ಇಲ್ಲಿ ಎಲ್ಲಕ್ಕೂ ದಪ್ಪವಾಗಿರುವ ವ್ಯಕ್ತಿಯನ್ನು ತಿಳಿಯಲಾಗುತ್ತದೆ ಹೀರೊ, ಎಲ್ಲಕ್ಕೂ ಸುಂದರ ಯುವತಿಯೊಂದಿಗೆ ಮದುವೆ ಮಾಡಿ ಕೊಡಲಾಗುತ್ತದೆ!
ಒಂದೊಂದು ದೇಶದಲ್ಲಿ ಒಂದೊಂದು ಪ್ರಕಾರದ, ರೂಢಿ, ಸಂಸ್ಕೃತಿ, ಪರಂಪರೆಗಳು ಮೊದಲಿನಿಂದಲೂ ನಡೆದುಕೊಂಡು ಬಂದಿವೆ. ಆ ಪರಂಪರೆಗಳಲ್ಲಿ ಕೆಲವು ಸಮಾಜಕ್ಕೆ ಅನುಕೂಲವಾಗಿವೆ ಮತ್ತು ಇನ್ನು ಕೆಲವು ಪ್ರತಿಕೂಲವಾಗಿವೆ.
ಈಗ ಆಫ್ರಿಕಾ ದೇಶದಲ್ಲಿರುವ ಒಂದು ವಿಶೇಷ ರೂಢಿ, ಪರಂಪರೆಯ ಬಗ್ಗೆ ಈ ಲೇಖನದಲ್ಲಿ ನೋಡುವವರಿದ್ದೇವೆ.
ವ್ಯಕ್ತಿ ತಾನು ಹೇಗಿದ್ದರೆ ಹೆಚ್ಚು ಸುಂದರವಾಗಿ ಕಾಣುತ್ತೇನೆ ಎಂದು ವಿಚಾರ ಮಾಡುತ್ತಾನೆ. ಅದಕ್ಕಾಗಿ ಆತ ಪ್ರಯತ್ನವೂ ಮಾಡುತ್ತಿರುತ್ತಾನೆ. ನಮ್ಮ ಕಡೆಗೆ ಸೌಂದರ್ಯದ ವ್ಯಾಖ್ಯೆಯಲ್ಲಿ ಮೊದಲು ವ್ಯಕ್ತಿಯು ಬೆಳ್ಳಗಿರಬೇಕು ಆಮೇಲೆ ತೆಳ್ಳಗಿರಬೇಕು ಇಲ್ಲಿಂದ ಶುರುವಾಗುತ್ತದೆ.
ಆದರೆ ಆಫ್ರಿಕಾದಲ್ಲಿ ಸೌಂದರ್ಯದ ಅರ್ಥ ನಮ್ಮ ವಿಚಾರದ ಸಂಪೂರ್ಣವಾಗಿ ವಿರುದ್ಧವಿದೆ. ಇಲ್ಲಿ ಸ್ಥೂಲವಾದ ವ್ಯಕ್ತಿಯೇ ಸುಂದರ, ಸುರಸುಂದರಾಂಗ. ಆತನಿಗೆ ಸಮಾಜದಲ್ಲಿಯೂ ತುಂಬಾ ಸನ್ಮಾನವಿದೆ.
ನಾವು ಹೇಳುತ್ತಿರುವುದು ಆಫ್ರಿಕಾ ಖಂಡದಲ್ಲಿರುವ ಇಥಿಯೋಪಿಯಾ ದೇಶದಲ್ಲಿ ವಾಸಿಸುವ ಬೊಡಿ ಜನಾಂಗದ ಬಗ್ಗೆ.
ಈ ಜನಾಂಗದಲ್ಲಿ ಹೆಚ್ಚುಕಡಿಮೆ ಎಲ್ಲ ಪುರುಷರು ಸ್ಥೂಲವಾಗಿಯೇ ಇರುತ್ತಾರೆ. ಇವರು ವ್ಯಕ್ತಿಯನ್ನು ಆರಿಸಲು ಕಾರ್ಯಕ್ರಮದ ಆಯೋಜನೆಯನ್ನು ಮಾಡುತ್ತಾರೆ. ಆ ಕಾರ್ಯಕ್ರಮದಲ್ಲಿ ಎಲ್ಲಕ್ಕೂ ಸ್ಥೂಲವಾದ ವ್ಯಕ್ತಿಯನ್ನೇ ಸುಂದರ ಎಂದು ಆರಿಸುತ್ತಾರೆ.
ಒಮ್ಮೆ ಆತ ಆರಿಸಿದನೋ ಆಯ್ತು. ಆತನಿಗೆ ಜೀವನವಿಡೀ ಮಾನ, ಸನ್ಮಾನ, ಗೌರವ, ಪ್ರಸಿದ್ಧಿ ಸಿಗುತ್ತದೆ. ಅಷ್ಟೇ ಅಲ್ಲ ಆತನಿಗೆ ತನ್ನ ಮನಸಿಗೆ ಹಿಡಿಸಿದ ಸುಂದರ ಹುಡುಗಿಯನ್ನು ವರಿಸುವ ಸ್ವಾತಂತ್ರ್ಯ ನೀಡಲಾಗುತ್ತದೆ. ಸ್ಥೂಲವಾಗಿ ಕಾಣಿಸಲು ಬೋಡಿ ಸಮಾಜದ ಎಲ್ಲ ಪುರುಷರು ಜೇನುತುಪ್ಪಿನ ಸೇವನೆ ಮಾಡುತ್ತಾರೆ. ಇದರಿಂದ ಇವರ ತೂಕ ಹೆಚ್ಚಾಗುತ್ತದೆ.
ಈ ಜನಾಂಗ ಸಂಪೂರ್ಣವಾಗಿ ಪಶುಪಾಲನೆಯ ಮೇಲೆ ಅವಲಂಬಿಸಿದೆ. ಇವರ ಬೇರೆಯದೇ ಆದ ಸಂಸ್ಕೃತಿ, ಭಾಷೆ, ಪರಂಪರೆ ಇದೆ. ಕುಟುಂಬದ ಬಗ್ಗೆ ತುಂಬಾ ಕಾಳಜಿ ವಹಿಸುತ್ತಾರೆ. ಹೊಸಬರ, ನೆಂಟರಿಷ್ಟರ ಸನ್ಮಾನ ಮತ್ತು ಗೌರವ ಮಾಡುತ್ತಾರೆ. ಈ ಸಮಾಜದಲ್ಲಿ ಗಂಡು ಮಗು ಜನಿಸಿದರೆ ತಂದೆಯು ಆ ಮಗುವಿಗೆ ಒಂದು ಎತ್ತು ಹಾಗೂ ಒಂದು ಹಸುವನ್ನು ಉಡುಗೊರೆಯಾಗಿ ಕೊಡುತ್ತಾನೆ. ತಮ್ಮ ಸಾಂಕೃತಿಕ ಕಾರ್ಯಕ್ರಮಗಳಲ್ಲಿಯೂ ಈ ಪ್ರಾಣಿಗಳ ಉಪಯೋಗವನ್ನು ಮಾಡುತ್ತಾರೆ. ಈ ಸಮಾಜದಲ್ಲಿ ಹಸುವನ್ನು ವರದಕ್ಷಿಣೆಯ ಸ್ವರೂಪದಲ್ಲಿ ವರನಿಗೆ ನೀಡುತ್ತಾರೆ. ಹಸುವಿನಿಂದ ನಮ್ಮ ಹಾಗೆಯೇ ಹೈನಿನ ಉಪಯೋಗ ತೆಗೆದುಕೊಳ್ಳುತ್ತಾರೆ.
ಪ್ರತಿವರ್ಷ ಈ ಜನಾಂಗವು ಜೂನ್ ಅಥವಾ ಜುಲೈನಲ್ಲಿ ‘ಕಾಯೆಲ್’ ಹೆಸರಿನ ಕಾರ್ಯಕ್ರಮವನ್ನು ಆಯೋಜಿಸುತ್ತಾರೆ. ಈ ಕಾರ್ಯಕ್ರಮದಲ್ಲಿ ಯಾವ ತರುಣನು ಎಲ್ಲರಿಗಿಂತಲೂ ಸ್ಥೂಲ ಕಾಯವನ್ನು ಹೊಂದಿರುತ್ತಾನೆಯೋ ಆತನಿಗೆ ನಟನ ಹಾಗೆ ಸಿಂಗರಿಸುತ್ತಾರೆ. ಇದೇ ಕಾರ್ಯಕ್ರಮದಲ್ಲಿ ಇವರು ತಮ್ಮ ಹೊಸ ವರ್ಷದ ಘೋಷಣೆಯನ್ನು ಮಾಡುತ್ತಾರೆ. ಅದರ ಜೊತೆಗೆ ಹೊಸ ವರ್ಷದಲ್ಲಿ ಬರುವ ವಿಶೇಷ ದಿನಗಳ ಬಗ್ಗೆಯೂ ಹೇಳುತ್ತಾರೆ.