‘ಈ’ ಒಂದು ಕಾರಣದಿಂದಾಗಿ ಸಿಂಧೂತಾಯಿ ಸಪಕಾಳ ಅವರನ್ನು ಅಗ್ನಿಸಂಸ್ಕಾರ ಮಾಡುವದರ ಬದಲಾಗಿ ಸಮಾಧಿ ಮಾಡಲಾಯಿತು.
ಹಿರಿಯ ಸಮಾಜ ಸೇವಕಿ ಹಾಗೂ ಪದ್ಮಶ್ರೀ ಸಿಂಧೂತಾಯಿ ಸಪಕಾಳ ಅವರು ಎರಡು ದಿನದ ಹಿಂದೆ ಹೃದಯಾಘಾತದಿಂದ ನಿ#ಧನರಾಗಿದ್ದಾರೆ. ಎಷ್ಟೋ ಅನಾಥ ಮಕ್ಕಳ ತಾಯಿಯಾಗಿದ್ದ ಮಾಯಿಗೆ ಮೊನ್ನೆ ಸರ್ಕಾರ ಭಾವಪೂರ್ಣವಾಗಿ ಬೀಳ್ಕೊಡುಗೆ ನೀಡಲಾಯಿತು. ಪುಣೆಯ ಠೋಸರಪಾಗಾ ಸ್ಮಶಾನದಲ್ಲಿ ಅವರ ಅಂತ್ಯಕ್ರಿಯೆ ನಡೆಸಲಾಯಿತು. ಈ ಸಮಯದಲ್ಲಿ, ಶವಸಂಸ್ಕಾರದ ಬದಲಿಗೆ, ಅವರ ದೇಹವನ್ನು ಸಮಾಧಿ ಮಾಡಲಾಯಿತು. ಆದ್ದರಿಂದ ಅವರನ್ನು ಸಮಾಧಿ ಮಾಡಲು ಮುಖ್ಯ ಕಾರಣವೇನು ಎಂಬುದರ ಬಗ್ಗೆ ತುಂಬಾ ಚರ್ಚೆ ನಡೆಯುತ್ತಿದೆ.
ಸಿಂಧೂತಾಯಿ ಸಪಕಾಳ ಅವರು ಮಹಾನುಭಾವ ಪಂಥದ ದೀಕ್ಷೆ ತಗೆದುಕೊಂಡಿದ್ದಾರೆ. ಆದ್ದರಿಂದ, ಈ ಪಂಥದಲ್ಲಿ, ಸತ್ತ ನಂತರ ಸಮಾಧಿ ಮಾಡುವುದು ವಾಡಿಕೆ. ಸಿಂಧೂತಾಯಿ ಕೂಡ ತನ್ನ ಅಂತ್ಯಕ್ರಿಯೆಯನ್ನು ಪಂಥದ ಸಂಪ್ರದಾಯದಂತೆ ನಡೆಸಬೇಕೆಂದು ಬಯಸಿದ್ದರು. ಅದಕ್ಕಾಗಿಯೇ ಅವರ ದೇಹವನ್ನು ಸಮಾಧಿ ಮಾಡಲಾಯಿತು.

ನಿಧನದ ದಿನದಂದೇ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಸಿಂಧೂತಾಯಿ ಸಪಕಾಳ ಅವರ ಅಂತ್ಯಕ್ರಿಯೆಯಲ್ಲಿ ಸಮಾಧಿ ಮಾಡಲು ಸೂಚನೆ ನೀಡಿದ್ದರು. ಅಂತ್ಯಕ್ರಿಯೆಯ ವೇಳೆ ಶ್ರೀ ಚಕ್ರಧರ ಸ್ವಾಮಿಗಳ ನಾಮಸ್ಮರಣೆ ಹಾಗೂ ಶ್ರೀಮದ್ ಭಗವತ್ಗೀತೆಯ ಶ್ಲೋಕಗಳನ್ನು ಪಠಿಸಲಾಯಿತು.
ಮಹಾನುಭವ ಪಂಥದ ಸಂಸ್ಥಾಪಕರಾದ ಶ್ರೀ ಚಕ್ರಧರ ಸ್ವಾಮಿಗಳು ಖಡ್ಕುಳಿಯಲ್ಲಿ ನೆಲೆಸಿರುವಾಗ ಅಲ್ಲಿಯ ಒಬ್ಬ ಭಕ್ತನ ನಿಧನವಾಯಿತು. ಆಗ ಸ್ವಾಮಿ ಅವನನ್ನು ಸಮಾಧಿ ಮಾಡುವಂತೆ ಕೇಳಿಕೊಂಡರು. ಅಂದಿನಿಂದ, ಮಹಾನುಭಾವ ಪಂಥದಲ್ಲಿ ಈ ರೀತಿಯಾಗಿ ಅಂತ್ಯಕ್ರಿಯೆಯ ವಿಧಿಗಳನ್ನು ನಡೆಸಲಾಗುತ್ತದೆ. ಈ ವಿಧಿಯನ್ನು ‘ಭೂಮಿಡಾಗ್’ ಎಂದು ಕರೆಯಲಾಗುತ್ತದೆ. ಆದರೆ ಮಹಾನುಭಾವ ಪಂಥದಲ್ಲಿ ಸಮಾಧಿ ಮಾಡಿದ ನಂತರ ಆ ವ್ಯಕ್ತಿಯ ಗೋರಿಯ ನಿರ್ಮಾಣ ಮಾಡುವದಿಲ್ಲ.