Articles

20 ಅಡಿಗಳ ಮೇಲಿಂದ ಜಿಗಿದು ಬೇಟೆಯಾಡಿದ ಚಿರತೆ ! ಅಮಾಯಕ ಜಿಂಕೆಯ ಮೇಲೆ ಆಕಾಶದಿಂದ ಎರಗಿದ ಸಾವು; ವಿಡಿಯೋ ಸಖತ್ ವೈರಲ್…

ವೇಗ ಮತ್ತು ಬೇಟೆಯಾಡುವುದರಲ್ಲಿ ಚಿರತೆಗೆ ಸ್ಪರ್ಧೆ ನೀಡುವ ಪ್ರಾಣಿಗಳು ಬೇರೊಂದಿಲ್ಲ. ಅದರ ದೇಹದ ರಚನೆಯು ಸಹ ಬೇಟೆಯಾಡುವ ಸಲುವಾಗಿ ಹೇಳಿ ಮಾಡಿಸಿದಂತಿದೆ. ಬೇಟೆಯಾಡುವ ಮುನ್ನ ಅದು ತೆಗೆದುಕೊಳ್ಳುವ ತಯಾರಿ ಭರ್ಜರಿಯಾಗಿರುತ್ತದೆ. ತಾನು ಇಲ್ಲಿ ಅವಿತು ಕುಳಿತಿದ್ದೇನೆ ಎನ್ನುವ ಗುರುತು ಸಹ ಬೇಟೆಗೆ ಹತ್ತುವುದಿಲ್ಲ. ಈ ಪ್ರಾಣಿಯ ಹತ್ತಿರ ಸಾಕಷ್ಟು ಸಂಯಮ ಇರುತ್ತದೆ. ಬೇಟೆಯು ಎಲ್ಲಿಯವರೆಗೆ ತನ್ನ ಹಿಡಿತದಲ್ಲಿ ಬರುವದಿಲ್ಲ, ಅಲ್ಲಿಯವರೆಗೆ ಕಾಯ್ದು ಕುಳಿತುಕೊಳ್ಳುವ ಸಂಯಮ ಮತ್ತು ಶಕ್ತಿ ಈ ಚಿರತೆ ಹೊಂದಿದೆ.

ಈಗ ನೋಡುವ ವೈರಲ್ ವಿಡಿಯೋದಲ್ಲಿ ಚಿರತೆಯ ಇದೇ ರೂಪ ಕಂಡುಬಂದಿದೆ. ಚಿರತೆಯು ಎತ್ತರದ ಮರ ಒಂದರ ಮೇಲೆ ಬೇಟೆಗಾಗಿ ಅವಿತು ಕುಳಿತಿದೆ. ಮರದ ಕೆಳಗೆ ನೆರಳಿನಲ್ಲಿ ಜಿಂಕೆಗಳು ಯಾವುದೇ ಭಯವಿಲ್ಲದೆ ರಿಲ್ಯಾಕ್ಸ್ ಆಗಿ ನಿಂತಿವೆ. ಕಾರಣ ತಮ್ಮನ್ನು ಬೇಟೆಯಾಡುವ ಯಾವುದೇ ಪ್ರಾಣಿ ತಮ್ಮ ಹತ್ತಿರ ಅಥವಾ ಸುತ್ತಮುತ್ತ ಇಲ್ಲವೆಂದು ಪಕ್ಕಾ ಖಾತರಿಪಡಿಸಿಕೊಂಡಿವೆ. ಆದರೆ ಮುಗ್ಧ ಜಿಂಕೆಗಳಿಗೇನು ಗೊತ್ತು, ಯಮರಾಜನು ಚಿರತೆಯ ರೂಪದಲ್ಲಿ ನೆತ್ತಿಯ ಮೇಲೆಯೇ ಕುಳಿತಿದ್ದಾನೆಂದು.

ಬೇಟೆಯನ್ನರಸಿ ಕುಳಿತ ಚಿರತೆಯು ಸುಮಾರು 18 ರಿಂದ 20 ಅಡಿಗಳ ಎತ್ತರದ ಮರದ ಮೇಲಿಂದ ನೇರ ಚಿರತೆಯ ಮೇಲೆಯೇ ಜಂಪ್ ಮಾಡಿದೆ. ಚಿರತೆಯ ಈ ರೀತಿಯ ಬೇಟೆಯನ್ನು ಇಲ್ಲಿಯವರೆಗೆ ನೀವೆಂದೂ ನೋಡಲಿಕ್ಕಿಲ್ಲ. ಚಿರತೆಯು ಅಡಗಿ ಕುಳಿತು ಬೇಟೆಯಾಡುವುದರಲ್ಲಿ ಚಪಲವಾಗಿದೆ. ತಾನು ಬೇಟೆಯಾಡಿದ ಪ್ರಾಣಿಯನ್ನು ಹೆಚ್ಚಾಗಿ ಮರದ ಮೇಲೆ ಹೊತ್ತುಕೊಂಡು ಹೋಗಿ ಭಕ್ಷಿಸುತ್ತದೆ. ಆದರೆ ಈ ಬಾರಿ ಮರದ ಮೇಲೆ ಸಜ್ಜಾಗಿ ಕುಳಿತು ಬೇಟೆಯಾಡಿದೆ. ಈ ಅದ್ಭುತವಾದ ದೃಶ್ಯವನ್ನು ಕ್ಯಾಮೆರಾದಲ್ಲಿ ಸೆರೆಹಿಡಿದ ಕ್ಯಾಮೆರಾಮೆನ್ ನ ಪರಿಶ್ರಮಕ್ಕೂ ಧನ್ಯವಾದಗಳನ್ನು ತಿಳಿಸಬೇಕು, ಅಷ್ಟೊಂದು ವಿಶೇಷವಾದ ದೃಶ್ಯ ಇದಾಗಿದೆ.

ನೋಡಿ ಈ ವಿಡಿಯೋ…

 

View this post on Instagram

 

A post shared by Wildlife Stories (@wildlife_stories_)

ಈ ವೀಡಿಯೋವನ್ನು ವೈಲ್ಡ್ ಲೈಫ್ ಸ್ಟೋರೀಸ್ ಹೆಸರಿನ ಇನ್ಸ್ಟಾಗ್ರಾಮ್ ಅಕೌಂಟ್ ನಿಂದ ಶೇರ್ ಮಾಡಲಾಗಿದೆ. ಈ ವೀಡಿಯೋವನ್ನು ಇಲ್ಲಿಯವರೆಗೆ ಲಕ್ಷ ಲಕ್ಷ ಜನರು ನೋಡಿದ್ದಾರೆ ಮತ್ತು ಲೈಕ್ಸ್ ಗಳನ್ನು ಸಹ ಮಾಡಿದ್ದಾರೆ.

Leave a Comment

Your email address will not be published. Required fields are marked *