Articles

ಬದಿಗೆ ನಿಂತು ನೀರು ಕುಡಿಯುವಾಗ ಹಠಾತ್ ಆಳ ಹೊಂಡದಲ್ಲಿ ಬಿತ್ತು ಪುಟ್ಟಾನೆ..! ನಂತರ ಎರಡು ಆನೆಗಳು ಮಾಡಿದ ದೃಶ್ಯ ನೋಡಿ…

ಅವಘಡಗಳು ಯಾವಾಗ ಹೇಗೆ ಘಟಿಸುತ್ತವೆ ಎಂದು ಹೇಳಲು ಸಾಧ್ಯವಿಲ್ಲ. ಸಂಕಷ್ಟದಲ್ಲಿ ಸಿಲುಕಿದಾಗ ಬುದ್ಧಿ ಇರುವ ಮನುಷ್ಯ ಹೇಗೋ ಪಾರಾಗಬಹುದು. ಆದರೆ ಮಾತುಗಳೇ ಬಾರದ ಪ್ರಾಣಿಗಳು ಎಷ್ಟೊಂದು ಕಷ್ಟ ಅನುಭವಿಸುತ್ತವೆ ಎಂಬುದನ್ನು ವಿವರಿಸಲು ಸಾಧ್ಯವಿಲ್ಲ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಪುಟ್ಟ ಆನೆಯ ವಿಡಿಯೋ ಒಂದು ತುಂಬಾ ವೈರಲ್ ಆಗುತ್ತಿದೆ.

ಈ ವಿಡಿಯೋದಲ್ಲಿ ನೀರಿನ ಹೊಂಡದ ಬದಿಗೆ ತಾಯಿ ಆನೆ ಮತ್ತು ಮರಿ ಆನೆ ಎರಡು ಕೂಡಿ ನೀರು ಕುಡಿಯುತ್ತಿರುವಾಗ ಮರಿ ಆನೆಯು ಜಾರಿ ಹಠಾತ್ ಹೊಂಡದಲ್ಲಿ ಬೀಳುತ್ತದೆ. ಪ್ರಸ್ತುತ ಹೊಂಡವು ಆಳವಾಗಿದ್ದರಿಂದ ಹಾಗೂ ಇನ್ನೂ ಸರಿಯಾಗಿ ಈಜು ಕಲಿಯದ ಮರಿ ಆನೆಯು ಅದರಲ್ಲಿ ಮುಳುಗಲು ಶುರು ಮಾಡಿತು. ತಾಯಿಯಾನೆಯು ಆ ಸಮಯದಲ್ಲಿ ಏನೂ ತೋಚದಂತಾಗಿ ಹುಚ್ಚನಂತೆ ಅತ್ತಿತ್ತ ಸುತ್ತಾಡಲು ಶುರು ಮಾಡಿದೆ. ಅದೇ ಸಂದರ್ಭದಲ್ಲಿ ಬೇರೊಂದು ಆನೆ ಈ ದೃಶ್ಯವನ್ನು ನೋಡಿ ತಕ್ಷಣ ಸಹಾಯಕ್ಕೆ ಬಂದಿದೆ. ಆಮೇಲೆ ಎರಡೂ ಆನೆಗಳು ಕೂಡಿ ನೇರ ನೀರಿನ ಹೊಂಡದಲ್ಲಿ ಇಳಿದು ಮರಿಯಾನೆಯನ್ನು ಹೊಂಡದಿಂದ ಶೀಘ್ರದಲ್ಲಿ ಹೊರಗೆ ತರುತ್ತ ತಮ್ಮ ಮರಿಯಾನೆಯನ್ನು ಜೀವ ಸಹಿತ ಉಳಿಸಿಕೊಂಡವು.

ವಿಡಿಯೋ ನೋಡಿ

ಈ ವಿಡಿಯೋವನ್ನು ಟ್ವಿಟರ್ ನಲ್ಲಿ ಗ್ಯಾಬ್ರಿಯಲ್ ಕೊರ್ನೋ ಹೆಸರಿನ ಐಡಿಯಿಂದ ಶೇರ್ ಮಾಡಿದ್ದಾರೆ. ಈ ಸುಂದರವಾದ ಮತ್ತು ಅಷ್ಟೇ ಮನ ಮಿಡಿಯುವ ವಿಡಿಯೋವನ್ನು ಇಲ್ಲಿಯವರೆಗೆ ಮೂರು ಮಿಲಿಯನ್ ಗಿಂತಲೂ ಹೆಚ್ಚಿನ ಜನರು ವೀಕ್ಷಿಸಿದ್ದಾರೆ.

Leave a Comment

Your email address will not be published. Required fields are marked *