Articles

ಚಿಕ್ಕ ಗಜರಾಜನನ್ನು ನೋಡಿ 14 ಸಿಂಹಿಣಿಗಳು ಮಾಡಿದವು ಅಟ್ಯಾಕ್! ಕ್ಷಣದಲ್ಲಿ ಪಲ್ಟಿ ಆಯಿತು ಬಾಜಿ… ನೋಡಿ ಈ ವಿಡಿಯೋದಲ್ಲಿ.

ಕಾಡಿನ ರಾಜನೆಂದು ಸಿಂಹಕ್ಕೆ ಪರಿಗಣಿಸಲಾಗುತ್ತದೆ. ಹಾಗೆಂದ ಮಾತ್ರಕ್ಕೆ ಹೆಣ್ಣು ಸಿಂಹದ ವರ್ಚಸ್ವವು ಸಹ ಕಡಿಮೆ ಇರುವುದಿಲ್ಲ, ಆನೆಯಂತಹ ದೊಡ್ಡ ಪ್ರಾಣಿಗಳ ಜೊತೆಗೂ ಹೋರಾಡಲು ಹಿಂದೆ ಮುಂದೆ ನೋಡುವುದಿಲ್ಲ. ಆದರೆ ಕಾಡಿನ ನಿಯಮದಲ್ಲಿ ಯಾವಾಗ ಯಾರು ಯಾರ ಮೇಲೆ ಸವಾರಿ ಮಾಡುತ್ತಾರೆ ಎಂಬುದು ಹೇಳಲು ಸಾಧ್ಯವಿಲ್ಲ. ಇಂಥ ಎಷ್ಟೋ ಉದಾಹರಣೆಗಳನ್ನು ಈಗಾಗಲೇ ನಾವು ವೈಲ್ಡ್ ಲೈಫ್ ವಿಡಿಯೋಗಳಲ್ಲಿ ನೋಡಿದ್ದೇವೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಇದೇ ರೀತಿಯ ವಿಶೇಷ ವಿಡಿಯೋ ಒಂದು ನಿಮಗಾಗಿ ತಂದಿದ್ದೇವೆ ನೋಡಿ.

ವೈರಲ್ ಆಗುತ್ತಿರುವ ಈ ವಿಡಿಯೋ ನಿಜಕ್ಕೂ ತುಂಬಾ ಅಪರೂಪದ್ದಾಗಿದೆ. ಪ್ರಸ್ತುತ ವಿಡಿಯೋವನ್ನು ನೋಡಿದಾಗ ಪ್ರತಿಸಲ ಕ್ರೂರ ಪ್ರಾಣಿಗಳೇ ಗೆಲ್ಲುತ್ತವೆ ಎಂದು ಹೇಳಲು ಸಾಧ್ಯವಿಲ್ಲ. ಕಾರಣ ಎಷ್ಟೋ ಸಲ ಬುದ್ಧಿವಂತಿಕೆಯು ಶಕ್ತಿಯನ್ನು ಸೋಲಿಸುತ್ತದೆ. ಅದಕ್ಕಾಗಿಯೇ ಹೇಳೋದು ಶಕ್ತಿಗಿಂತ ಯುಕ್ತಿ ಮೇಲು ಅಂತ. ಇಲ್ಲಿಯೂ ಕೊನೆಯ ರಿಸಲ್ಟ ನೋಡಿದಾಗ ನೆಟ್ಟಿಗರಿಗೆ ಆಶ್ಚರ್ಯವಾಗದೇ ಇರದು. ಈ ವಿಡಿಯೋದಲ್ಲಿ ಆನೆಯ ಮರಿಯು ಸಿಂಹಿಣಿಗಳ ಜೊತೆಗೆ ಮಾಡಿದ ಹೋರಾಟ ಹೊಗಳಿಕೆಗೆ ಪಾತ್ರವಾಗಿದೆ.

ಪ್ರಸ್ತುತ ವಿಡಿಯೋವನ್ನು ನೋಡಿ

ವಿಡಿಯೋದಲ್ಲಿ ಕಂಡು ಬರುವ ದೃಶ್ಯದ ಪ್ರಕಾರ ಹೆಣ್ಣು ಸಿಂಹಗಳು ಆನೆಯ ಮರಿಯನ್ನು ನೋಡಿ ಒಮ್ಮೆಲೆ ದಾಳಿ ಮಾಡಿವೆ. ಮೊದಲ ನೋಟದಲ್ಲಿ ಆನೆಯು ಸಹಜವಾಗಿಯೇ ಈ ಸಿಂಹಗಳಿಗೆ ಆಹಾರವಾಗಿ ಬಿಡುತ್ತದೆ ಎಂದು ತಿಳಿದು ಬರುತ್ತದೆ. ಈ ದಾಳಿಯಲ್ಲಿ ಎರಡು ಮೂರು ಸಿಂಹಗಳು ಆನೆಯ ಬೆನ್ನ ಮೇಲೆಯೂ ಹೋಗಿ ಕುಳಿತುಕೊಳ್ಳುತ್ತವೆ. ಈ ಸಂದರ್ಭದಲ್ಲಿ ಆನೆ ಮಾತ್ರ ತನ್ನ ಹೋರಾಟದ ಪ್ರಯತ್ನವನ್ನು ಕೈಬಿಡುವುದಿಲ್ಲ. ಅದು ಬುದ್ಧಿವಂತಿಕೆಯಿಂದ ಸದಾ ಸುತ್ತಲೂ ಗರಗರನೆ ತಿರುಗಲು ಪ್ರಾರಂಭಿಸುತ್ತದೆ. ಇದರಿಂದ ಮೇಲೇರಿದ ಹೆಣ್ಣು ಸಿಂಹಗಳು ಬ್ಯಾಲೆನ್ಸ್ ತಪ್ಪಿ ಕೆಳಗೆ ಉರುಳುತ್ತವೆ. ನಂತರ ಆನೆಯು ಕೆರೆಯ ಕಡೆಗೆ ದೌಡಾಯಿಸುತ್ತದೆ. ಇಷ್ಟಾದರೂ ಹೆಣ್ಣು ಸಿಂಹಗಳು ಅದನ್ನು ಫಾಲೋ ಮಾಡುವದು ಬಿಡುವುದಿಲ್ಲ. ಆನೆಯು ನೀರಿನಲ್ಲಿ ಹೋದ ನಂತರ ಮಾತ್ರ ಹೆಣ್ಣು ಸಿಂಹಗಳು ಒಂದೊಂದಾಗಿ ಪೆಚ್ಚು ಮೋರೆಯಿಂದ ಹಿಂದಿರುಗುತ್ತವೆ. ತದನಂತರ ಆನೆಗೆ ಮತ್ತಷ್ಟು ಬಲಬಂದಂತಾಗಿ ಮರಳಿ ಹೆಣ್ಣು ಸಿಂಹಗಳಿಗೆ ಓಡಿಸಿ ಕಳುಹಿಸಲು ಯಶಸ್ವಿಯಾಗುತ್ತದೆ.

ವಿಡಿಯೋ ನೋಡಿ

ಅನೆಯ ಈ ಮರಿಯು ಸಹಜವಾಗಿ ಸಿಂಹಗಳಿಗೆ ಆಹಾರವಾಗಿ ಹೋಗುತ್ತದೆ ಎನ್ನುತ್ತಿರುವಾಗ ಸಿಂಹಗಳ ವಿರುದ್ಧ ಮಾಡಿದ ಆನೆಯ ಈ ಹೋರಾಟ ಅದರ ಸಾಹಸವನ್ನು ಎತ್ತಿ ತೋರಿಸುತ್ತದೆ. ಈ ಸುಂದರವಾದ ವಿಡಿಯೋವನ್ನು ಐಎಫ್ಎಸ್ ಆಫೀಸರ್ ಆದ ಸುಶಾಂತ್ ನಂದಾ ಅವರು ಟ್ವಿಟರ್ ನಲ್ಲಿ ತಮ್ಮ ಐಡಿ ಇಂದ ಶೇರ್ ಮಾಡಿದ್ದಾರೆ. ಈ ವಿಡಿಯೋ ಇಲ್ಲಿಯವರೆಗೆ ಸುಮಾರು ಎರಡುವರೆ ಲಕ್ಷ ವೀಕ್ಷಣೆಯನ್ನು ಪಡೆದಿದೆ.

Leave a Comment

Your email address will not be published. Required fields are marked *