ಇದುವರೆಗೆ ಬಂಗಾರ, ಬೆಳ್ಳಿ ಮತ್ತು ಹಣವನ್ನು ಕಳುವು ಮಾಡುವದನ್ನು ನೋಡಿದ್ದೇವೆ, ಆದರೆ ಇವರು ಕಳುವು ಮಾಡಿಕೊಂಡು ಹೋಗಿದ್ದೇನು ನೋಡಿ!!!
ಸೋಶಿಯಲ್ ಮೀಡಿಯಾದಲ್ಲಿ ಈ ವರೆಗೆ CCTV ಫೂಟೇಜ್ ನಲ್ಲಿಯ ಮತ್ತು ಕ್ಯಾಮೆರಾದಲ್ಲಿ ಸೆರೆಯಾದ ಅನೇಕ ಕಳ್ಳತನಗಳನ್ನು ನೋಡಿರಬಹುದು. ಈ ಎಲ್ಲ ಕಳ್ಳತನಗಳನ್ನು ಮೀರಿಸುವ ತುಂಬಾ ಯೂನಿಕ್ ಕಳ್ಳತನ ಒಂದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಕಳ್ಳತನ ಮಾಡುವಾಗ ಜೀವಕ್ಕೆ ಎಳ್ಳಷ್ಟೂ ಮಹತ್ವವನ್ನೇ ನೀಡಿಲ್ಲ ಎಂಬುದು ತಿಳಿದುಬರುತ್ತದೆ.
ಕಳ್ಳತನ ಇದು ಒಂದು ಸಾಮಾಜಿಕ ಅಪರಾಧ. ಕಳ್ಳತನ ಮಾಡುವಾಗ ಸಿಕ್ಕರೆ ಫೈನ್ ಜೊತೆಗೆ ಜೈಲುವಾಸವೂ ಆಗುತ್ತದೆ. ಆದರೂ ಸಹ ಕಳ್ಳರು ಕಳ್ಳತನ ಮಾಡುವುದನ್ನು ಬಿಡುವುದಿಲ್ಲ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಕಳ್ಳತನದ ತುಂಬಾ ವಿಚಿತ್ರವಾದ ದೃಶ್ಯ ಓಡಾಡುತ್ತಿದೆ. ಈ ದೃಶ್ಯದಲ್ಲಿ ಕಳ್ಳತನ ಮಾಡುವವರ ಸ್ಟೈಲ್ ನೋಡಿದಾಗ ದೇಹ ಭಯದಿಂದ ಕಂಪಿಸುವುದು. ಜೀವಕ್ಕೆ ಇಲ್ಲಿ ಬೆಲೆಯೇ ಇಲ್ಲ, ಬರೀ ಕಳ್ಳತನ ಮಾಡುವುದೊಂದೇ ಆದ್ಯ ಕರ್ತವ್ಯ ಅಥವಾ ಗುರಿ ಎಂಬಂತಾಗಿದೆ. ಇದನ್ನು ಮಾಡುವಾಗ ಅಲ್ಲಿ ಜೀವ ಹೋದರೂ ಯಾರಿಗೂ ಪರವಾಗಿಲ್ಲ.
ಈ ವೈರಲ್ ಆಗುತ್ತಿರುವ ವೀಡಿಯೋದಲ್ಲಿ ನೀವು ನೋಡಬಹುದು, ಒಂದು ಹಸು ತನ್ನಷ್ಟಕ್ಕೆ ತಾನು ರಸ್ತೆಯ ಬದಿಯಲ್ಲಿ ನಿಂತುಕೊಂಡು ಏನೋ ತಿನ್ನುತ್ತಿರುತ್ತದೆ, ಆಗ ಬದಿಯಲ್ಲಿ ಯಾರೂ ಇರಲಿಲ್ಲ. ಅದೇ ಸಮಯಕ್ಕೆ ಸರಿಯಾಗಿ ಒಂದು ಕಾರು ಬಂದು ಆ ಹಸು ಮೆಯುತ್ತಿರುವ ಜಾಗದಲ್ಲಿಯೇ ನಿಲ್ಲುತ್ತೆ, ಹಸು ಸಹ ಆಶ್ಚರ್ಯಗೊಂಡು ಕಾರಿನತ್ತ ನೋಡುತ್ತೆ ಆಗ ಕಾರಿನೊಳಗಿಂದ ಒಬ್ಬ ವ್ಯಕ್ತಿ ಹೊರಗೆ ಬರುತ್ತಾನೆ. ಹೊರಗಡೆ ಬಂದು ಹಸುವನ್ನು ತನ್ನೆಡೆಗೆ ಕರೆದು ಅದಕ್ಕೆ ತಿನ್ನಲು ಹಾಕುತ್ತಾನೆ. ಹಸು ಸಹ ತಲೆ ಕೆಳಗೆ ಮಾಡಿ ತಿನ್ನಲು ಹೋಗುತ್ತದೆ.
ಇದನ್ನು ಕಂಡು ಆ ವ್ಯಕ್ತಿ ಕಾರಿನ ಬಾಗಿಲನ್ನು ತಗೆದು ಅದರ ಸಮೀಪದಲ್ಲಿ ಹಸುವಿಗೆ ಆಹಾರ ನೆಲದ ಮೇಲೆ ಬಿಸಡುತ್ತಾನೆ. ಆಗ ಹಸು ಸಹ ಸ್ವಲ್ಪ ಮುಂದೆ ಹೊಗಿ ಆಹಾರ ತಿನ್ನಲು ಪ್ರಯತ್ನ ಮಾಡುತ್ತದೆ. ಅದೇ ಸಮಯಕ್ಕೆ ಆ ವ್ಯಕ್ತಿ ಹಿಂದಿನಿಂದ ಬಂದು ಹಸುವಿಗೆ ಕಾರಿನ ಒಳಗಡೆ ಹಾಕಲು ಪ್ರಯತ್ನ ಮಾಡುತ್ತಾನೆ. ಚಿಕ್ಕ ಕಾರಲ್ಲಿ ಮನುಷ್ಯರೇ ಹೋಗಲು ಎಷ್ಟೋ ಸಮಸ್ಯೆ ಆಗುತ್ತದೆ ಅಂತಹದರಲ್ಲಿ ಒಂದು ದೊಡ್ಡ ಹಸುವನ್ನು ಒಳಗಡೆ ಹಾಕುವದು ಅಷ್ಟೊಂದು ಸುಲಭವಾದ ಕಾರ್ಯವಲ್ಲ. ಆದರೂ ಸಹ ಈ ವ್ಯಕ್ತಿ ತನ್ನ ಎಲ್ಲ ಶಕ್ತಿಯನ್ನು ಉಪಯೋಗಿಸಿ ಕೊನೆಗೆ ಹಸುವನ್ನು ಕಾರಿನ ಮಧ್ಯದ ಸೀಟಿನ ಮೇಲೆ ನಿಲ್ಲಿಸುತ್ತಾನೆ. ಆದರೆ ಹಸು ಒಳಗಡೆ ಹೋದ ನಂತರ ಕಾರಿನ ಬಾಗಿಲು ಬಹಳಷ್ಟು ಸಮಯದ ವರೆಗೆ ಮುಚ್ಚುವದಿಲ್ಲ. ಕೊನೆಗೆ ಈ ವ್ಯಕ್ತಿ ಜೋರಾಗಿ ಒತ್ತಿ ಬಾಗಿಲನ್ನು ಕೂಡಿಸಿ ಅಲ್ಲಿಂದ ಹಸುವನ್ನು ಕದ್ದುಕೊಂಡು ಪರಾರಿಯಾಗುತ್ತಾರೆ. ಇಂತಹ ವಿಚಿತ್ರ ವಿಡಿಯೋ ಕಂಡು ನೆಟ್ಟಿಗರು ಸಹ ಆಶ್ಚರ್ಯ ಪಡುತ್ತಿದ್ದಾರೆ.
ವೀಡಿಯೋ ನೋಡಿ.
View this post on Instagram
ಈ ವಿಚಿತ್ರ ಕಳ್ಳತನದ ವಿಡಿಯೋ ಸೋಶಿಯಲ್ ಮಿಡಿಯಾದ ಸೈಟ್ ಆದ ಇನ್ಸ್ಟಾಗ್ರಾಮ್ ನಲ್ಲಿ kenil2813 and wild.taugh ಎಂಬ ಹೆಸರಿನ ಖಾತೆಯ ಮೂಲಕ ಶೇರ್ ಮಾಡಲಾಗಿದೆ. ಇದುವರೆಗೆ ಈ ವಿಡಿಯೋವನ್ನು ಸುಮಾರು ಒಂದು ಮಿಲಿಯನ್ ಗಿಂತಲೂ ಹೆಚ್ಚು ಜನರು ವೀಕ್ಷಣೆ ಮಾಡಿದ್ದಾರೆ ಮತ್ತು ಸುಮಾರು ಮೂರು ಸಾವಿರಕ್ಕೂ ಹೆಚ್ಚು ಜನರು ಲೈಕ್ಸ್ ಮಾಡಿದ್ದಾರೆ.