… ಈ ಕಾರಣದಿಂದ ಜೈನರು ಈರುಳ್ಳಿ ಮತ್ತು ಬೆಳ್ಳುಳ್ಳಿ ತಿನ್ನುವುದಿಲ್ಲ!
ಪ್ರತಿಯೊಂದು ಧರ್ಮವು ವ್ಯಕ್ತಿಗೆ ಆಯಾ ಧರ್ಮದ ಪ್ರಕಾರ ಜೀವನವನ್ನು ಸುಗಮವಾಗಿ ನಡೆಸಲು ಕೆಲವೊಂದು ಮಾರ್ಗದರ್ಶಕ ತತ್ವಗಳನ್ನು ಮತ್ತು ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಿಕೊಳ್ಳಲು ಹೇಳುತ್ತದೆ. ಇಂದು ಜಗತ್ತಿನಲ್ಲಿ ಅನೇಕ ಧರ್ಮಗಳು ಚಾಲ್ತಿಯಲ್ಲಿದೆ. ಪ್ರತಿಯೊಂದು ಧರ್ಮವು ಮನುಷ್ಯನಿಗೆ ಯಾವುದು ಸರಿ ಯಾವುದು ತಪ್ಪು ಎನ್ನುವುದನ್ನು ಹೇಳಿಕೊಡುತ್ತವೆ. ಮತ್ತು ಸಮಾಜದಲ್ಲಿ ಯಾವ ರೀತಿಯಾಗಿ ವರ್ತಿಸಬೇಕು ಎನ್ನುವ ನಿಯಮಗಳನ್ನು ಹೇಳಿಕೊಡುತ್ತದೆ. ಯಾವ ಕಾರ್ಯ ಒಳ್ಳೆಯದು ಯಾವುದು ಕಾರ್ಯ ಕೆಟ್ಟದು ಎಂಬುವುದನ್ನು ನಿರೂಪಿಸಿ ಕೊಡುತ್ತದೆ.
ಕೆಲವೊಂದು ರೂಡಿ ಪರಂಪರೆಗಳು ಒಂದು ಧರ್ಮದಲ್ಲಿ ಪವಿತ್ರವೆಂದು ತಿಳಿದರೆ, ಅದೇ ರೂಢಿ ಪರಂಪರೆಗಳು ಇನ್ನೊಂದು ಧರ್ಮದಲ್ಲಿ ಪವಿತ್ರವೆಂದು ತಿಳಿಯಲಾಗುತ್ತದೆ. ಇವುಗಳಲ್ಲಿ ವ್ಯಕ್ತಿ ತೊಟ್ಟುಕೊಳ್ಳುವ ಉಡುಪಿನಿಂದ ಹಿಡಿದು ತಿನ್ನುವ ಆಹಾರದ ವರೆಗೆ ಎಲ್ಲವೂ ಸಮಾವೇಶವಾಗುತ್ತವೆ. ಹೀಗಿದ್ದರೂ ಕೆಲವೊಂದು ವಿಷಯಗಳಲ್ಲಿ ಅನೇಕ ಧರ್ಮಗಳಲ್ಲಿ ಸಾಮ್ಯತೆಗಳು ಸಹಿತ ಕಂಡುಬರುತ್ತವೆ.
ಕೆಲವೊಂದು ಧರ್ಮಗಳಲ್ಲಿ ಆಹಾರದ ಬಗ್ಗೆ ತುಂಬಾ ಕಟ್ಟುಪಾಡುಗಳು ಇರುತ್ತವೆ. ಉದಾಹರಣೆಗಾಗಿ ಜೈನಧರ್ಮದಲ್ಲಿ ಆಹಾರದ ವಿಷಯ ಬಂದಾಗ ಈರುಳ್ಳಿ ಮತ್ತು ಬೆಳ್ಳುಳ್ಳಿಯ ಸೇವನೆಯನ್ನು ವರ್ಜಿಸಲಾಗಿದೆ. ಆಹಾರದಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ವರ್ಜಿಸುವ ಹಿಂದಿನ ನಿಜವಾದ ಕಾರಣವೇನು ಎಂಬುದರ ಬಗ್ಗೆ ಇಲ್ಲಿ ತಿಳಿದುಕೊಳ್ಳುವ.
ಆಯುರ್ವೇದದಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿಯ ಆಹಾರ ಸೇವನೆಗೆ ಮಹತ್ವವನ್ನು ಕೊಟ್ಟಿಲ್ಲ. ಆಯುರ್ವೇದದಲ್ಲಿ ಆಹಾರದ ಮೂರು ಪ್ರಕಾರಗಳನ್ನು ಹೇಳಲಾಗಿದೆ. ಆ ಮೂರು ಪ್ರಕಾರಗಳು ಕೆಳಗಿನಂತಿವೆ. 1. ಸಾತ್ವಿಕ 2. ರಾಜಸಿಕ ಮತ್ತು 3. ತಾಮಸಿಕ.
ನಾವು ಸೇವನೆ ಮಾಡುವ ಆಹಾರ ಪದಾರ್ಥಗಳ ಪರಿಣಾಮಗಳು ನಮ್ಮ ಸ್ವಭಾವದ ಮೇಲೆ ಮತ್ತು ನಡತೆಯ ಮೇಲೆ ಆಗುತ್ತವೆ. ಈರುಳ್ಳಿ ಮತ್ತು ಬೆಳ್ಳುಳ್ಳಿ ಸೇವನೆಗಳು ವ್ಯಕ್ತಿಯ ತಾಮಸಿಕ ಮತ್ತು ರಾಜಸಿಕ ಗುಣಗಳನ್ನು ವೃದ್ಧಿ ಮಾಡುತ್ತವೆ. ಇದರಿಂದ ವ್ಯಕ್ತಿಯಲ್ಲಿ ಕ್ರೋಧ, ಲೋಭ, ಮತ್ಸರ, ದ್ವೇಷ ಗಳಂಥ ತಾಮಸ ಗುಣಗಳು ಬೆಳೆಯುತ್ತವೆ.
ಇದರ ವಿರುದ್ಧವಾಗಿ ಸಾತ್ವಿಕವಾದ ಆಹಾರವನ್ನು ಸೇವಿಸುವುದರಿಂದ ಮನುಷ್ಯನ ಗುಣಗಳಲ್ಲಿ ವಿಚಾರಗಳಲ್ಲಿ ತುಂಬಾ ಒಳ್ಳೆಯ ಬದಲಾವಣೆಗಳು ಕಂಡುಬರುತ್ತದೆ. ಸಾತ್ವಿಕವಾದ ಆಹಾರವನ್ನು ಸೇವಿಸುವವರು ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಸಂಪೂರ್ಣವಾಗಿ ತ್ಯಜಿಸುವರು.
ರಾಮ ಮತ್ತು ಕೃಷ್ಣನ ಜಪ ಮಾಡುವ ವೈಷ್ಣವ ಸಮುದಾಯದ ಜನರು ತಮ್ಮಲ್ಲಿಯ ಆಧ್ಯಾತ್ಮಿಕ ಉನ್ನತಿಯು ಹೆಚ್ಚಾಗುವ ಸಲುವಾಗಿ ಸಾತ್ವಿಕ ಆಹಾರವನ್ನು ಸೇವಿಸುವುದಕ್ಕೆ ಪ್ರಾಧಾನ್ಯವನ್ನು ನೀಡುತ್ತಾರೆ. ಈ ಆಹಾರದಲ್ಲಿ ತಾಜಾ ಹಣ್ಣು, ತರಕಾರಿ, ಹಾಲು ಮತ್ತು ಹಾಲಿನಿಂದ ತಯಾರಾದ ಪದಾರ್ಥಗಳನ್ನು ಹಾಗೂ ಧಾನ್ಯಗಳಂತಹ ಪೌಷ್ಟಿಕವಾದ ಆಹಾರಗಳಿಗೆ ಹೆಚ್ಚು ಮಹತ್ವ ಕೊಡಲಾಗುತ್ತದೆ. ಜೀವನದಲ್ಲಿ ಬರುವ ಕಷ್ಟಗಳನ್ನು ದೂರಮಾಡಿಕೊಳ್ಳುವ ಸಲುವಾಗಿ ಮತ್ತು ಭಗವಂತನ ಪ್ರಾಪ್ತಿಗಾಗಿ ಅನೇಕ ರೀತಿಯ ವ್ಯಾಮೋಹಗಳನ್ನು ತ್ಯಾಗ ಮಾಡಬೇಕಾಗುತ್ತದೆ. ಅದರಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿಗಳಂತಹ ತಾಮಸ ಪದಾರ್ಥಗಳಿಂದ ದೂರವಿರಲು ಮೊದಲು ಆದ್ಯತೆ ನೀಡಲಾಗಿದೆ.
ದೇವರಲ್ಲಿ ಲೀನವಾಗಲು ಧ್ಯಾನವು ಒಂದು ಉತ್ತಮ ಮಾರ್ಗವಾಗಿದೆ. ಈರುಳ್ಳಿ ಮತ್ತು ಬೆಳ್ಳುಳ್ಳಿಯು ದೇಹದಲ್ಲಿ ಚೇತನಾ ಶಕ್ತಿಯನ್ನು ನಿರ್ಮಿಸಿ ಅದನ್ನು ಜಾಗೃತಗೊಳಿಸುವ ಕಾರ್ಯದಲ್ಲಿ ಅಡಚಣೆಯನ್ನುಂಟು ಮಾಡುತ್ತದೆ. ಧ್ಯಾನಾಸಕ್ತನಾದಾಗ ಮೆದುಳಿನ ಏಕಾಗ್ರತೆಗೆ ಭಂಗ ಉಂಟಾಗುತ್ತದೆ. ಹೀಗಾಗಿ ವ್ಯಕ್ತಿ ಧ್ಯಾನದಲ್ಲಿ ಅವಶ್ಯಕವಾದ ಏಕಾಗ್ರತೆಯನ್ನು ನಿರ್ಮಾಣ ಮಾಡುವಲ್ಲಿ ವಿಫಲವಾಗುತ್ತಾನೆ.
ಪಾಶ್ಚಿಮಾತ್ಯ ಚಿಕಿತ್ಸಾ ಪದ್ಧತಿಯಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿಯ ಅತಿಯಾದ ಸೇವನೆಯು ದೇಹಕ್ಕೆ ತುಂಬಾ ಹಾನಿಕಾರಕ ಪರಿಣಾಮಗಳನ್ನು ಉಂಟುಮಾಡುತ್ತದೆ ಎಂದು ತಿಳಿದುಬಂದಿದೆ. ಕಚ್ಚಾ ಬೆಳ್ಳುಳ್ಳಿಯ ಸೇವನೆಯಿಂದ ಶರೀರದಲ್ಲಿ ಬಾಟುಲಿಜಂ ವಿಷಾಣುವಿನ ವೃದ್ಧಿಯಾಗುತ್ತದೆ. ಈ ವಿಷಾಣುಗಳು ಅತಿಯಾಗಿ ದೇಹದಲ್ಲಿ ವೃದ್ಧಿಯಾದಲ್ಲಿ ಮನುಷ್ಯನ ಆರೋಗ್ಯವು ಕೆಡುವುದು. ಅಧ್ಯಾತ್ಮ ಮಾರ್ಗದಲ್ಲಿ ಪ್ರಗತಿಯನ್ನು ಆಶಿಸುವ ಬೆಳ್ಳುಳ್ಳಿ ಮತ್ತು ಈರುಳ್ಳಿಯ ಸೇವನೆಯನ್ನು ಸಂಪೂರ್ಣವಾಗಿ ತ್ಯಾಗ ಮಾಡಬೇಕು. ಏಕೆಂದರೆ ಇವುಗಳ ಸೇವನೆ ವ್ಯಕ್ತಿಯ ಮಜ್ಜಾ ಸಂಸ್ಥೆಯ ಮೇಲೆ ದುಷ್ಪರಿಣಾಮ ಬೀರುವುದು.
ಬೆಳ್ಳುಳ್ಳಿ ಮತ್ತು ಈರುಳ್ಳಿ ಯ ಅತಿಯಾದ ಸೇವನೆಯಿಂದ ಮನುಷ್ಯನಲ್ಲಿ ಕಾಮೋತ್ತೇಜನವು ಹೆಚ್ಚಾಗುವುದು. ಈರುಳ್ಳಿ ಸೇವಿಸಿದ ಕೆಲವೇ ಗಂಟೆಗಳಲ್ಲಿ ವೀರ್ಯ ನಿರ್ಮಾಣವಾಗುವ ಗತಿ ಹೆಚ್ಚಾಗುತ್ತದೆ. ಈರುಳ್ಳಿಯ ಪ್ರಭಾವ ನಮ್ಮ ರಕ್ತದಲ್ಲಿ ಇರುವವರೆಗೆ ನಮ್ಮಲ್ಲಿ ಕಾಮೋತ್ತೇಜನ ಹೆಚ್ಚಾಗಿರುತ್ತದೆ.
ಆಯುರ್ವೇದದ ಪ್ರಕಾರ, ಇನ್ನೊಂದು ಗಮನಿಸಬೇಕಾದ ಅಂಶವೇನೆಂದರೆ ಮಳೆಗಾಲದಲ್ಲಿ ಈರುಳ್ಳಿಯ ಉಪಯೋಗವನ್ನು ಆಹಾರದಲ್ಲಿ ಮಾಡಬಾರದು, ಒಂದು ವೇಳೆ ಮಾಡಿದರು ಸಹಿತ ಅತಿ ಕಡಿಮೆ ಪ್ರಮಾಣದಲ್ಲಿ ಮಾಡಬೇಕು. ಏಕೆಂದರೆ ಇದರ ಪರಿಣಾಮ ಪಚನ ಕ್ರಿಯೆಯ ಮೇಲೆ ಆಗುತ್ತದೆ. ಇದರಿಂದ ಅಜೀರ್ಣ ಮತ್ತು ಕಫದ ಸಮಸ್ಯೆ ಉಂಟಾಗುವವು. ಈ ರೀತಿಯ ಅನೇಕ ಕಾರಣಗಳಿಂದಾಗಿ ಕೆಲವು ಧರ್ಮಗಳಲ್ಲಿ ಹಾಗೂ ಆಧ್ಯಾತ್ಮಿಕ ಚಿಂತನೆಯನ್ನು ಮಾಡುವ ವ್ಯಕ್ತಿಗಳು ಈ ಎರಡು ಪದಾರ್ಥಗಳ ಸೇವನೆಯನ್ನು ಸಂಪೂರ್ಣವಾಗಿ ತ್ಯಾಗ ಮಾಡುತ್ತಾರೆ.
ಧಾರ್ಮಿಕ ಕಾರ್ಯಕ್ರಮಗಳಲ್ಲಿಯ ಆಹಾರ ಪದಾರ್ಥಗಳಲ್ಲಿ ಮತ್ತು ಕೆಲವು ವೃತ-ವೈಕಲ್ಯಗಳಲ್ಲಿಯೂ ಈರುಳ್ಳಿ ಮತ್ತು ಬೆಳ್ಳುಳ್ಳಿ ವಿರಹಿತ ಆಹಾರಪದಾರ್ಥಗಳನ್ನು ತಯಾರಿಸುವುದು ನಿಮ್ಮ ಗಮನಕ್ಕೆ ಎಷ್ಟೋ ಸಲ ಬಂದಿರಲೂಬಹುದು. ಮನಸ್ಸನ್ನು ಏಕಾಗ್ರತೆಯ ಕಡೆಗೆ ಕೊಂಡೊಯ್ಯುವ ಸಲುವಾಗಿ ಈ ರೀತಿಯ ಆಹಾರಗಳನ್ನು ತಯಾರಿಸುತ್ತಾರೆ. ದೈನಂದಿನ ಜೀವನದಲ್ಲಿಯ ಪ್ರತಿಯೊಂದು ವ್ಯವಹಾರವೂ ವ್ಯಕ್ತಿಯ ಮನಸ್ಸಿನ ಮೇಲೆ ಆಧಾರಿತವಾಗಿರುತ್ತದೆ. ಅದಕ್ಕಾಗಿ ಲಗಾಮಿಲ್ಲದ ಮನಸ್ಸನ್ನು ಹಿಡಿತದಲ್ಲಿಟ್ಟುಕೊಳ್ಳಲು ಇಂತಹ ಆಹಾರವನ್ನು ಸೇವಿಸುವುದು ತುಂಬಾ ಅತ್ಯಾವಶ್ಯಕವಾಗಿದೆ.