ಇಷ್ಟೊಂದು ವರ್ಷಗಳ ನಂತರ ದಿವ್ಯಾ ಭಾರತೀ ತಾಯಿ ಖುಲಾಸೆ, “ಅಮೀರ್ ಖಾನ್ ದಿವ್ಯಾಳನ್ನು..
90 ರ ದಶಕದ ಬಾಲಿವುಡ್ ನಟಿಯರ ಚರ್ಚೆಯಲ್ಲಿ ದಿವ್ಯಾ ಭಾರತಿಯವರ ಹೆಸರು ಬರಲಿಲ್ಲವೆಂದರೆ ಹೇಗೆ? ಅತ್ಯಂತ ಕಡಿಮೆ ಸಮಯದಲ್ಲಿ ಅಂದರೆ ಬರೀ ಮೂರೇ ವರ್ಷಗಳ ಕಾಲಾವಧಿಯಲ್ಲಿ ಕೆಲವೇ ಚಿತ್ರಗಳಲ್ಲಿ ಮಿಂಚಿ ಅಷ್ಟೇ ಬೇಗನೆ ಎಲ್ಲವನ್ನೂ ತೊರೆದು ಹೋದರು ದಿವ್ಯಾ ಭಾರತಿ.
ಇವರು ಹದಿನಾರನೇ ವಯಸ್ಸಿನಲ್ಲಿಯೇ ಅಭಿನಯದ ಕ್ಷೇತ್ರದಲ್ಲಿ ತಮ್ಮ ಹೆಸರು ಗಳಿಸಿದರು. ಅಷ್ಟೇ ಕಡಿಮೆ ಅವಧಿಯಲ್ಲಿ ಬಾಲಿವುಡ್ ನ ಮೇರು ನಟರ ಜೊತೆಗೆ ನಟಿಸಿ ತಮ್ಮನ್ನು ತಾವು ಬೇಗ ಚಿತ್ರ ರಸಿಕರನ್ನು ಗುರುತಿಸಿಕೊಂಡರು. ಆ ಸಮಯದ ಟಾಪ್ ನಟರಾದ ಶಾರುಖ್ ಖಾನ್, ರಿಷಿ ಕಪೂರ್, ಜಾಕಿ ಶ್ರಾಫ್, ಸನ್ನಿ ಡಿಯೋಲ್ ಅವರೊಂದಿಗೆ ಅನೇಕ ಹಿಟ್ ಚಿತ್ರಗಳಲ್ಲಿ ಕೆಲಸ ಮಾಡಿದರು.
ಇವರಲ್ಲಿ ಸನ್ನಿ ಡಿಯೋಲ್ ಅವರ ಜೊತೆಗಿನ ಅಭಿನಯವು ರಸಿಕರಿಗೆ ತುಂಬಾ ಹಿಡಿಸಿತ್ತು. ದಿವ್ಯಾ ಅವರ ಜನಪ್ರಿಯತೆಯಿಂದ ಆ ಸಮಯದ ನಟಿಯರಲ್ಲಿ ಭೀತಿ ಉಂಟಾಗಿತ್ತು ಎಂದರೆ ತಪ್ಪಾಗುವುದಿಲ್ಲ. ಕಾರಣ ಅಷ್ಟೊಂದು ಜನಪ್ರಿಯತೆ ಅತೀ ಕಡಿಮೆ ಸಮಯದಲ್ಲಿ ಇವರಿಗೆ ಪ್ರಾಪ್ತವಾಗಿತ್ತು. ಇನ್ನೊಂದು ಮುಖ್ಯ ವಿಷಯವೇನೆಂದರೆ ಪ್ರತಿಯೊಬ್ಬ ನಟ ಆಗ ದಿವ್ಯಾ ಅವರ ಜೊತೆಗೆ ನಟನೆಗೆ ತಯಾರಿದ್ದನು. ಹೀಗಾಗಿ ಡೈರೆಕ್ಟರ್ ಗಳಿಗೆ ದಿವ್ಯಾಳನ್ನು ತಮ್ಮ ಚಿತ್ರದಲ್ಲಿ ತೆಗೆದುಕೊಳ್ಳಲು ಈ ನಟರು ದುಂಬಾಲು ಬೀಳುತ್ತಿದ್ದರು.
ಅದರಲ್ಲಿ ಸನ್ನಿ ಡಿಯೋಲ್ ಅವರು ದಿವ್ಯಾಳನ್ನು ತಮ್ಮ ಪ್ರತಿಯೊಂದು ಚಿತ್ರದಲ್ಲಿ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದ್ದರು. ಆಗ ಬಾಲಿವುಡ್ ನಲ್ಲಿ ಸನ್ನಿ ಡಿಯೋಲ್ ಅವರ ಹೆಸರು ಅಗ್ರಪಂಕ್ತಿಯಲ್ಲಿ ಇತ್ತು. ಹಾಗೂ ಇವರಿಬ್ಬರ ಜೋಡಿ ಬಾಕ್ಸ್ ಆಫೀಸ್ ನಲ್ಲಿ ಹಿಟ್ ಆಗಿತ್ತು.

ಆಗ ಸನ್ನಿ ಡರ್ ಚಿತ್ರದಲ್ಲಿ ತೊಡಗಿದ್ದರು. ಮತ್ತು ಈ ಚಿತ್ರಕ್ಕಾಗಿ ದಿವ್ಯಾಳನ್ನು ಫೈನಲ್ ಮಾಡಲಾಗಿತ್ತು. ದಿವ್ಯಾಳಿಗೂ ಚಿತ್ರದ ಸ್ಕ್ರಿಪ್ಟ್ ಹಿಡಿಸಿತ್ತು. ಆದರೆ ಚಿತ್ರ ಸೈನ್ ಮಾಡುವ ಮೊದಲು ಒಂದು ಕಾರ್ಯಕ್ರಮದ ಸಂದರ್ಭದಲ್ಲಿ ಅವರು ದುಬೈಗೆ ಹೋಗಿದ್ದರಿಂದ ಚಿತ್ರಕ್ಕೆ ಸೈನ್ ಮಾಡುವದಾಗಿರಲಿಲ್ಲ. ಇದೇ ಚಿತ್ರಕ್ಕಾಗಿ ಎರಡನೆಯ ನಟ ಅಮೀರ್ ಖಾನ್ ರ ಎಂಟ್ರಿ ಆಯಿತು. ಅಮೀರ್ ಖಾನ್ ದಿಗ್ದರ್ಶಕರಿಗೆ ನಟಿಯರನ್ನು ಚೇಂಜ್ ಮಾಡಲು ವಿನಂತಿಸಿದರು. ಅವರ ಹೇಳಿಕೆಯ ಪ್ರಕಾರ ಚಿತ್ರದಲ್ಲಿ ಜೂಹಿ ಚಾವ್ಲಾಳನ್ನು ತೆಗೆದುಕೊಂಡರು. ಹೀಗಾಗಿ ದಿವ್ಯಾ ಒಂದು ಸೂಪರ್ ಹಿಟ್ ಚಿತ್ರದಿಂದ ವಂಚಿತರಾದರು.
ಮುಂದೆ ಕೆಲವು ದಿವಸಗಳ ನಂತರ ಅಮೀರ್ ಖಾನ್ ರು ಸಹ ಚಿತ್ರದಿಂದ ದೂರವಾದರು. ಕಾರಣ ಋಣಾತ್ಮಕ ರೋಲ್ ಗಾಗಿ ಅವರ ಮನಸ್ಸು ಒಪ್ಪಲಿಲ್ಲ. ಆದರೆ ಜೂಹಿ ಮಾತ್ರ ಚಿತ್ರದಲ್ಲಿ ನಟಿಯ ಪಾತ್ರವನ್ನು ನಿಭಾಯಿಸಿದರು. ದಿವ್ಯಾ ಮಾತ್ರ ಒಂದು ಒಳ್ಳೆಯ ಚಿತ್ರದಿಂದ ವಂಚಿತವಾಗಿ ಉಳಿದರು. ಈ ವಿಷಯವನ್ನು ಎಷ್ಟೋ ವರ್ಷಗಳ ನಂತರ ದಿವ್ಯಾಳ ತಾಯಿ ತಮ್ಮ ಒಂದು ಸಂದರ್ಶನದಲ್ಲಿ ಹೊರಹಾಕಿದ್ದಾರೆ. ಇದೇ ರೀತಿ ಅನೇಕ ಚಿತ್ರಗಳು ಕೈ ತಪ್ಪಿದರೂ ಬಾಲಿವುಡ್ ನಲ್ಲಿ ಮಾತ್ರ ತಮ್ಮ ಧಮಾಕಾ ಮಾಡಿ ಹೋದರು ದಿವ್ಯಾ ಭಾರತಿ.