ಇಲ್ಲಿಯವರೆಗೆ ಎಂದೂ ನೋಡಿರದ ಗಂಡ-ಹೆಂಡಿರ ಜಗಳ ಸೋಶಿಯಲ್ ಮೀಡಿಯಾದಲ್ಲಿ ಆಗುತ್ತಿದೆ ವೈರಲ್ ! ವಿಡಿಯೋದ ಕೊನೆಯಲ್ಲಿದೆ ಸೂಪರ್ ಟ್ವಿಸ್ಟ್.

ಗಂಡ-ಹೆಂಡಿರ ಜಗಳ ಹೊಸದೇನಲ್ಲ. ಯಾವಾಗಲಾದರೂ, ಯಾವುದಾದರೂ ಕಾರಣದಿಂದಾಗಿ ಇಬ್ಬರಲ್ಲಿ ವಾದ-ವಿವಾದಗಳು ನಡೆಯುತ್ತಲೇ ಇರುತ್ತವೆ. ಇದೇ ರೀತಿಯ ಒಂದು ಜಗಳ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಕಾರಣ ಈ ವಿಡಿಯೋದ ಕೊನೆಯಲ್ಲಿ ಒಂದು ಸೂಪರ್ ಟ್ವಿಸ್ಟ್ ಅಡಗಿದೆ.

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ಗಂಡ ಹೆಂಡಿರ ಜಗಳ ಹಾಗೆ ನೋಡಲಾಗಿ ಕಾಮನ್ ಆಗಿದೆ. ಅನೇಕ ಕಪಲ್ಸ್ ಗಳಲ್ಲಿ ಯಾವ ಕಾರಣದಿಂದ ಹೆಚ್ಚಾಗಿ ಜಗಳವಾಗುತ್ತದೆ ಅದೇ ಕಾರಣ ಇಲ್ಲಿಯೂ ಕಂಡುಬಂದಿದೆ. ಆದರೆ ಕೊನೆ ಮಾತ್ರ ತುಂಬಾ ಇಂಟರೆಸ್ಟಿಂಗ್ ಆಗಿದೆ. ನಿಜವಾಗಿಯೂ ಈ ರೀತಿಯ ಎಂಡಿಂಗ್ ನೀವು ನೋಡಲು ಸಾಧ್ಯವೇ ಇಲ್ಲ. ಏಕೆಂದರೆ ವಿಡಿಯೋದಲ್ಲಿ ಗಂಡ-ಹೆಂಡತಿ ಯಾವ ಕಾರಣಕ್ಕಾಗಿ ಜಗಳ ಕಾದಿದ್ದಾರೆ ಅದರ ಹಿಂದಿನ ಸ್ವಾರ್ಥತೆ ನಂತರ ತಿಳಿದುಬರುತ್ತದೆ.

ವಿಡಿಯೋದಲ್ಲಿ ಕಂಡುಬರುವ ಹಾಗೆ ಇಬ್ಬರು ಮಹಿಳೆಯರ ಜೊತೆಗೆ ಪುರುಷನೊಬ್ಬ ರೆಸ್ಟೋರೆಂಟ್ ನಲ್ಲಿ ಕುಳಿತಿದ್ದಾನೆ. ಮಹಿಳೆಯರಲ್ಲಿ ಒಬ್ಬಳು ಆತನ ಪತ್ನಿ ಇದ್ದಾಳೆ. ಇನ್ನೊಬ್ಬಳು ಆತನ ಎದುರಿಗೆ ಕುಳಿತಿದ್ದಾಳೆ. ಊಟ ಮಾಡುವಾಗ ವ್ಯಕ್ತಿಯ ಎದುರಿಗೆ ಕುಳಿತವಳ ಬಾಯಿಗೆ ಹತ್ತಿದ ಆಹಾರ ಪದಾರ್ಥವನ್ನು ವ್ಯಕ್ತಿಯು ನಗುತ್ತಾ ಟಿಶ್ಯೂ ಪೇಪರ್ ನಿಂದ ಒರೆಸುತ್ತಾನೆ. ಈ ದೃಶ್ಯ ಆತನ ಬದಿಗೆ ಕುಳಿತ ಹೆಂಡತಿಗೆ ಸ್ವಲ್ಪವೂ ಸರಿಬರುವುದಿಲ್ಲ. ಆಕೆ ಸಿಟ್ಟಿನಿಂದ ಏನನ್ನು ಮಾತನಾಡದೆ ಒಮ್ಮೆಲೆ ಎದ್ದು ಅಲ್ಲಿಂದ ಹೊರಟುಹೋಗುತ್ತಾಳೆ. ತಕ್ಷಣ ಪತಿಯು ಸಹ ತನ್ನ ಪತ್ನಿಯನ್ನು ಮನ್ನಿಸಲು ಆಕೆಯ ಹಿಂದೆ ಹೊರಟು ಹೋಗುತ್ತಾನೆ.

ವಿಡಿಯೋದಲ್ಲಿ ನಿಜವಾದ ಟ್ವಿಸ್ಟ್ ಇಲ್ಲಿದೆ. ಪತಿ-ಪತ್ನಿ ಇಬ್ಬರೂ ಹೊರಗೆ ಬಂದ ನಂತರ ಖುಷಿಯಿಂದ ಒಬ್ಬರಿಗೊಬ್ಬರು ಚಪ್ಪಾಳೆಯನ್ನು ತಟ್ಟಿ ಸಂತೋಷವನ್ನು ವ್ಯಕ್ತ ಮಾಡುತ್ತಾರೆ. ಒಳಗೆ ಕುಳಿತ ಒಂಟಿ ಮಹಿಳೆಗೆ ವೇಟರ್ ಬಿಲ್ ಒಯ್ದು ಕೊಡುತ್ತಾನೆ. ಅದನ್ನು ನೋಡಿದ ಆಕೆಗೆ ಶಾಕ್ ಆಗುತ್ತದೆ, ಮತ್ತು ಬೇರೆ ಯಾವ ಮಾರ್ಗವಿಲ್ಲದೆ ಪಾಪ ಹೋಟೆಲ್ ಬಿಲ್ ಪೇಡ್ ಮಾಡುವ ಸಂಕಷ್ಟ ಆಕೆಯ ಮೇಲೆ ಒದಗಿ ಬರುತ್ತದೆ. ಗಂಡ ಹೆಂಡತಿ ಇಬ್ಬರೂ ಸುಳ್ಳು ಜಗಳಮಾಡಿ ಪ್ರಸ್ತುತ ಮಹಿಳೆಯೇ ಹೋಟೆಲ್ ಬಿಲ್ ಕೊಡವಂತೆ ನಾಟಕವಾಡುತ್ತಾರೆ. ಪಾಪ ಮಹಿಳೆಯೂ ಸಹ ಒಂದೆರಡೆನ್ನದೆ ಹೋಟೆಲ್ ಬಿಲ್ ಪೇಡ್ ಮಾಡುತ್ತಾಳೆ.

ವಿಡಿಯೋ ನೋಡಿ

ಈ ವಿಡಿಯೋವನ್ನು ಐಪಿಎಸ್ ಅಧಿಕಾರಿಯಾಗಿ ರೂಪಿನ ಶರ್ಮ ಅವರು ತಮ್ಮ ಟ್ವಿಟರ್ ಅಕೌಂಟ್ ಮುಖಾಂತರ ಪೋಸ್ಟ್ ಮಾಡಿದ್ದಾರೆ. ಇದಕ್ಕೆ ‘ಮನಿ ಸೇವರ್ ಸ್ಕೀಮ್’ ಎಂದು ತಮಾಷೆಯ ಕ್ಯಾಪ್ಷನ್ ನೀಡಿದ್ದಾರೆ. ವೀಡಿಯೋ ನೋಡಿದ ನೇಟಿಜನ್ಸ್ ಗಳು ತುಂಬಾ ತಮಾಷೆಯ ಕಾಮೆಂಟ್ಗಳನ್ನು ನೀಡುತ್ತಿದ್ದಾರೆ.