ಈ ಖದೀಮರ ಯೂನಿಕ್ ಕಳ್ಳತನದ ಮುಂದೆ ಹಳೆಯ ಕಳ್ಳತನದ ದಾಖಲೆ ಪುಡಿಪುಡಿ..! ಮೈ ಜುಮ್ ಎನ್ನಿಸುವ ವಿಡಿಯೋ.
ಸೋಶಿಯಲ್ ಮೀಡಿಯಾದಲ್ಲಿ ಈ ವರೆಗೆ CCTV ಫೂಟೇಜ್ ನಲ್ಲಿಯ ಮತ್ತು ಕ್ಯಾಮೆರಾದಲ್ಲಿ ಸೆರೆಯಾದ ಅನೇಕ ಕಳ್ಳತನಗಳನ್ನು ನೋಡಿರಬಹುದು. ಈ ಎಲ್ಲ ಕಳ್ಳತನಗಳನ್ನು ಮೀರಿಸುವ ತುಂಬಾ ಯೂನಿಕ್ ಕಳ್ಳತನ ಒಂದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಕಳ್ಳತನ ಮಾಡುವಾಗ ಜೀವಕ್ಕೆ ಎಳ್ಳಷ್ಟೂ ಮಹತ್ವವನ್ನೇ ನೀಡಿಲ್ಲ ಎಂಬುದು ತಿಳಿದುಬರುತ್ತದೆ.
ಕಳ್ಳತನ ಇದು ಒಂದು ಸಾಮಾಜಿಕ ಅಪರಾಧ. ಕಳ್ಳತನ ಮಾಡುವಾಗ ಸಿಕ್ಕರೆ ಫೈನ್ ಜೊತೆಗೆ ಜೈಲುವಾಸವೂ ಆಗುತ್ತದೆ. ಆದರೂ ಸಹ ಕಳ್ಳರು ಕಳ್ಳತನ ಮಾಡುವುದನ್ನು ಬಿಡುವುದಿಲ್ಲ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಕಳ್ಳತನದ ತುಂಬಾ ವಿಚಿತ್ರವಾದ ದೃಶ್ಯ ಓಡಾಡುತ್ತಿದೆ. ಈ ದೃಶ್ಯದಲ್ಲಿ ಕಳ್ಳತನ ಮಾಡುವವರ ಸ್ಟೈಲ್ ನೋಡಿದಾಗ ದೇಹ ಭಯದಿಂದ ಕಂಪಿಸುವುದು. ಜೀವಕ್ಕೆ ಇಲ್ಲಿ ಬೆಲೆಯೇ ಇಲ್ಲ, ಬರೀ ಕಳ್ಳತನ ಮಾಡುವುದೊಂದೇ ಆದ್ಯ ಕರ್ತವ್ಯ ಅಥವಾ ಗುರಿ ಎಂಬಂತಾಗಿದೆ. ಇದನ್ನು ಮಾಡುವಾಗ ಅಲ್ಲಿ ಜೀವ ಹೋದರೂ ಯಾರಿಗೂ ಪರವಾಗಿಲ್ಲ.
ಪ್ರಸ್ತುತ ವಿಡಿಯೋದಲ್ಲಿ ಕಂಡು ಬರುವ ದೃಶ್ಯ ನೋಡಿದಾಗ ಭಯದಿಂದ ಮೈನವಿರೇಳುತ್ತದೆ. ಒಬ್ಬ ಕಳ್ಳ ವೇಗವಾಗಿ ಚಲಿಸುತ್ತಿರುವ ಟ್ರಕ್ಕಿನ ಹಿಂದುಗಡೆ ಹತ್ತಿದ್ದಾನೆ. ಮತ್ತು ಒಳಗಿನಿಂದ ಚೀಲನ್ನು ಎಳೆದು ಹೊರಗೆ ಬಿಸಾಕುತ್ತಿದ್ದಾನೆ. ಇನ್ನೊಬ್ಬ ಟ್ರಕ್ಕಿಗೆ ಹಿಂದುಗಡೆಯಿಂದ ಬೈಕ್ ಮೇಲೆ ಫಾಲೋ ಮಾಡುತ್ತಿದ್ದಾನೆ. ಚೀಲವನ್ನು ಎಳೆದು ಹೊರಗೆ ಬಿಸಾಕಿದ ವ್ಯಕ್ತಿ ಅದೇ ವೇಗದಲ್ಲಿ ಹಿಂದಿನಿಂದ ಫಾಲೋ ಮಾಡಿ ಬರುತ್ತಿರುವ ಬೈಕ್ ಮೇಲೆ ಕುಳಿತುಕೊಳ್ಳುತ್ತಾನೆ. ಈ ದೃಶ್ಯವು ನೋಡಲು ತುಂಬಾ ಭಯಾನಕವೆನಿಸುತ್ತದೆ. ಕಾರಣ ಈ ಸಂದರ್ಭದಲ್ಲಿ ಟ್ರಕ್ಕಿನ ಡ್ರೈವರ್ ಅಕಸ್ಮಾತ್ತಾಗಿ ಯಾವುದೇ ಕಾರಣದಿಂದ ಸ್ವಲ್ಪ ಬ್ರೇಕ್ ತಾಗಿಸಿದರೂ ಕಳ್ಳರಿಬ್ಬರೂ ಹೋಗಿ ಟ್ರಕ್ಕಿಗೆ ವೇಗದಿಂದ ಅಪ್ಪಳಿಸುತ್ತಾರೆ. ಅಲ್ಲಿ ಕಳ್ಳರ ಜೀವವೂ ಹೋಗಬಹುದು ಅಥವಾ ಅಂಗವಿಕಲರು ಆಗಬಹುದು. ಈ ರೀತಿ ಇಬ್ಬರೂ ಕಳ್ಳರು ತಮ್ಮ ಜೀವವನ್ನು ಅಪಾಯದಲ್ಲಿ ಸಿಲುಕಿಸಿ ಕಳ್ಳತನ ಮಾಡುವುದು ಎಷ್ಟು ಸರಿ? ನೀವೇ ಹೇಳಿ. ಕಳ್ಳರು ಈ ರೀತಿಯಾಗಿ ತಮ್ಮ ಜೀವವನ್ನು ರಿಸ್ಕ್ ನಲ್ಲಿ ಹಾಕಿ ಕಳ್ಳತನ ಮಾಡುವ ದೃಶ್ಯವನ್ನು ಯಾರೋ ಒಬ್ಬರು ಕಾರಿನಲ್ಲಿ ಕುಳಿತು ಮೊಬೈಲ್ ನಿಂದ ಶೂಟ್ ಮಾಡಿಕೊಂಡಿದ್ದಾರೆ.
Chor chor… 😱 pic.twitter.com/9rqgkZL8eV
— The Dreamer (@The_Drea_me_r) May 31, 2022
ಪ್ರಸ್ತುತ ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ಆದ ಟ್ವಿಟರ್ ನಲ್ಲಿ The dreamer ಹೆಸರಿನ ಅಕೌಂಟ್ ನಿಂದ ಶೇರ್ ಮಾಡಲಾಗಿದೆ.