Articles

ಕೊರೋನದಿಂದ ವಾಸಿಯಾಗಿ ಬಂದ ತಾಯಿಯನ್ನು ಮಗ ಮನೆಯೊಳಗೆ ಸೇರಿಸಲಿಲ್ಲ, ಆಗ ತಾಯಿ ಮಾಡಿದ್ದೇನು ಗೊತ್ತಾ? ಯಾವ ಅಮ್ಮನಿಗೂ ಇಂಥ ಪರಿಸ್ಥಿತಿ ಬಾರದಿರಲಿ

ಇದೊಂದು ಮನಕಲಕುವ ಘಟನೆ. ಕೊರೋನ ಎಂಬ ಹೆಮ್ಮಾರಿ ಬರೀ ಜೀವಗಳನ್ನಷ್ಟೇ ಅಲ್ಲ, ಸಂಬಂಧಗಳನ್ನೂ ಬ’ಲಿ ತಗೆದುಕೊಳ್ಳುತ್ತಿದೆ‌. ದೇಶದಲ್ಲಿ, ಅದರಲ್ಲೂ ನಮ್ಮ ರಾಜ್ಯದಲ್ಲಿ ಕೊರೋನ ರಣಕೇಕೆ ಹಾಕುತ್ತಿದೆ. ಪ್ರತಿದಿನ ನೂರರ ಲೆಕ್ಕದಲ್ಲಿ ಜನ ಸಾ’ಯು’ತ್ತಿದ್ದಾರೆ. ಆದರೆ ಅದೇ ಥರ ವೈದ್ಯರ ಶ್ರಮದಿಂದಾಗಿ ಬದುಕಿ ಉಳಿಯುವ ಜೀ’ವಗಳ ಸಂಖ್ಯೆ ಕೂಡ ಹೆಚ್ಚಿದೆ. ಈ ನಡುವೆ ಕೊರೋನದಿಂದ ಬದುಕುಳಿದರೂ ಮನೆಯಲ್ಲಿ ಆದ ಅವಮಾನ ಆ ತಾಯಿಗೆ ಬೇಸರ ತರಿಸಿತ್ತು.

ಈ ಘಟನೆ ನಡೆದಿರುವುದು ಹಾವೇರಿ ಜಿಲ್ಲೆಯಲ್ಲಿ. ಅಲ್ಲಿನ ದೇವಿಹೊಸೂರು ಎಂಬ ಗ್ರಾಮದ ವೃದ್ದ ಮಹಿಳೆ ಅಡಿವೆಕ್ಕ ಕಬ್ಬೂರು ಎಂಬುವವರಿಗೆ ಕೊರೋನ ಪಾಸಿಟಿವ್ ಆಗಿತ್ತು. ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಒಡೆದ ತಾಯಿ ಆ ವಯಸ್ಸಿನಲ್ಲೂ ಸಂಪೂರ್ಣ ಗುಣಮುಖರಾಗಿದ್ದರು. ಅಲ್ಲಿಂದ ಬಿಡುಗಡೆಯಾದ ಮೇಲೆ ಅವರ ಮಗಳು ದಾನೇಶ್ವರಿ ತಾಯಿಯನ್ನು ಅಟೋರಿಕ್ಷಾದಲ್ಲಿ ತನ್ನ ಅಣ್ಣನ ಮನೆ ಅಂದರೆ ತನ್ನ ತಾಯಿ ವಾಸವಿದ್ದ ಮನೆಗೆ ಕಳುಹಿಸಿದ್ದಾಳೆ.

ಆದರೆ ಮಗ ಪ್ರಭು ಹಾಗೂ ಆತನ ಹೆಂಡತಿ ಸಾವಿತ್ರಿ ಆ ತಾಯಿಯನ್ನು ಮನೆಯೊಳಗೆ ಕರೆದುಕೊಂಡಿಲ್ಲ. ನಿನಗೆ ಕೊರೋನ ಇದೆ, ಮನೆಯೊಳಗೆ ಬರಬೇಡ ಎಂದು ನಿಂದಿಸಿದ್ದಾರೆ. ಇದರಿಂದ ಮನನೊಂದ ತಾಯಿ ಅಲ್ಲಿ ಹೊರಟರೂ ಯಾರೂ ತಡೆದಿಲ್ಲ. ಮೇ ಎಂಟರಂದು ತಾಯಿ ಹೀಗೆ ಹೋಗಿದ್ದು ಮರಳಿ ಬಾರದ್ದರಿಂದ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿತ್ತು. ಆದರೆ ಎಷ್ಟು ಹುಡುಕಿದರೂ ತಾಯಿ ಸಿಗಲಿಲ್ಲ‌. ಯಾವ ಸಂಬಂಧಿಕರ ಮನೆಗೂ ಹೋಗಿರಲಿಲ್ಲ.

ಆದರೆ ಮಗ ಮತ್ತು ಸೊಸೆ ಮಾತಿನಿಂದ ಮನನೊಂದ ವೃದ್ದ ತಾಯಿ ಸೀದಾ ಹೋಗಿ ಹಾವೇರಿ ಹೊರವಲಯದ ಹೆಗ್ಗೇರಿ ಕೆ’ರೆಯಲ್ಲಿ ಹಾರಿ ಪ್ರಾ'”ಣ ಕಳೆದುಕೊಂಡಿದ್ದಾಳೆ. ಅಲ್ಲಿನ ಸ್ಥಳಿಯ ಮೀನುಗಾರರ ಕಣ್ಣಿಗೆ ಬಿದ್ದು ಅವರು ಪೊಲೀಸರಿಗೆ ತಿಳಿಸಿದಾಗ ಬಂದು ಪರಿಶೀಲನೆ ನಡೆಸಿ ಅದು ಎಂಬತ್ತು ವರ್ಷದ ಅಜ್ಜಿ ಅಡಿವೆಕ್ಕ ಎಂಬುದು ಗೊತ್ತಾಗಿದೆ.

ಮಹಾಮಾರಿ ಕೊರೋನದಿಂದ ಪಾರಾಗಿ ಬಂದರೂ ಅದಕ್ಕಿಂತಲೂ ಕ್ರೂರಿಯಾದ ಮನುಷ್ಯರ ಮಾತು ಆಕೆಯ ಜೀವ ಕಳೆದಿತ್ತು. ಹೆತ್ತ ತಾಯಿಯನ್ನು ಹೀಗೆ ದೂರವಿಡುವ ಇವರು ತಮ್ಮ ಮಕ್ಕಳಿಗಾದರೆ ಹೀಗೇ ಮಾಡುತ್ತಾರಾ? ವೈರಸ್ ಭಯವಿದ್ದರೆ ಕಡೆಪಕ್ಷ ಆ ಮುದುಕಿಗೆ ಕೆಲದಿನಗಳ ಮಟ್ಟಿಗೆ ಏನಾದರೂ ಪ್ರತ್ಯೇಕ ರೂಮ್ – ಗುಡಿಸಲು ವ್ಯವಸ್ಥೆ ಮಾಡಬಹುದಿತ್ತಲ್ಲವಾ?
-Team Infotrend

Leave a Comment

Your email address will not be published. Required fields are marked *