ಈತ 67 ವರ್ಷದಿಂದ ಸ್ನಾನವೇ ಮಾಡಿಲ್ಲವಂತೆ, ಕೂದಲು ಹೆಚ್ಚಾದರೆ ಅವುಗಳಿಗೆ ಬೆಂಕಿ ಹಚ್ಚಿಕೊಳ್ಳುತ್ತಾನೆ!
ಸದ್ಯಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಅನೇಕ ಸಂಗತಿಗಳು ವೈರಲ್ ಆಗುತ್ತವೆ. ನಾವು ಅವುಗಳನ್ನು ನಂಬಬೇಕೋ ಅಥವಾ ಬೇಡವೋ ಎಂಬುದರ ಕುರಿತು ನಮ್ಮೊಳಗೆ ಪ್ರಶ್ನೆ ನಿರ್ಮಾಣ ವಾಗುವದು. ಇಂಟರ್ನೆಟ್ ನಲ್ಲಿಯ ಕೆಲವು ಭ#ಯ ಮೂಡಿಸುವ ಸಂಗತಿಗಳಿಂದ ಬಹಳಷ್ಟು ಜನರು ಹೆದರುತ್ತಾರೆ. ಕೆಲವರು ಎತ್ತರಕ್ಕೆ ಹೆದರುತ್ತಾರೆ, ಕೆಲವರು ಬೆಂಕಿಗೆ ಹೆದರುತ್ತಾರೆ ಮತ್ತು ಕೆಲವರು ಬೇರೆ ಯಾವುದನ್ನಾದರೂ ಕಂಡರೆ ಹೆದರುತ್ತಾರೆ. ಫೋಬಿಯಾಗಳಿಂದ ಜನರು ಈ ವಿಷಯಗಳಿಂದ ದೂರವಿರಲು ಪ್ರಯತ್ನಿಸುತ್ತಾರೆ. ಹಾಗೆ ಇಲ್ಲಿ ಒಬ್ಬ ವ್ಯಕ್ತಿ ಸಮಾಜಕ್ಕೆ ಹೆದರಿ ಊರು ಬಿಟ್ಟು ಗುಡ್ಡು ಗಾಡಿನಲ್ಲಿ ಯಾರ ಸಂಪರ್ಕ ವಿಲ್ಲದೆ ಬದುಕುತ್ತಿದ್ದಾನೆ. ಅಲ್ಲದೆ ಈತ ಕಳೆದ 67 ವರ್ಷಗಳಿಂದ ಸ್ನಾನವೇ ಮಾಡಿಲ್ಲ. ಈ ವಿಚಿತ್ರ ವ್ಯಕ್ತಿಯ ಬಗ್ಗೆ ಇಂದು ನಿಮಗೆ ತಿಳಿಸುವವರಿದ್ದೇವೆ.

ಈ ವ್ಯಕ್ತಿಯ ಹೆಸರು ಓಮಿ ಹಾಜಿ. ಈ ವ್ಯಕ್ತಿ 87 ವರ್ಷದವರಾಗಿದ್ದು ಕಳೆದ 67 ವರ್ಷಗಳಿಂದ ಸ್ನಾನವೇ ಮಾಡದೆ ಜೀವನವನ್ನು ನಡೆಸುತ್ತಿದ್ದಾರೆ. ಓಮಿ ಹಾಜಿ ಇರಾನ್ ನಲ್ಲಿ ವಾಸಿಸುತ್ತಾರೆ. ಅಲ್ಲಿಯ ಸ್ಥಳೀಯ ಮಾಧ್ಯಮಗಳು ಅವರನ್ನು ಕೆಲವು ಪ್ರಶ್ನೆಗಳನ್ನು ಕೇಳಿದಾಗ ತನಗಿದ್ದ ಫೋಬಿಯಾ ಕಾಯಿಲೆಯ ಕುರಿತು ತಿಳಿಸಿದನು. “ನನಗೆ ನೀರು ಕಂಡರೆ ಹೆದರಿಕೆ ಯಾಗುತ್ತೆ ಆದುದರಿಂದ ನಾನು ಸ್ನಾನ ಮಾಡುವದಿಲ್ಲ ಅಷ್ಟೇ ಅಲ್ಲ ನೀರಿನ ಸಮೀಪವು ಸಹ ನಾನು ಹೋಗುವದಿಲ್ಲ” ಎಂದು ಹಾಜಿ ಹೇಳಿದರು.

ಮಾಧ್ಯಮಗಳಲ್ಲಿ ಬಂದ ವರದಿಯ ಪ್ರಕಾರ, ಕಳೆದ 67 ವರ್ಷಗಳಿಂದ ಈ ವ್ಯಕ್ತಿ ಒಂದು ಬಾರಿಯೂ ತನ್ನ ಶರೀರ ಸ್ವಚ್ಛ ಗೊಳಿಸಿಲ್ಲ ವಂತೆ. ಒಂದು ವೇಳೆ ಸ್ನಾನ ಮಾಡದಿದ್ದರೆ ನಮಗೆ ಅನಾರೋಗ್ಯ ನಿರ್ಮಾಣವಾಗುವದು ಎಂದು ಹೆದರುವ ನಾವು ಈತನ ಕಥೆ ಕೇಳಿದರೆ ಆ#ಶ್ಚರ್ಯ ವಾಗುತ್ತದೆ. ಈತನ ಆಹಾರ ಕೂಡಾ ಸಾಮಾನ್ಯ ಜನರಿಗಿಂತ ವಿಭಿನ್ನ ವಾಗಿದೆ. ಈತ ತನ್ನ ಆಹಾರದಲ್ಲಿ ಪ್ರಾಣಿಗಳ ಕೊಳೆತ ಮಾಂಸವನ್ನೇ ತಿನ್ನುತ್ತಾನೆ. ಅನೇಕ ಸಲ ಪಾರ್ಕುಪಾಇನದ ಮಾಂಸ ಸಹ ತಿನ್ನುತ್ತಾನೆ. ಕೆಲವೊಮ್ಮೆ ಒಂದೇ ಬಾರಿಗೆ 5 ಸಿಗರೇಟ್ ಸಹ ಸೇದುತ್ತಾನೆ. ಓಮಿಯವರು ಅನೇಕ ಸಲ ಪ್ರಾಣಿಗಳ ಮಲವನ್ನು ಸುಟ್ಟಿಕೊಂಡು ತಮ್ಮ ಬಳಿಯಲಿದ್ದ ಹಳೆಯ ಪೈಪಿನಲ್ಲಿ ಹಾಕಿ ಅದನ್ನು ಸಿಗರೇಟ್ ತರ ಸೇದುತ್ತಾರೆ.

ಹಾಜಿ ಇವರು ದಿನಕ್ಕೆ 5 ಲೀಟರ್ ನೀರು ಕುಡಿಯುತ್ತಾರೆ. ಚಳಿಗಾಲದ ದಿನಗಳಲ್ಲಿ ತಮ್ಮ ತಲೆಯ ಮೇಲೆ ಹೆಲ್ಮೆಟ್ ಹಾಕಿಕೊಂಡು ತಮ್ಮ ಶರೀರವನ್ನು ಬೆಚ್ಚಗೆ ಇಡಲು ಪ್ರಯತ್ನಮಾಡುತ್ತಾರೆ. ಬಹಳಷ್ಟು ಸಲ ಇವರು ತಮ್ಮ ಕೂದಲು ಹೆಚ್ಚಾಗಿ ಬೆಳೆದದ್ದನ್ನು ಕಂಡು ಅವುಗಳಿಗೆ ಬೆಂಕಿ ಹಚ್ಚಿ ಕೂದಲುಗಳು ಸಣ್ಣದಾಗಿ ಮಾಡಿಕೊಳ್ಳುತ್ತಾರೆ. ಇವರ ಜೀವನದಲ್ಲಿ ಏನೋ ನಡೆಯಬಾರದ ಘಟನೆ ಘಟಿಸಿದರಿಂದ ಈ ರೀತಿಯಾಗಿ ವರ್ತನೆ ಮಾಡುತ್ತಿದ್ದಾರೆ ಎಂದು ಅಲ್ಲಿಯ ಸ್ಥಳೀಯ ಜನರು ಹೇಳುತ್ತಾರೆ. ಇವರನ್ನು ಜಗತ್ತಿನ ಎಲ್ಲಕ್ಕಿಂತ ಹೊಲಸ್ಸು ಮನುಷ್ಯ ಎಂದು ಕರೆಯಲಾಗುತ್ತದೆ. ಆದರೆ ಅವರು ಇದರ ಕಡೆಗೂ ಸಹ ದುರ್ಲಕ್ಷ್ಯ ವಹಿಸುತ್ತಾರೆ.
