Articles

ಈ ವಿಡಿಯೋ ನೋಡಿಲ್ಲ ಅಂದ್ರೆ, ನೀವು ಏನೂ ನೋಡಿಲ್ಲ ಅಂತಲೇ ಅರ್ಥ! 4.3 ಮಿಲಿಯನ್ ಲೈಕ್ಸ್ ಗಳ ಸುರಿಮಳೆಯೇ ಹೇಳುತ್ತಿದೆ…ಇದು ಸೂಪರ್ ವೈರಲ್ ವಿಡಿಯೋ ಅಂತ!

 

ಜಗತ್ತಿನಲ್ಲಿ ಶೋಧಿಸಲು ಹೋದರೆ ತುಂಬಾ ವಿಚಿತ್ರ ಪ್ರಕಾರದ ಜನ ನೋಡಲು ಸಿಗುತ್ತಾರೆ. ಅವರಲ್ಲಿ ಇರುವ ಪ್ರತಿಭೆ ಅಸಾಮಾನ್ಯ ಎಂದೇ ತಿಳಿದು ಬರುತ್ತದೆ. ಎಷ್ಟೋ ಪ್ರತಿಭೆಗಳು ತೆರೆಮರೆಯಲ್ಲಿ ಅವಿತು ಕುಳಿತಿರುತ್ತಾರೆ. ಅಂಥವರಲ್ಲಿ ಒಬ್ಬೊಬ್ಬರು ಒಮ್ಮೆಲೆ ಹಠಾತ್ತಾಗಿ ಬೆಳಕಿಗೆ ಬಂದು ಬಿಡುತ್ತಾರೆ. ಅವರಲ್ಲಿ ಇರುವ ಐಡಿಯಾಗಳು ಒಮ್ಮೆಲೆ ಅವರನ್ನು ಎಲ್ಲರ ಮುಂದೆ ಫಕ್ಕನೆ ತರುತ್ತವೆ. ಈ ಡಿಜಿಟಲ್ ಯುಗದಲ್ಲಂತೂ ಕ್ಷಣದಲ್ಲಿಯೇ ಎಲ್ಲ ಕಡೆಗೆ ವೈರಲ್ ಆಗಿ ಬಿಡುತ್ತಾರೆ.

ಈಗ ಇಲ್ಲಿ ಬಿತ್ತರವಾದ ವೈರಲ್ ವಿಡಿಯೋ ನೋಡಿದಾಗ ಹಾಗೆಯೇ ಎನಿಸುತ್ತದೆ. ಯಾಕೆಂದರೆ ಈ ರೀತಿಯ ಐಡಿಯಾಗಳನ್ನು ಹೊಂದಿದ ಇಂಥ ಅಪರೂಪದ ವ್ಯಕ್ತಿಗಳು ಇಲ್ಲಿಯವರೆಗೆ ಎಲ್ಲಿದ್ದರು ಎಂಬ ಪ್ರಶ್ನೆ ಮೂಡುತ್ತದೆ. ವಿಡಿಯೋದಲ್ಲಿ ಕಾಣುವ ಹಾಗೆ ಹಾಯ್ದುಕೊಂಡು ಹೋಗುವ ರಸ್ತೆಯ ಮೇಲೆ ಎಲ್ಲಿ ಬೇಕಾದಲ್ಲಿ ಚರಂಡಿಯ ನೀರು ತುಂಬಿ ನಿಂತು ಬಿಟ್ಟಿದೆ. ಅದಕ್ಕೆ ಈ ಸೈಕಲ್ ಸವಾರ ಒಂದು ಐಡಿಯಾವನ್ನೇ ಶೋಧಿಸಿದ್ದಾನೆ. ಇದೇ ಐಡಿಯಾವನ್ನು ನೀವೀಗ ಈ ವಿಡಿಯೋದಲ್ಲಿ ನೋಡಿರಿ…

ವಿಡಿಯೋ…

 

View this post on Instagram

 

A post shared by Robin yadav (@robinyadav2138)

ವ್ಯಕ್ತಿಯೊಬ್ಬ ಸೈಕಲ್ ಮೇಲೆ ಒಂದು ಗಂಟನ್ನು ತೆಗೆದುಕೊಂಡು ಹೋಗುತ್ತಿದ್ದಾನೆ. ಆ ಕೊಳಚೆಯ ನೀರಲ್ಲಿ ಕಾಲಿಡಲು ಅಥವಾ ಸೈಕಲ್ ಮೇಲೆ ಕುಳಿತು ಸೈಕಲ್ ನಡೆಸುವ ರಿಸ್ಕ್ ತೆಗೆದುಕೊಳ್ಳಲು ಆತನ ಮನಸ್ಸು ಒಪ್ಪಿಲ್ಲ. ಆದಕ್ಕೆ ಆತ ಸೈಕಲ್ ಆಧಾರವನ್ನಾಗಿಸಿಕೊಂಡು ನೇರ ಗೋಡೆಯ ಮೇಲೆಯೇ ಕಾಲುಗಳನ್ನು ಇಡುತ್ತಾ ಸ್ಪೈಡರ್ ಮ್ಯಾನ್ ತರದಲ್ಲಿ ಚಲಿಸುತ್ತ ಮುಂದೆ ಹೋಗುತ್ತಿದ್ದಾನೆ. ಇದನ್ನು ಅಲ್ಲಿ ನಿಂತ ಚಾಲಾಕಿಗಳು ಯಾರೋ ವಿಡಿಯೋ ಮಾಡಿದ್ದು ಬಹುಶಃ ಆತನಿಗೂ ಗೊತ್ತಿಲ್ಲ. ನಂತರ ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಈ ವೀಡಿಯೋವನ್ನು ಇನ್ಸ್ತಾಗ್ರಾಮ್ ನಲ್ಲಿ robinyadav2138 ಹೆಸರಿನಿಂದ ಶೇರ್ ಮಾಡಿದ್ದಾರೆ. ಈ ವಿಡಿಯೋ ನೋಡುಗರಿಗೆ ಸಖತ್ ಇಷ್ಟವಾಗಿದೆ ಆದ್ದರಿಂದಲೇ ಈ ವಿಡಿಯೋಗೆ ಇಲ್ಲಿಯವರೆಗೆ 4.3 ಮಿಲಿಯನ್ ಲೈಕ್ಸ್ ಗಳ ಮಹಾಪೂರವೇ ಹರಿದು ಬಂದಿದೆ.

Leave a Comment

Your email address will not be published. Required fields are marked *