Articles

Video ರಶ್ಮಿಕಾ ಅಸೂಯೆ ಪಡಬೇಕು; ನ್ಯೂಯಾರ್ಕ್ ಸ್ಟ್ರೀಟ್ ನಲ್ಲಿ ಸ್ಕರ್ಟ್ ತೊಟ್ಟು ಸಾಮಿ ಸಾಮಿ ಹಾಡಿಗೆ ದೇಸಿ ಹುಡುಗನ ತೂಫಾನ್ ಡಾನ್ಸ್!

ಸೋಶಿಯಲ್ ಮೀಡಿಯಾದಲ್ಲಿ ಯಾರು ಯಾವಾಗ ಒಮ್ಮೆಲೆ ಫೋಕಸ್ ನಲ್ಲಿ ಬರುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಭಾರತೀಯ ಹುಡುಗನೊಬ್ಬ ಅಮೆರಿಕದ ನ್ಯೂಯಾರ್ಕ್ ಸಿಟಿಯ ಸ್ಟ್ರೀಟ್ ನಲ್ಲಿ ಸ್ಕರ್ಟ್ ತೊಟ್ಟು ಸೌತ್ ಸೂಪರ್ ಹಿಟ್ ‘ಪುಷ್ಪ’ ಚಿತ್ರದ ಹಾಡಾದ ಸಾಮಿ ಸಾಮಿಗೆ ಭರ್ಜರಿಯಾಗಿ ಡಾನ್ಸ್ ಮಾಡಿದ್ದಾರೆ. ಈ ಹಾಡಿಗೆ ಮಾಡಿದ ಆತನ ನೃತ್ಯ ನೋಡಿದಾಗ ಸ್ವತಃ ರಶ್ಮಿಕ ಮಂದಣ್ಣ ಅವರೇ ಅಸೂಯೆ ಪಡಬೇಕು ಆ ರೀತಿ ತೂಫಾನ್ ಕುಣಿತವನ್ನು ಸಾದರಪಡಿಸಿದ್ದಾರೆ.

ಈ ಹಾಡಿಗೆ ನೃತ್ಯ ಮಾಡುವಾಗ ಯುವಕ ತುಂಬಾ ಸುಂದರ ಹಾಗೂ ಸರಳವಾದ ಉಡುಗೆಯನ್ನು ತೊಟ್ಟು ಕೊಂಡಿದ್ದಾನೆ. ಬಿಳಿ ಬಣ್ಣದ ಶರ್ಟ್ ತೊಟ್ಟು ಟೊಂಕಕ್ಕೆ ಕೇಸರಿ ಬಣ್ಣದ ದುಪಟ್ಟಾ ಸುತ್ತಿ ಕೊಂಡಿದ್ದಾರೆ. ಕೆಳಗೆ ಆರ್ಟ್ ಡಿಸೈನ್ ನ ಮಿಶ್ರ ಬಣ್ಣದ ಸ್ಕರ್ಟ್ ತೊಟ್ಟು ಕೊಂಡಿದ್ದಾರೆ. ಕಾಲಲ್ಲಿ ಹಳದಿ ಬಣ್ಣದ ಶೂ ಧರಿಸಿದ್ದಾರೆ.

ವೀಡಿಯೋ ನೋಡಿ

 

View this post on Instagram

 

A post shared by Jainil Mehta (@jainil_dreamtodance)

ಈ ವಿಡಿಯೋದಲ್ಲಿ ಡಾನ್ಸ್ ಮಾಡಿದ ವ್ಯಕ್ತಿ ಗುಜರಾತಿ ಆಗಿದ್ದು ಇವರ ಹೆಸರು ಜೈನಿಲ್ ಎಂದು ತಿಳಿದುಬಂದಿದೆ. ಇವರು ವೃತ್ತಿಯಲ್ಲಿ ಕೊರಿಯಗ್ರಾಫರ್ ಆಗಿದ್ದಾರೆ. ಪ್ರಸ್ತುತ ಈ ವಿಡಿಯೋವನ್ನು ತಮ್ಮ ಹೆಸರಿನ ಅಕೌಂಟ್ ನಿಂದಲೇ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದಾರೆ.

Leave a Comment

Your email address will not be published. Required fields are marked *