Articles

ಪರ್ಫೆಕ್ಷನ್ ಅಂದರೇನು? ಈ ವೈರಲ್ ವಿಡಿಯೋ ನೋಡಿ ಗೊತ್ತಾಗುತ್ತೆ; ಹುಡುಗ ಕೆಳಗಿನಿಂದಲೇ ಟ್ರಕ್ ನಲ್ಲಿ ಗ್ಯಾಸ್ ಸಿಲೆಂಡರ್ ಒಂದರಮೇಲೊಂದು ಒಗೆಯುವ ರೀತಿ ನೋಡಿ.

ತಾವು ಮಾಡುವ ಕೆಲಸದಲ್ಲಿ ಕೆಲವರು ಇಷ್ಟೊಂದು ಪರ್ಫೆಕ್ಟ್ ಆಗುತ್ತಾರೆಂದರೆ ಆ ಕೆಲಸದಲ್ಲಿ ಬೇರೆ ಯಾರು ಅವರನ್ನು ಬೆರಳು ಮಾಡಿ ತೋರಿಸಲು ಸಾಧ್ಯವಿಲ್ಲ. ಇಂಟರ್ನೆಟ್ನಲ್ಲಿ ಸದ್ಯ ಒಂದು ವಿಡಿಯೋ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದಾಗ ನೋಡುಗರಿಗೆ ಆಶ್ಚರ್ಯವಾಗದೇ ಇರದು.

ಏಕೆಂದರೆ ಈ ವಿಡಿಯೋದಲ್ಲಿ ತರುಣನೊಬ್ಬ ಟ್ರಕ್ ನಲ್ಲಿ ಗ್ಯಾಸ್ ಸಿಲೆಂಡರ್ ಗಳನ್ನು ಕೆಳಗಿನಿಂದಲೇ ಎತ್ತಿ ಒಗೆಯುತ್ತಿದ್ದಾನೆ. ಆತ ಸುಮ್ಮನೆ ಹಾಗೆಯೇ ಹುಂಬನಂತೆ ಶಕ್ತಿಯನ್ನು ಉಪಯೋಗಿಸಿ ಬಿಸಾಡಿ ಒಗೆಯುತ್ತಿದ್ದಾನೆಂದು ತಿಳಿಯಬೇಡಿ. ಆತ ಟ್ರಕ್ ನಲ್ಲಿ ಒಗೆಯುತ್ತಿರುವ ಸಿಲೆಂಡರ್ ಗಳು ಓರಣವಾಗಿ ಒಂದರ ಮೇಲೆ ಒಂದರಂತೆ ಸರಿಯಾಗಿ ಬ್ಯಾಲೆನ್ಸ್ ನಿಂದ ಕುಳಿತುಕೊಳ್ಳುತ್ತಿವೆ. ಈ ಸಿಲಿಂಡರ್ಗಳನ್ನು ಟ್ರಕ್ ನಲ್ಲಿ ಇಡುವ ಕೆಲಸ ಮಾಡುತ್ತಾ ಮಾಡುತ್ತಾ ಪ್ರಸ್ತುತ ವ್ಯಕ್ತಿ ಆ ಕೆಲಸದಲ್ಲಿಯೇ ಎಷ್ಟೊಂದು ಪಾರಂಗತನಾಗಿಬಿಟ್ಟಿದ್ದಾನೆಂಬುದು ಈ ಕೆಳಗಿನ ವಿಡಿಯೋ ನೋಡಿದಾಗ ತಿಳಿದುಬರುತ್ತದೆ.

ನೋಡಿ ಈ ವಿಡಿಯೋ…

17 ಸೆಕೆಂಡಿನ ಈ ವಿಡಿಯೋದಲ್ಲಿ ಹುಡುಗನು ಕೆಳಗಿನ ಸಿಲಿಂಡರ್ಗಳನ್ನು ಕೈಯಿಂದ ಎತ್ತುತ್ತಾನೆ ಮತ್ತು ಎದುರು ನಿಂತ ಟ್ರಕ್ ನಲ್ಲಿ ಒಂದರ ನಂತರ ಒಂದನ್ನು ಬಿಸಾಡಿ ಒಗೆಯುತ್ತಿದ್ದಾನೆ. ಆ ಬೀಸಾಡಿದ ಸಿಲಿಂಡರ್ ತನ್ನಷ್ಟಕ್ಕೆ ತಾನೇ ಒಂದರ ಮೇಲೆ ಒಂದು ಹೋಗಿ ಕುಳಿತುಕೊಳ್ಳುತ್ತಿವೆ.

ಪ್ರಸ್ತುತ ಈ ವಿಡಿಯೋವನ್ನು ಟ್ವಿಟರ್ನಲ್ಲಿ ಶೇರ್ ಮಾಡಲಾಗಿದ್ದು ಇಲ್ಲಿಯವರೆಗೆ 26 ಲಕ್ಷ ಜನರು ಈ ವಿಡಿಯೋ ವೀಕ್ಷಿಸಿದ್ದಾರೆ. ಈ ವಿಡಿಯೋವನ್ನು ಓವರ್ ಟೈಮ್ ಹೆಸರಿನ ಅಕೌಂಟ್ ನಿಂದ ಪೋಸ್ಟ್ ಮಾಡಲಾಗಿದೆ.

Leave a Comment

Your email address will not be published. Required fields are marked *