್ಟ್ ಚರ್ಚ್ ನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನ್ಯೂಜಿಲ್ಯಾಂಡ್ ತಂಡದ ಸ್ಥಿತಿ ದಯನೀಯವಾಗಿದೆ. ದಕ್ಷಿಣ ಆಫ್ರಿಕಾ ತಂಡವು ಈಗಾಗಲೇ ಈ ಟೆಸ್ಟ್ ಪಂದ್ಯದ ಮೇಲೆ ತನ್ನ ಹಿಡಿತವನ್ನು ಸಾಧಿಸಿದೆ. ಆದರೆ ಈ ಟೆಸ್ಟ್ ಪಂದ್ಯದ ನಾಲ್ಕನೆಯ ದಿನ ವಿಲ್ ಯಂಗ್ ಅವರದೇ ಚರ್ಚೆ ಜೋರಾಗಿತ್ತು. ಇವರು ಅದ್ಭುತವಾದ ಫೀಲ್ಡಿಂಗ್ ಪ್ರದರ್ಶನ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ಅವರು ಹಿಡಿದ ಒಂದು ಅದ್ಭುತವಾದ ಕ್ಯಾಚ್ ಚರ್ಚೆಗೆ ಕಾರಣವಾಗಿದೆ. ಸ್ಟೇಡಿಯಂನಲ್ಲಿ ಕುಳಿತು ವೀಕ್ಷಿಸುತ್ತಿದ್ದ ರಸಿಕರಿಗೂ ಆಶ್ಚರ್ಯವನ್ನುಂಟು ಮಾಡಿದೆ ಅವರ ಈ ಕ್ಯಾಚ್. ಈ ರೀತಿಯ ಕ್ಯಾಚ್ ಅದ್ಹೇಗೆ ಹಿಡಿಯಲು ಸಾಧ್ಯವೆಂದು ಕಾಮೆಂಟೇಟರ್ ವಿವರಣೆ ನೀಡುತ್ತಿದ್ದರು. ವಿಲ್ ಯಂಗ್ ಅವರು ದಕ್ಷಿಣ ಆಫ್ರಿಕಾದ ಮಾರ್ಕೊ ಜಾನ್ಸನ್ ಅವರ ಅಸಾಧ್ಯ ಕ್ಯಾಚ್ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಡೀನ್ ಗ್ರಾಂಡ್ ಹೋಮ್ ಅವರ ಬೌಲಿಂಗ್ ನಲ್ಲಿ ಜಾನ್ಸನ್ ಅವರು ಒಳ್ಳೆಯ ಶಾಟ್ ಏನೋ ಹೊಡೆದಿದ್ದರು. ಆದರೆ ಬೌಂಡರಿ ಲೈನ್ ನಲ್ಲಿ ನಿಂತು ಫೀಲ್ಡ್ ಮಾಡುತ್ತಿದ್ದ ವಿಲ್ ಯಂಗ್ ಅವರು ಅಸಾಧ್ಯ ಕ್ಯಾಚ್ ನ್ನು ಹಿಡಿದು ತೋರಿಸಿದ್ದಾರೆ.

ನೋಡಿ ಈ ಕ್ಯಾಚ್…

ಮಾರ್ಕೊ ಜಾನ್ಸನ್ ಲಾಂಗ್ಆನ್ ಮತ್ತು ಮಿಡ್ ವಿಕೆಟ್ ಮಧ್ಯದಲ್ಲಿ ಒಂದು ಜೋರಾದ ಶಾಟ್ ಹೊಡೆದಿದ್ದರು. ಆಗ ವಿಲ್ ಯಂಗ್ ಕ್ಯಾಚ್ ಹಿಡಿಯುವ ಸಲುವಾಗಿ ಆ ದಿಕ್ಕಿನಲ್ಲಿ ಓಡಿ ಹಿಡಿಯಲು ಅಸಾಧ್ಯವಾದ ಕ್ಯಾಚ್ ಬರೀ ಒಂದೇ ಎಡಗೈಯಲ್ಲಿ ಹಿಡಿದಿದ್ದಾರೆ. ವಿಲ್ ಯಂಗ್ ಹಿಡಿದ ಈ ಕ್ಯಾಚ್ ನೋಡಿ ನ್ಯೂಜಿಲೆಂಡ್ ನ ಬೇರೆ ಆಟಗಾರರು ಸಹ ಆಶ್ಚರ್ಯ ವ್ಯಕ್ತ ಮಾಡಿದ್ದಾರೆ.

ಕ್ವಿಂಟನ್ ಡಿಕಾಕ್ ಅವರು ಕ್ರಿಕೆಟ್ ನಿಂದ ಆಕಸ್ಮಿಕವಾಗಿ ನಿವೃತ್ತಿ ಘೋಷಿಸಿದ ನಂತರ ಕಾಯಿಲ ವೇರೇನ ಅವರು ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದಾರೆ. ಅವರದೇ ಶತಕದ ಸಹಾಯದಿಂದ ದಕ್ಷಿಣ ಆಫ್ರಿಕಾ ತಂಡವು ನ್ಯೂಜಿಲೆಂಡ್ ವಿರುದ್ಧ ಎರಡನೇ ಟೆಸ್ಟ್ ಪಂದ್ಯ ದಿನ ಆಟದ ಮೇಲೆ ತನ್ನ ಪ್ರಭುತ್ವವನ್ನು ಸ್ಥಾಪಿಸಿದೆ. ವೇರೆನ್ ಅವರು ಔಟಾಗದೆ ಬಾರಿಸಿದ 136 ರನ್ಗಳ ಸಹಾಯದಿಂದ ದಕ್ಷಿಣ ಆಫ್ರಿಕಾ ತಂಡವು ಟೀ ಟೈಮ್ ಗಿಂತ ಮೊದಲೇ ತಮ್ಮ ಎರಡನೆಯ ಇನ್ನಿಂಗ್ಸ್ 354 ರನ್ಗಳಿಗೆ ಘೋಷಿಸಿತು. ಈಗ ನ್ಯೂಜಿಲೆಂಡ್ ತಂಡಕ್ಕೆ ಈ ಪಂದ್ಯವನ್ನು ಗೆಲ್ಲಲು 425 ರನ್ ಗಳ ಗುರಿ ಮುಟ್ಟಬೇಕಾಗಿದೆ.

Leave a Comment

Your email address will not be published. Required fields are marked *